186 ಹನುಮದ್ರಾಮಾಯಣ. ಹರಿಸದೊಳಂ ದನುಜೇಶಂ | ಪುರಕಭಿಮುಖನಾಗಿವರ್ಪ್ಪ ಸಮಯದೊಳಂ ಚೇ | ತರಿಸುತಲಿನಜ೦ ಕಡುಚೆ | ಜ್ವರದಿಂ ಸೂಕ್ಷಾಂಗನಾಗಿ ತಲೆಯನಡರ್ದ್ದ೦ | ೧೦೫ | ಕಿವಿಗಳನೆರಡಂ ಕಯೋಳ್ | ಜವದಿಂ ಪಲ್ಲಳಿಗೆ ನಾಸೆಯಂ ಕಿಞ್ಞಾಗಳ | ಪವನೋಪಮಗತಿಯಿಂ ರಾ | ಘವನೆಡೆಗಂ ಬಂದು ಕಾಣೆಯಿತ್ತಂ ರವಿಜಂ | ೧೦೬ || ಗತಜೀವಂ ಬಂದೋಲ್ ರಘು | ಪತಿ ತೋಷಂದಾಳು ಮನ್ನಿಸಿದನರ್ಕಜನಂ || ನುತಿಸಿದರಮರರ್ ವಾನರ | ತತಿ ಕೊಂಡಾಡುತ್ತು ಮಿರ್ದುದದನೇವೇಳ್ತಂ || ೧೦೭ || ನಾಸಾಕರ್ಣಗಳಂ ಕೀ || ಶೇಶಂ ಮಿಗೆ ಕಿಳ್ಳು ಗಮಿಸೆ ದನುಜೇಶಂ ತಾ || ಸೀಸರಿಯದೆ ಜಯಮುಖಸಂ | ತೋಷದೊಳೆಂದನಸುರನಾಧನ ಪೊರೆಗಂ || ೧೦೮ | ಸುಖದಿಂ ತಂದಿರ್ಪೆಂ ನಾ | ಯಕನಂ ನೋಡೆಂದು ಕೌಂಕುಳೆಕೊಸ ಮಾ | ಯಕವಾಗಿರೆ ಚೋದ್ಯಂಬ | ಟ್ಟ ಕಬಿನುತೈದೆ ಮೂಗಿನೊಳ್ಳೆರಳಿಟ್ಟ | ೧೦೯ || ಬಿರಿದಿರೆ ನಾಸಿಕಮೇನ || ಚರಿಯಿದು ತಾಂ ಗೆಯ್ದ ಸಮರವೇನಾದುದೊ ಹಾ | ಹರಹರ ಎನುತಂ ಕಿವಿಗಳ | ನೆರಡುಂ ಕಂದ ಮುರ್ಕ್ಟ ಕಾಣದೆವೋದಂ || ೧೧೦ | ಶಿವಶಿವ ಘಟದಂತೊಪ್ಪುವ | ಕಿವಿಗಳನುಂ ದೀರ್ಘನಾಸೆಯಂ ಕುಯ್ದ ವನಾ || ವವನೆನ್ನಯ ಬಂಧುರನಾ ! ಮವನಳಿಸಿದ ಭಟನನು ಸೆನೆಂದಂ ದನುಜಂ
ಪುಟ:ಹನುಮದ್ದ್ರಾಮಾಯಣಂ.djvu/೧೯೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.