164 ಹನುಮದ್ರಾಮಾಯಣ ಹಾ ನಾಧ ಹಾ ರಮಣ ಹಾ | ಹಾ ನರವರರತ್ನ ಎನುತೆ ಮೆಯ್ಕರೆದಿರ್ದ್ದಳ್ || ೧೧೨ ಮರಣಭಯವುಂಟೆ ಮಾಯಾ | ವಿರಹಿತಗೆಲೆ ದೇವಿ ಭೀತಿಗೊಳದಿರೆನುತ್ತುಂ || ತರಿಸಿ ವಿಮಾನಮನೇರಿಸಿ | ಭರದಿಂ ರಣಭೂಮಿಯೆಡೆಗೆ ಬಂದಳ್ಳಿಬಟೀ || ೧೬ | ಉರಗಾಸ್ತ್ರದೊಳೊರಗಿದ ವಾ | ನರಬಲಮಂ ನೋಡುತೈದೆ ಬರೆವರೆ ಭೂಮಿ || ಶ್ವರನಿರ್ದ್ವಂ ಧಣಿತಲ್ಪಗ || ಹರಿಯೋಲ್ ಕಂಡವನಿಜಾತೆ ಕಬ್ಬನಿಗರೆದಳ್ || ಉ೪ | ನಿನಗಿಂತಾದುದೆ ಶಿವಶಿವ | ಮೆನಗಿರ್ದ್ದ ಸುಲಕ್ಷಣಂಗಳೇನಾದುವೋ ಮೇ || ದಿನಿಯೊಳ್ ಸತ್ಯಂ ಮಸುಳ್ಳ | ತೆನುತುಂ ಪಂಬಲಿಪ ಸೀತೆಗೆಂದಳ್ ತ್ರಿಸಿಟೀ || ೧೧೫ || ವದನದ ರುಚಿಯುಂ ಒಲಿಸು | ತಿದೆ ನೇತ್ರಗಳುದಯಕಮಲದಂತಿವೆ ನೋಡೋಣ 11, ಬೆದರದಿರಿತಗೆ ಮರ | ಣದ ಚಿಹ್ನೆಗಳಿನಿತುಮಿಲ್ಲ ಮೆಂದುಂಪೇಳ್ಳಳ್ || ೧೬ || ಅನಿತರೊಳೆಯ್ತಂದಂ ಮಿನು | ಮಿನುಗುತ್ತಂ ವಕ್ಷಜನಿತವರಘೋಷಗಳಿಂ || ವಿನತಾತ್ಮಭವಂ ತದ್ಧ || ರ್ಶನಮಾತ್ರದಿನಾಲ್ಕು ಸರ್ವಪಾಶವಿಮೋಕ್ಷಂ || ೧೧೭ | ಒಂದುಳಿಯದಂತು ಪನ್ನಗ | ವೃಂದಂ ನೆರೆ ನಾಶವಾಯ್ತು ವಾನರರಾಗಳ್ | ಬಂದರ್ ಜಯಜಯ ಎನುತರ | ವಿಂದಾಕ್ಷನ ಪೊರೆಗೆ ನೊಸಲ ಕಚ್ಚಳೊಳಾಗಳ್ || ೮ | ರಾಮಸುಮಿತ್ರಾತ್ಮಜರುಂ | ಕ್ಷೇಮಂ ಮಿಗೆ ಮುನ್ನಿನಂತು ಸೊಗಮಿರೆ ಬಳಿಕಂ || ಭೂಮಿಜೆಗಂ ರ್ತೋಸುರಾ | ರಾಮಕೆ ಕರೆತಂದಳಂದು ತನ್ಮಾನಿನಿಯಂ 1 ೧೯ |
ಪುಟ:ಹನುಮದ್ದ್ರಾಮಾಯಣಂ.djvu/೧೭೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.