144 ಹನುಮದ್ರಾಮಾಯಣ. ಸಮರದೊಳತಿ ಸಾಹಸಿಗಳ್ || ರುಮಪನಸರುಮಣ್ಯರಂಭದಧಿಮುಖಧಮ್ರರ್ || ಸುಮುಖಗಜಗಂಧಮಾದನ | ರಮಿತಪರಾಕ್ರಮಿಗಳಿವರನೀ ಪುದರಸಾ || ೧೩೫ | ಇವರಂ ನೋಡಯ್ ಮೈಂದ | ದ್ವಿವಿದ ಕ್ಷೀರಾಬ್ಧಮಧನದೊಳುರಸುಧೆಯಂ || ಸವಿದವರಿವರಿದಿರೊಳ್ ಸೆಣ | ಸುವರಂ ದೈತ್ಯರೊಳೆ ಕಾಣೆನಸುರೋತ್ತಂಸಾ | ೧೩೬ | ಈತನನೀಕ್ಷಿಪುದಮ್ ಪುರು | ಹೂತನ ಮುಮ್ಮಂ ಬಲಿಷ್ಠನಕುಟಿಲಕುಶಲಂ || ತಾತನಿನಧಿಕಂ ರಿಪುಘನ | ವಾತ೦ ಯುವರಾಜನಂಗದ || ೧೩೭ | ಜನಿಸಿದ ಮಾತ್ರಂ ರವಿಯಂ | ತಿನುವೆಂ ತಾನೆಂದು ನಭಕೆ ಪಾಯ್ತುಂ ಕಮಲಾ || ಸನಹರಿಶಂಕರರಿಂ ಪಾ | ವನವಜಶರೀರಿಯಾದ ಹನುಮಂತನಿವಂ | ೧೩೮ || ಮುರಿದುಪವನಮಂ ಲಂಕಾ | ಪುರಕಗ್ನಿಯನಿಕ್ಕಿ ದೈತ್ಯಕುಲಮಂ ಸದೆದುಂ || ಭರದಿಂದೆ ಪೋಗಿ ಭೂಮಿಾ | ಶ್ವರನಂ ಕರೆತಂದ ಶೌರ್ಯಯುತನೀತನಲಾ || ೧೩೯ || ಈತನ ಸಾಹಸಮಂ ನೀ || ನೇತಿಳಿದಯ್ ಬಣ್ಣಿಸಿ ಸಾಧ್ಯವೆ ನಗಜಾ || ನೇತಾಂಶೀಭೂತಂ ಪರಿ | ಪೂತಾತ್ಮಕನಿವನ ಮುಂದೆ ನಿಲ್ವವನಾವಂ || ೪ಂ || ಈತನಲಾ ರವಿಜಂ ರಘು | ನಾಥನ ಸಖನಪ್ಪ ವಾನರೇಂದ್ರಂ ಶೂರಂ || ಪಾತಾಳತ್ರಿದಶಾಲಯ | ಭೂತಳಗಳೊಳಿವನ ಶೌರ್ಯಕಿನ್ನಿದಿರುಂಟೇ. | ೧೪೧ 8 ಉರುತರಶರಚಾಪಗಳಂ | ಧರಿಸುತೆ ಫಣಿನಾಥನಂತೆ ಮೊರೆವಂ ವರಭೂ ||
ಪುಟ:ಹನುಮದ್ದ್ರಾಮಾಯಣಂ.djvu/೧೫೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.