ಸಪ್ತಮಾಶ್ವಾಸ. 139 ತೆತ್ತಿದ ನೆತ್ತಿಯೋಳತ್ತಲ್ | ವೆತ್ತಮದಾಗುತ್ತಿರಕ್ಕೆ ಸೇಟ್ಠಂ ರಾಮಂ | ೯೭ || ಬೇಡುವೆನಬಿ ಯನಧ್ವಂ | ಗೂಡೆ ನಿರಾಕರಿಸಿ ದಾರಿಗುಡದಿರೆ ಬಳಿಯಂ || ಮಾಡುವೆನುರುಯತ್ನ ಮನೆ | ದಾಡಿ ಕುಶಾಸ್ಕರಣದಲ್ಲಿ ಕುಳಿತಂ ರಾಮಂ | ೯೮ {| ಮೂರುಂ ದಿನಮುಂ ಚಿತ್ತದೆ | ವಾರಿಧಿಯಂ ಧ್ಯಾನಿಸುತ್ತಮಿರ್ದೊಡಮುಂ ಮೆ |! ಯೋರದಿರಲ್ ಕಣ್ಣೆರೆದುಂ | ಭೋರೆನೆ ಲಕ್ಷಣನನೀಕ್ಷಿಸುತ್ತಿಂತೆಂದಂ || ೯೯ !! ಶರಧಿಯ ಗರ್ವಮನೀಗಳೆ | ಮುರಿವೆಂ ನೋಡೆನುತೆ ಚಾಪಶರಮಂ ಕಯ್ಯೋಂ || ಡುರುತರಕೊಪದೊಳಂಬಂ | ತಿರುವಿಗೆ ತುಡಿಸಿ ವಾರ್ಧಿ ನಡುಗಿದನಾಗಳ್ || ೧೦೦ |! ಪುರುಷಾಕೃತಿಯಿಂ ಮಂಜುಳ | ವರರಾವಳಿಯನೈದೆ ಕಾಯನಿತ್ತು || ಶರಣಾಗತರಕ್ಷಣಚಣ | ಪೊರೆಯೆಂದಡಿಗಳೆ ಮಣಿದು ಕಯ್ಯುಗಿದೆಂದಂ || ೧೦೧ || ಜಡದೇಹಿಯೆಂಬುದಂ ನಿ | ಮ್ಮಡಿ ಬಲ್ಲುದು ಕೃಪೆಯೊಳೆನ್ನನುಳಿಸಲ್ವೆಳ್ಳುಂ || ಕುಡುವೆ ಬಟ್ಟೆಯನಮರರ | ಬಡಗಿಯ ಮಗನದ್ರಿತರುಗಳಿಂ ಕಟ್ಟಲೊಡಂ || ೧೦೦ || ಶರಮಿದಮೋಘಂ ತೋರಾ | ಗುರಿಯಂ ತಾನಲ್ಲಿಗಟ್ಟುವೆಂ ಬಾಣಮನೆಂ || ದರವಿಂದಾಂಬಕನೆನೆ ಸಾ | ಗರನುರೆ ಬೆದರುತ್ತೆ ಪೇಳನಾ ರಾಮನೊಳಂ || ೧೦೩ | ದ್ರುಮಕುಲ್ಯದೊಳಂ ಬಾಧಿಪ | ರಮಿತಮಹಾದುಷ್ಟರೆನ್ನನಲ್ಲಿಗೆ ತದ್ವಾ || ಣಮನೆಯ್ಲಿ ಪುದೆನೆ ರಾಘವ | ನಮಲಾಸ್ತ್ರಕೆ ನೇಮಮಿತ್ತನತಿವೇಗದೊಳಂ | ೧೦೪ |
ಪುಟ:ಹನುಮದ್ದ್ರಾಮಾಯಣಂ.djvu/೧೪೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.