ಈ ಪುಟವನ್ನು ಪರಿಶೀಲಿಸಲಾಗಿಲ್ಲ.

98 ಹನುಮದ್ರಾಮಾಯಣ, ಮ್ಯಾನದ ವಿಭೀಷಣಗೆ ಕರು || ಣಾನಿಧಿ ಪಟ್ಟಾಭಿಷೇಕಮಂ ನಡೆಯಿಸಿದಂ || ೨ | ಅದುಮಲ್ಲದೆ ದನುಜಂ ದಶ | ವದನಂ ತೈಲಾಂಗನಾಗಿ ನಿರ್ವಾಣದೊಳಂ || ಕೆದರ್ದಲೆಯಿಂ ಕಳೆಯನೇ | ರ್ದುದನುಂ ಯಮದಿಶೆಯನೆಯ್ದಿ ದುದನುಂ ಕಂಡೆಂ || ೧೩ | ಕಳೆವೆರೆ ಕಂಡೆಂ ಸೀತಾ || ಲಲನೆಯನಾ ರಾಮನಂಕದೊಳ್ ಮೆರೆವವಳಂ || ನಲವಿಂ ಕೂಡಿರೆ ತಮ್ಮಯೆ | ಪೊಳಲ್ಲಂ ನಿಜನಾಧನೊಡನೆ ಪೋಪಳನೆಂದಳ್ fi ೧೪ | ದನುಜೆಯರೆಲ್ಲರ್ತ್ರಿಜಟೆಯ || ಕನಸಂ ನೆನೆಯುತ್ತೆ ಭೀತಿಗೊಂಡಿರಲಾಗಳ್ | ಮನಗುಂದುತೆ ಸೀತಾಮಾ | ನಿನಿ ದುಃಖಂಗೆಯ್ಯುತಿರ್ದ್ದಳದನೇವೇಳ್ತಂ। || ೧೫ | ರವಿಯುದಯಮಾಗೆ ಮಜ್ಜಿ | ವವನುಳಿಸರ್‌ ಘೋರದಾನವಿಯರಿನ್ನಾಂ ರಾ || ಘವನಂ ಬಿಟ್ಟ ರಾಕ್ಷಸ || ನಿವಹದೊಳಂ ಜೀವಿಸಿದ್ದೊಡೇಂ ಫಲಮಿರ್ಕ್ಕು೦ | ೧೬ | ಇನಕುಲಭವರೇನಾದರೊ || ತನಗಾ ವಾರ್ತೆಗಳನೈದೆ ತಂದವರಾರೋ || ದನುಜಾಧಮನುಪಟಳದಿಂ | ತನುವು ನೀಗುವುದೆ ಸುಹಿತಮೆನಿಪುದು ನೋಡಲ್ II ೧೭ | ಮರಣನಿಮಿತ್ತದೆ ತನಗರಿ | ಪರಿರಂಭಿಪ ದೀರ್ಘವೇಣಿಯಿರ್ವುದುಮದರಿಂ ! ಕೊರಲಂ ಬಂಧಿಸಿ ಪರಣಮ | ನರಸಂಗೊಪ್ಪಿಸುವೆನೆಂದು ಯೋಚಿಸಿ ನಿಂದಳ್ || ೧೧೮ | ಶ್ರೀರಾಮರಾಮ ಎನುತುಂ | ಧಾರಿಣಿಸುತೆ ವೃಕ್ಷಶಾಖೆಯಂ ಸಾರಂ || ಮಾರುತಿ ಕಂಡು ಸುಧಾರಸ | ಪೂರಿತಮೃದುವಾಣಿಯಿಂದೆ ಮೆಲ್ಲನೆ ನುಡಿದಂ | | ೧೧೯ !