ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಕೋಗಿಲೆ, ಜೂನ್ ೧೯೧೮. (ನಾನು ನಾನು) ಎಂದು ಮರು ಮಾತುಗೊಟ್ಟಿತು. ಆಗ ಎಚ್ಚರಿತ ದನ ವೊಂದು ಹುಂ ಮಾ' (ಹುಂ, ಬೇಡ) ಎಂದು ಕೂಗಿ ಹೇಳಿತು, ಒರನೆ ಕರು (ಅಂಬೇ' (ಅಮಾ, ಏನು?) ಎಂದು ಕೇಳಿತು.. ಕೂಡಲೆ (ಆಂ, ಮಾ. (ತಾಳು, ಸೌಭಾಗ್ಯ ದೇವತೆಯಾದ ಲಕ್ಷ್ಮೀದೇವಿಯ ಪ್ರಕಾಶವು, ಬೇಗನೆ ತಲೆದೋರುವುದು) ಎಂದು ಹೇಳಿತು. ಹೀಗೆ ನಾನಾ ಸಂಜ್ಞೆಯ ಪ್ರಸ್ಕೋ ತರಗಳು ಅಸ್ಪಷ್ಟವಾಗಿ ನಡೆಯುತ್ತಿದ್ದುವು. ಹೀಗಿರುವಾಗ, ಕತ್ತಲೆ ಮನೆ ಸಾಲುಗಳನ್ನು ಹೊಕ್ಕು, ಪರೀಕ್ಷಿಸತೊಡಗಿತು. ಬಹಳ ಮಂದಿ, ನಿದ್ರಾ ಸಮಾಧಿಯಲ್ಲಿ ಮೈಮರೆತು, ತಮ್ಮ ನೆಡುನೋಟದಲ್ಲೆ ಇದ್ದರು, “ಮಹಾ ಜನೋ ಯೇನಗತಸ್ಸಪಂಥಾ:' ಎಂಬ ಮೂಢಭಕ್ತಿಯವರಲ್ಲಿ ಕೆಲವರು ಮಾತ್ರ ಆ ದಾರಿತಪ್ಪಿ ಅತ್ತಿತ್ತ ನೋಡುತ್ತಿದ್ದರು. ಆದರೂ, ಕತ್ತಲೆಗೆ, ಹಲವರನ್ನು ತನ್ನ ದಾರಿಗೆ ಎಳೆಯಲಾಗಲಿಲ್ಲ. ಹಾಗೆಂದು ಕೆಲವರು ಮಾತ್ರ ಅದರ, ಬಲೆಗೆ ಬಂದಿಗಳಾಗದೆಯೂ ಇರಲಿಲ್ಲ, ಭೂಕಲ್ಪವೃಕ್ಷವಾದರೂ ತೆಂಗಿನ ಮರವು, ತಲೆಯಲ್ಲಿ ಹೊತ್ತು ಸಾಕಿದುವುಗಳೆಲ್ಲ ಫಲಗಳೂ ಎಳೆ ನೀರಿಂದ ತುಂಬಿರುವುವೆ? ಕೆಲವು ಬೋಡಾಗಿ ಬರಿಗತ್ತಲೆಯಿಂದಲೆ ತುಂಬಿ ರುತ್ತವೆಯಲ್ಲ ವೆ? ಕೆಲವು ದುಷ್ಟರು ಎಚ್ಚರಿಕೆಯಿಂದಿದ್ದರು. ಕತ್ತಲೆ ಅವರ ಬಳಿಸಾರಿತು, ತಾತ್ಕಾಲಿಕವಾದ ಸತ್ಕಾರಗಳೆಲ್ಲವೂ ಕಳೆದುವು.] ಕತ್ತಲೆ:- ಪ್ರಿಯರೆ, ಹೇಗೆ, ಸರ್ವಸಮದೃಷ್ಟಿಯ ಕಾಲನ ದಯದಿಂದ ನಿಮಗೆ ಲ್ಲರಿಗೂ ಸುಖವೆ? ಈ ಪ್ರಶ್ನೆಗೆ, ಏನೆಂದು ಉತ್ತರಗೊಡಲಿ? ಮೇಲಾಗಿ, ಸರ್ವಾಧಾರ ನಾಗಿರುವ ಈ ಕಾಲವನ್ನು ಸಮದೃಷ್ಟಿಯವನೆಂದು ಹೇಳುತ್ತಿರುವೆ. ನೀನೇನೆ ಅವನ ದಯಕ್ಕೆ ಪಾತ್ರಳಾದರೂ, ನಾವೂ ಆ ಸುಖಕ್ಕೆ ಆಸ್ಪದರೆಂದಣಿ ಸುವುದು, ಬಾನಿನ ಬಳ್ಳಿಯೆ ಸರಿ. ಕತ್ತಲೆ:- ಅದೇನು ? ಕಾಲನು, ಸರ್ವಾಶ್ರಯನಾದರೂ, ಪ್ರಯತ್ಯಾನುಸಾರ ವಾಗಿಯೆ ಫಲವನ್ನು ಒದಗಿಸುವುದು, ಅವನ ರೀತಿ, ನೀವಾದರೂ, ಪ್ರಯತ್ನಿಸುತ್ತಿದ್ದಿರಬಹುದೆಂದು ನನ್ನ ಎಣಿಕೆ ಇತ್ತು. ಹಾಗೆ ಕೈಯನೆ ಹಾಕದೆ ಕಹಿಯೆನ್ನುವುದು ಚೆನ್ನಾಗಿಲ್ಲ.