ಪ್ರಥಮಾಶ್ವಾಸ. ಮಾನಿಸರೂಪಂದಳೆದಿಹ | ಮಾನಾಯಕನೆಂದು ಬಲ್ಲೆನೈ ರಘುನಾಥಾ {{ ೭೪ || ದೇವರ್ಕಳ ದೂರಿಂದಂ | ಭೂವಳಯದ ಪೊರೆಯನಿಳುಹವೇಳೊಂದುಂ ನೀ ! ನೀವನಕೆಳಂದಿಹೆ ಮ . ದ್ವಾವದೊಳೀ ಸೀತೆವೆರಸು ನೆಲಸುಗುಮೆಂದಂ || ೭೫ | ವರಮುನಿಯನುಮತಿಯಿಂದಂ || ಧರೆಗುತ್ತಮವಾದ ಚಿತ್ರಕೊಟಾದ್ರಿಯೊಳಂ || ಮಿರುಗುವ ತಳಿರೆಲೆವನೆಯಂ | ವಿರಚಿಸಿ ಸುಖಮಿರ್ದೆವಲ್ಲಿ ಕೇಳ್ ದ್ವಿಜವರ್ಯಾ || ೭೬ || ಉರಗನರದಿವಿಜಲೋಕಗ | ಳುರುಮಣಿಗಳನೈದೆ ತಂದು ಕರಗಿಸಿ ವಿಧಿತಾಂ ! ಕರುವಿಟ್ಟೆರೆದಿಟ್ಟನೊಯೆನೆ | ಕರಮೆಸೆದುದು ಚಾರುಚಿತ್ರಕೂಟಮಹೀಧಂ || ೭೭ } ಸುರಶೈಲಕೆ ಮಿಗಿಲುಂ ಭಾ | ಸುರಮಾದ ಹಿಮಾದ್ರಿಗಧಿಕಮಂಜನಗಿರಿಗಂ | ಕರಮುನ್ನತವೆಂದು ದಿವಾ | ಕರನಂ ಸೋಂಕುಮಿರ್ಪುದಾ ಭೂಮಿಧರಂ || ೭೮ || ಹರನೊಲ್ ಹರಿಯೋಲ್ಕಿಧಿಯೋಲ್ | ಸುರವರನೋಲ್ ಸೋಮಧಾರಿ ವನಮಾಲಿ ಮನೋ || ಹರ ಹಂಸಶೋಭಿ ವಜ್ರ | (ುರಿತಂ ತಾನೆಂದು ರಂಜಿಸಿತ್ತಾ ಶೈಲಂ | ೭೯ || ನಾಗಕಟಕವಿಭಾಜಂ | ನಾಗಕಟಕಶೈಲಧಿಕೃತಂ ನಿರುಪಮಪು || ನಾಗಕಟಕಾನ್ತಿತಂ ಪು | ನಾಗಕಟಕಭಾಸಮದ್ರಿ ಶೋಭಿಸಿತನಘಂ || ೮೦ || ವನದಿಂ ರಸದಿಂ ನಿರ್ಜರ | ಧುನಿಯಿಂದಂ ಚಾರುಪಕ್ಷಿಮೃಗಸಂಚಯದಿಂ || ಅನಿಮಿಷರಿಂ ಯೋಗಿಗಳಿಂ | ಮುನಿಕುಲದಿಂ ರಂಜಿಸಿತ್ತು ತದ್ರೂಮಿಧರಂ | ||.ಲೆಗೆ ||
ಪುಟ:ಹನುಮದ್ದ್ರಾಮಾಯಣಂ.djvu/೧೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.