156 ಹನುಮದ್ರಾಮಾಯಣ. ನ್ಯಾತಗಳೊರೆದುಂ ಕಲಿಸಿದ ! ಮಾತಂ ಬಿನ್ನವಿಸಿ ಪೋಪುದೆಂದಂ ಸಚಿವಂ || ೫೨ | ಎನೆ ಗಹಗಹಿಸುತ್ತುಂ ರಾ | ವಣನಂ ತವೆನೋಡುತಂಗದಂ ತಾನೆಂದಂ || ದನುಜಾಧಮ ನೀನೇಂ ಧರೆ | ಯಣುಗಿಯನುರೆ ಚೋರನಂತೆ ಕಳುಯ್ದ ಖಳಂ || ೫೩ || ನೀವೆಸಗಿದ ಪಾಪದ ಸಂ | ಥಾನಮನಾರಯ್ ನಿರೀಕ್ಷಿಸರ್ ಸಮ್ಮುನಿಸಂ || ತಾನದೊಳುದಯಿಸಿ ಪೆರಬರ | ಮಾನಿನಿಯೋಳ್ ಮನಮನಿಟ್ಟು ನೀಗಿದೆ ತನುವಂ || ೫೪ || ನಿನಗಂ ಸೋ ಪನೇಂ ಮೇ || ದಿನಿಸುತೆಯುಂ ನೋಡೆ ಲಕ್ಷ್ಮಿಯಲ್ಲಮೆ ರಾಮಂ | ವನಜದಳಾಕ್ಷಂ ವಾನರ | ರನಿಮಿಷರೆಂದರಿದು ಸಂಧಿಗೆಳಸಯ್ ಮನಮಂ | ೫೫ || ಮಾಡದ ಕೃತ್ಯಗಳಂ ನೀಂ | ಮಾಡಿದುದಾಯಾದೊಡೆಂದು ರಾಮನ ಬಳಿಯೋಳ್ || ಗಾಡದಿನೆಂದುಂ ಕೃಪೆ | ಮಾಡೆನೆ ತಲೆಗಾವನಾತನೆಲೆ ದಶಕಂಠಾ | ೫೬ | ನಿನ್ನನುಜಾತಂ ನಡೆತರೆ | ಮನ್ನಿಸದೇಗೆಯ ನಾತನತಿಕರುಣಿಯಲಾ || ಭಿನ್ನಮನಿನ್ನಾಲೋಚಿಸ || ದೆನ್ನೊಡನೆಂದೊಡಧಿಕಸುಖಮಪ್ಪುದಲಾ | ೫೭ || ಹರನ ದಯೆಯಿಂದೆ ದನುಜ | ರ್ಗುರುಸುಮದಿಪ್ಪುದೆಂದು ಗರ್ವಂದಳೆದುಂ | ಮರೆದಿರ್ಪ್ಪೆ ಮನಮನಾ ರಘು | ವರನ ಮಹಾಶರಕೆ ತನುವನೊಡು ವರುಂಟೇ. | ೫ಲೆ || ಸಾಮದೊಳೆಯ್ತಂದೊಡೆ ರಘು | ರಾಮಂ ತಲೆಗಾವನಲ್ಲದಿರ್ದೊಡೆ ನೀಂ ಸಂ | ಗ್ರಾಮಕೆ ಬರವೆಳ್ಳೆಂದುಂ || ನೇಮಿಸಿ ಕಳಿಸಿರ್ಪನೆನ್ನನಿಲ್ಲಿಗೆ ಜವದಿಂ | ೫೯ ||
ಪುಟ:ಹನುಮದ್ದ್ರಾಮಾಯಣಂ.djvu/೧೬೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.