246 ಹನುಮದ.ಮಾಯಣ. ಎನಲಚ್ಚರಿವಡುತುಂ ಸು | ಮೂನೆಯಿರೆ ದುರುದುಂಡಿ ಸನ್ನೆಗೆಯ್ಯಲಾಗಳ್ || ಹನುಮಂ ಕಿನಿಸಿ೦ ಪೊಡೆದಂ | ದನುಜಂ ಸುಗ್ರೀವನಾಗಿ ನಿಂದಂ ಮುಂದು: | ೧೦೫ | ಏನಯ್ ನಿನ್ನವಿವೇಕಂ | ದೀನತೆಯೊಳ್ ಬಂದು ರಾಮನ ಮರೆವೊಕ್ಯಾ || ದಾನವಪತಿಯಂ ಕೊಂದವ | ಮಾನವನುಂ ತಂದೆಯಕಟ ತನ್ನ ಪಪತಿಗಂ | ೧೦೬ | ಇಂತೆನೆ ಕೇಳ್ಳುಂ ಮನದೊಳ್ || ಚಿಂತಿಸೆ ದುರುದುಂಡಿ ಭಾನುಸುತನಿವನಲ್ಲಂ || ನೀಂ ತಳ್ಳದೆ ಕೊಲ್ಲೆನೆ ಹನು | ಮಂತಂ ವೊಡೆಯಲೆ ಮಗುಳೆ ಜಾಂಬವನಾದಂ || ೧೦೭ | ಅಕಟಕಟ ಕೊಂದೆಯಾ ರವಿ || ಸುಕುಮಾರನನ್ನೆದೆ ಬರಿದೆ ಮಾತುಲವಧೆಯುಂ || ಸುಕರಮದಫ್ತುದೆ ಬಹುಪಾ | ತಕಮಂ ನೀಂ ಗೆಯ್ದೆಯೆಂದು ಮೂದಲೆ ನುಡಿದಂ || ೧೦೮ ! ದನುಜನ ಮಾಯೆಯದೆನುತುಂ | ಕಿನಿಸಿ ಮೇಲ್ವಾಯ್ತು ಪಿಡಿದು ನೆಲಕಪ್ಪಳಿಸ ! ನಿಮಿಷದಾನವಪನ್ನಗ | ಮನುಜಾಕೃತಿದಳೆದು ಯುದ್ದದೊಳ್ ಸರಿಮೆರೆದಂ || ೧೦೯ | ಒಂದೊಂದಾಕೃತಿಯಂ ಕಡು || ಪಿಂದಂ ಸಲೆ ಕೊಂದುಕೊಂದು ಕಚ್ಚಣಿದಣಿಯಲ್ ! ನಿಂದಿರೆ ಖಳಸೋದರಿ ತಾ | ನೆಂದಳ್ ಕೇಳಯ್ಯ ಹನುಮ ನಿನಗಾನೊರೆವೆಂ 11 (wo | ಉದರದ ಪಂಚಪ್ರಾಣಂ | ಮಧುಕರರೂಪದೊಳೆ ಬೇರೆ ನೆಲಸಿಪ್ಪ೯೦ತುಂ || ವಿಧಿಯಂ ಮೆಚ್ಚಿಸಿ ತಪದೊಳ್ | ಮದದಿಂ ಪಡೆದಿಪ್ಪಣಿನೈದೆ ವರಮಂ ದನುಜಂ _|| ೧ | ಬೇರಿರ್ಪ್ಪುದಿವನ ಜೀವಂ || ತೋರುವ ಗಿರಿತಟದೆ ಶಿಲೆಯ ಮಧ್ಯಸ್ಥಲದೊಳ್ |
ಪುಟ:ಹನುಮದ್ದ್ರಾಮಾಯಣಂ.djvu/೨೫೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.