114 ಹನುಮದ್ರಾಮಾಯಣ. ತನುಗಂ ಸೊಂಕಿಸೆ ಬೆಚ್ಚಿFದೊ | ಅನಿಲಭವಂ ನೆಗೆದು ಲೋಹರಥದೊಳ್ಳುಳಿತಂ || ೫೦ | ದಿಗ್ಗಜಸನ್ನಿಭಕರಿಗಳ | ನಗ್ಗಳಮೆನೆ ರಥಕೆ ಕಟ್ಟಿ ದನುಜರ್ಸಕಲರ್ || ಸಗ್ಗಿ ಗರಚ್ಛರಿವಡುತಿರೆ | ಯಗ್ಗಳನಂ ತಂದರಧಿಕಸಾಹಸದಿಂದಂ | ೫೩ || ಕೆಲಬಲದ ಕೇರಿಕೇರಿಯ | ನಿಳಯಗಳಂ ಚಾರುಗೋಪುರಗಳಂ ಸೌಧಾ || ವಳಿಯಂ ಕೆಡವುತ ಬಂದುದು | ಕಲಿಹನುಮನ ಕಾಯಚಲನದಿಂದಂ ಶಕಟಂ | ೫೪ | ಮೊರೆವ ಮಹಾತರ್ಯದ ರವ | ಮುರುಭಟರುಬ್ಬಟೆಯುಮಂತು ರಥಚೀತ್ಕಾರಂ | ತುರಗದ ಹೇವಾಧ್ವನಿ ತ | ತುರಮಂ ತೀವಿದುದು ಭೂಮಿ ಬಿರಿವ ವೊಲಾಗಳ್ | ೫ | ನಿಲಿಸಿ ಮಹಾರಥಮಂ ದಶ | ಗಳನಾಲಯದೆಡೆಯೊಳಸುರರಾ ಮಾರುತಿಯಂ || ಕೆಲಕಿಟ್ಟರ್ ಮಂದರಮಂ | ಜಳಧಿಯೋಳಂದಮರದೈತ್ಯರಿಟ್ಟ ವೊಲಂದುಂ | `೫೬ | ಬಂಧುರಪೀಠದೊಳಂ ದಶ | ಕಂಧರನೊಪ್ಪಿರ್ದ ಸಮಯಮಂ ನೋಡುತ ಸಂ || ಕ್ರಂದನರಿಪು ಪವನಜನಂ | ತಂದಾತನ ಮುಂದು ನಿಂದು ಕಯ್ಯುಗಿದೆಂದಂ | ೫೭ || ವನಮಂ ಭಂಗಿಸಿ ದೇವರ | ತನುಜನನುಂ ದಾನವಾಳಿಯಂ ನೆರೆಕೊಂದಾ || ವನಚರಮಿದು ವಿಧಿಶರದಿಂ | ದನುಬಂಧಿಸಿ ತಂದೆನೆಂದು ವಿಜ್ಞಾಪಿಸಿದಂ | ೫ರ | ವನಜಭವಾಂ ತನಗೇ | ಘನ ಮೇ ಲೌಕಿಕಮನಿಂದು ನಡೆಯಿಸುವೆಂ ತಾ | ನೆನುತಂ ಮೌನದೊಳಿದ್ದ Fo | ದನುಜೇಶ್ವರನಿದಿರೊಳನಿಲಸಂಭವನಾಗಳ 1 ೫೯ |
ಪುಟ:ಹನುಮದ್ದ್ರಾಮಾಯಣಂ.djvu/೧೨೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.