164 ಹನುಮದ್ರಾಮಾಯಣ, ಭವಿಸಿತು ದಶಶಿರಗಂ ಭಯ | ಮವಲೋಕನಮಾತ್ರದಿಂದ ಮನದೊಳಗಾಗಳ್ || ೩೭ | ವಾಲಾಸನಮಂ ಗೆಯ್ದು ನಿ || ರಾಲಸ್ಯಂ ಸಭೆಯೊಳಿಳಿದು ಸುಮ್ಮಾನದೊಳಂ || ವಾಲಿಜನಿರೆಯಿರೆ ರಾಕ್ಷಸ | ಮೌಲಿಯ ಸಚಿವ ಪ್ರಹಸ್ತ್ರನೊಯ್ಯನೆ ಕೇಳ್ಳಂ | ೩೮| ನೀನಾರವನೆಮ್ಮ ಸಭಾ || ಸ್ಥಾನಕ್ಕೆಳಂದ ಕಜ್ಜಮಾವುದು ಪೆಸರೇಂ || ವಾನರ ನಿನಗಾಪ್ತರದಾ | ರೀ ನಗರದೊಳ್ಳೆದೆ ಮಾಂಜದುಸಿರಯ್ ಭರದಿಂ || ೩೯ || ದುರುಳತನದಿಂದೆ ಮೊದಲೀ | ಪುರಕಂ ಕಪಿಯೊಂದು ಬಂದು ನಿಜವಾಲಧಿಯಂ || ಉರಿಪಿಸಿಕೊಂಡೊಡಿದುದದ | ನರಿಯದೆ ನೀನೇಕೆ ಬಂದೆ ರಾಜಾಲಯಕಂ | ೪೦ || ಜೀವಾಭಿಲಾಷೆಯುಳ್ಳವ || ರೀ ವಸುಧೆಗೆ ಬರ್ಪ್ರೊಡಂಜುವರ್ ನಿನಗಂ ತಾ | ನಾವೊಂ ಬೋಧಿಸಿ ಕಳಿಸಿದ | ನೀ ವಿವರಮನುಸಿರ್ಗುಮೆಂದೊಡಂಗದನೆಂದಂ | ೪ಂ || ಲೇಸಯ್ ಕೇಳ್ಳಿ ವಚನವಿ | ಲಾಸಂ ನೀಂ ಪ್ರೌಢನಿ ರಾಕ್ಷಸಸಭೆಗಿಂ || ದಾಸುರವರನಂ ನೋಳ್ಳಭಿ | ಲಾಷೆಯೂಳೆಯ್ತಂದೆನವನನೆನಗು ತೋರಾ || ೪೨ | ಮೂರಯ್ದು ನಾಲ್ಕುಪತ್ತರ | ಮೋರೆಯರಿಲ್ಲಿಪ್ಪFರಿವರೊಳವನೀಸುತೆಯಂ || ಚೋರತ್ವದಿಂದೆ ಯತ್ಯಾ | ಕಾರಂದಳೆದುಯ್ದು ತಂದ ರಕ್ಕಸನಾವೊಂ | ೪೩ | ಕೇಳಲಾರೆಂಬೆ ನಿ | ನ್ಯಾಳಿದನನುಜಾತರಪ್ಪ ಖರದೂಷಣರಂ | ಕಾಳನ ಪುರಕಟ್ಟಿದ ಕರು | ಣಾಳಯನಂ ಕೇಳರುಂಟೆ ತಾನವನ ಚರಂ { ೪೪ |
ಪುಟ:ಹನುಮದ್ದ್ರಾಮಾಯಣಂ.djvu/೧೬೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.