160 ಹನುಮದ್ರಾಮಾಯಣ, ಭೋರನೆ ನಡೆಯಿಸುತೆ ಶರಾ | ಸಾರಮನ್ನುರೆ ಕರೆದು ತೂಳ ರಾ ಹರಿಬಲಮಂ || ೮೨ || ಪೊಕ್ಕಿರಿದ ಕಾಲಾಳ ಲ್ | ಕಿಕ್ಕಿರಿದುಂ ಶೂಲಖಡ್ಡ ಕುಂತಾವಳಿಯಂ | ರಕ್ಕಸರಾಹನದಿಂ ಕ | ಣ್ಣಿಕ್ಕುವೊಡಸದಳಮದಾಯ್ತು ವಾನರಬಲದೊಳ್ || ೮೩ !! ಕುಂಭನಿಕುಂಭನರಾಂತಕ | ಜಂಭಾಹಿತಶತ್ರುಮುಖ್ಯದಾನವರುಂ ಕೂ || ರಂಬಿನ ಮಳೆಯಂ ಕರೆವುತೆ | ಮುಂಬರಿದೆಂದು ಕೆಡವಿದರ್ ಕಪಿಬಲಮಂ | ೮೪ | ಶರಭವೃಷಭಶತಬಲಿಕೇ | ಸರಿಗವಯಗವಾಕ್ಷಗಂಧಮಾದನಮುಖರ್ || ಗಿರಿತರುಗಳಿಂದೆ ಗಜರಧ | ತುರಗಾರೋಹಕರ ಹೆಸರನಂದಳಿಯಿಸಿದರ್ || ೮೫ | ಪೊಳೆ ಯರ್ ಕರಿಘಟೆಯಂ | ಸೀಳೆ ಯರ್ ವಾಜಿಕುಳಮನರಿದರ್ ಖಳರಂ || ಕೊರೆವಸುರರ ತೇರ್ಗ್ಗಳ | ಸಾಲ್ಗಳನುರೆ ಮುರಿದು ಸೂತಕುಲಮಂ ಕೊಂದರ್ || ೮೬ | ಒಂದೆಸೆಯೋಳ್ ಮಾರುತಿಯ || ನೋಂದೆಸೆಯೋಳ್ ಸೂರಜಾಂಗದಾದಿಪ್ರಮುಖರ್ || ಸಿಂಧುರಗಳನುರೆ ಪಿಡಿದದ || ರಿಂದಂ ಸಲೆ ಸದೆದರಂದು ದನುಜಾವಳಿಯಂ | ೮೭ | ಸೌಮಿತ್ರಿಯೊಂದು ಕಡೆಯೊಳ್ | ಭೀಮಧ್ವನಿಗೆಯ್ದು ನಿಶಿತಶರಗಳನಿಸುತಂ || ತಾಮಸದಾನವರಂ ಯಮ | ಧಾಮಕ್ಕಂ ಕಳಿಪುತಿರ್ದ್ದನದನೇವೇಳ್ತಂ 1 ೮ಲೆ || ಕಡುಗಿನಿಸಿಂದಂ ರಘುಜಂ | ವಿಡಿದು ಮಹಾಧನುವನೈದೆ ಟಂಕೃತಿಗೆಯ್ಯ | ಲೈಡೆದುದು ಕಮಲಭವಾಂಡಂ | ನಡುಗಿತಸುರವಾಹಿನಿಯಾಗಳ್ || ರ್೮ |
ಪುಟ:ಹನುಮದ್ದ್ರಾಮಾಯಣಂ.djvu/೧೬೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.