162 ಹನುಮದ್ರಾಮಾಯಣ, ತಾಮಸಿಪಂಚಕಮಂ ನಿ | ರ್ನಾಮಂಗೆಯ್ದಂ ದಿವೌಕಸರ್ ನಲಿದಾಡಲ್ ||೯೭| ಅಸುರರ ತಲೆಗಳ ನೆಗೆದಾ | ಗಸಕಂ ಚಿಗಿಚಿಗಿದು ಪಾರ್ದ್ದು ಬಿಳುವು ನೆಲಕಂ || ದೆಸಗಿದ ಸುಕೃತಂ ತೀರಲ್ | ವಸುಮತಿಗಂ ಪತನಮಪ್ಪುದುಡುಗಣಮೆಂಬೋಲ್ 1 ೯೮ || ಘನನಾದಂ ಕಾಣುತೆ ನಿಜ | ತನುವಂ ಮರೆಗೆಯ್ದು ನಿಂದು ಗರನಾಂತರದೊಳ್ | ಅನುವಿಂ ಮಾಯಾಕಲೆಯಂ | ನೆನೆದುಂ ಕಯೊಂಡನಂದು ಕಾರ್ಗಳಲೆಯೋಳ್ ೯೯ || ನಾನಾವಿಧಾಸ್ಕನಿಚಯದ | ಸೋನೆಯನುರೆ ಕರೆದು ಘಾತಿಸಲ್ಕತಿಭಯದಿಂ | ವಾನರರಂಜುತಮಿರ್ದ್ದರ್ | ಮಾನವಸತಿ ನೋಡುತಿರ್ದ್ದನಾಶ್ಚರ್ಯದೊಳಂ || ೧೦೦ || ಇವನಸುರಾಧೀಶನತನು || ಭವನಾಗಸದಲ್ಲಿ ಮಾಯೆಯಿಂದಸ್ತಗಳಿಂ || ಕವಿವುತುಮಿರ್ಷ್ಪನೆನುತ್ತಂ | ಬುವಿಯೊಡೆಯಗೆ ಪೇಳನಾ ವಿಭೀಷಣನಾಗಳ್ || ೧೦೧ || ಹನುಮಂ ನೆಗೆದಂಬರಕಂ | ಘನನಾದನ ತೇರನೈದೆ ಮುರಿದಶ್ವಗಳಂ || ಹನನಂಗೊಳಿಸಲಾತಂ | ಮನಗುಂದದೆ ಚಿಗಿದನೊಂದು ಮಾಯಾರಥಕಂ || ೧೦೨ || ಆ ರಥಮಂ ಮುರಿಯಲ್ಯಂ | ಡೇರುತಮಿನ್ನೊಂದು ಮಾಯೆದೇರಂ ಬರಲುಂ | ಮಾರುತಿ ಮುರಿದೊಡನಂಜುತೆ | ಪಾರಂನದಂದನಂದು ಮೆಯಾಣದ ವೊಲ್ || ೧೦೩ |! ಗರದುರಾಸ್ತಮನುಗಿದುರು | ತರತನ್ಮಂತ್ರಾಧಿದೇವತೆಯನುರೆ ನೆನೆದುಂ || ತಿರುವಿಗೆ ತುಡಿಸಲಾಗಳ್ || ಧರೆ ಕಂಪಿತವಾಯ್ತು ಕಂದಿತಮರಾನೀಕಂ | ೧೦೪ |
ಪುಟ:ಹನುಮದ್ದ್ರಾಮಾಯಣಂ.djvu/೧೭೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.