168 ಹನುಮದ್ರಾಮಾಯಣ. ಪನದೈತ್ಯಂ ಯುದ್ದ ಜಯಾ | ವನಿಗಂ ನಡೆತಂದನಖಿಳವಾದ್ಯಂ ಮೊಳಗಲ್ |! ೧೪೨ | ಗೋಳಾಯ್ದಜೋದರರ್ ಬೆಂ | ಬೀಳಲ್ಕಸಿಚಕ್ರಕುಂತಮುದ್ದರಸುಗದಾ | ಶ್ರಾದ್ಯಾಯುಧಮಾರ್ಗಣ | ಜಾಲಗಳಂ ತಾಳ್ಳು ಸಿಂಹನಾದಂಗೆಯ್ದರ್ || ೧೪೩ || ಕಡಿದಿರಿದಾರ್ಭಟಿಸುತೆ ಮುಂ | ಗುಡಿಯೊಳ್ ವಾನರರ ಪಡೆಯನರಿದರಿದಾಗಳ್ | ಕಡುಗಿನೀಸಿಂ ಬಪ್ಪಸುರರ || ಗಡಣಮನೀಕ್ಷಿಸುತೆ ಪವನಸುತನಿದಿರಾಂತಂ || ೧೪೪ || ಏಂ ಸಾಹಸಿಯೋ ಹನುಮಂ | ಮಾಂಸಾಹಾರಿಗಳನ್ನೆದೆ ಸದೆಬಡಿದಿಡುತುಂ || ಧ್ವಂಸಂಗೆಯ್ಯಂ ಭಾಸ್ಕರ | ವಂಶಜರು ಮೆಚ್ಚುವಂತು ಸಮರಾಂಗಣದೊಳ್ || ೧೪೫ || ಕಾಣುತಕಂಪನದೈತ್ಯಂ | ಶೋಣಾಂಬಕನಾಗೆ ಮುಂದು ವರಿದರಿದಾದ್ದು ೯೦ | ಬಾಣದ ಮಳೆಯಂ ಭುವನ | ಪ್ರಾಣಕುಮಾರಕನ ಶಿರದೆ ಸುರಿದಂ ಭರದಿಂ || ೧೪೬ | ಮಂಜು ಕರೆದೊಡೇಂ ಪರ್ವತ | ಮಂಜುಗುಮೇ ಭೀತಿದಾಳ್ಳಪನೆ ಕತ್ತಲೆಯೊಳ್ | ಕಂಚಸಖಂ ದೈತ್ಯರ ಶರ | ಪುಂಜದಿನೇಂ ವಜ್ರದೇಹಿ ತಾಂ ಜಾರ್ಕ್ಟಪನೇ || ೧೪೭ || ಅರಿದುಂ ಮುರಿದುಂ ಶರಪಂ|| ಜರಮಂ ಪಲ್ಲೊರೆದು ತೋರಮರಮಂ ಪಿಡಿದು || fರಿಗೆರಗುವ ಬರಸಿಡಿಲಾ | ಪರಿಯೊಳೊಡೆದವನ ತೇರನಂದುರೆ ನೇರ್ದಂ || ೧೪೮ || ಎಲವೆಲಿ ನಿಲ್ಲನಿಲ್ಲೆಂ || ದುಲಿವುತ್ತಂ ಖಡ್ಡ ಖೋಟಗಳನುಂ ಕೊಂಡುಂ || ಖಳನಿದಿರಾಂತಿರೆ ನೋಡುತೆ | ಕಲಿಹನುಮಂ ವಜ್ರಮುಷ್ಟಿ ಯಿಂದ ತಿವಿದಂ | ೧೪೯ ||
ಪುಟ:ಹನುಮದ್ದ್ರಾಮಾಯಣಂ.djvu/೧೭೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.