252 | ೨೨ | ಹನುಮದ್ರಾಮಾಯಣ. ಗಮ್ಮನೆ ಮಾನುಷರೂಪದೊ | ಛಮ್ಮಂಗೆಳಂದನಲ್ಲಿ ರಾಮಾಖ್ಯೆಯೋಳಂ ಸುತಸಹಜಾತಾದಿಗಳುಂ || ಹತರಾದರ್ ರಾಮನಿಂದಮಿನಾದೊಡಮುಂ || ಕೃತಿಚಾತೆಯನೊಪ್ಪಿಸಿ ರಘು | ಪತಿಯಂ ಸಾರ್ದೊಡಲನುಳಿಸಿಕೊಳ್ಳುದು ವಿಹಿತಂ || ೨೩ | ಹರಿಯೊಡನೆ ವಿರೋಧಂ ಸುಖ | ಕರಮಕ್ಕುಮೆ ಕಳೆಗುಮಸುರವೃತ್ತಿಯನೆನುತುಂ | ಚರಣದೊಳೆರಗಿದ ಮಂದೋ || ದರಿಯಂ ಪಿಡಿದೆತ್ತಿ ಪೇಳನಾ ದಶಕ೦ರಂ | ೨೪ || ತಿಳಿವೆಂ ಹರಿಯೆಂದುಂ ರಘು | ತಿಲಕನನವನೊಡನೆ ಸೆಣಸಿ ಸಮರಾಂಗಣದೊಳ್ | ಮಿಲತನುವೆಂ ಬಿಸುಟುಂ ನಿ || ರ್ಮಲತರಸಾರೂಪ್ಯ ಪದವಿಯಂ ತಾಂ ಪಡೆವೆ೦ | ೨೫ |! ನರನಾದೊಡೆ ಮರ್ದಿಸಿ ಜಯ | ಸಿರಿಯಂ ಕಯೋಳೆನಿಂದು ಚಿಂತಿಸೆವೆಡೆ || ದುರುತರಮೋಹದೊಳಂ ನಿಜ | ತರುಣಿಯನುರೆ ಸಂತಮಿಟ್ಟು ರಣಕೆಳಂಗಂ | ೨೬ | ಷೋಡಶಚಕ್ರದ ರಥಮಂ || ಗಾಡದೊಳೇರ್ದು೦ ಸುಶಸ್ತಚಾಪಗಳಂ ಕ || ಯೂಡಿಸಿ ಧೀರನಿಯಂ | ಮಾಡುತೆ ನಡೆತಂದನಮರವೃಂದಂ ಬೆದರಲ್ || ೨೭ | ಭಟಹಂಕೃತಿಯುಂ ಸಾಮಜ | ಘಟಬ್ಬಂಹಿತಮಂ ವರೂಥಚಿತ್ತಿಯಂ ಮೇಣ್ || ಪಟುಹಯಹೇಷಿತಮುಂ ದಿ | ಕಟಮಂ ತೀವಿದುದು ವಾದ್ಯಘೋಷ ಮೆರೆಯಲ್ | ೨೮ | ವೀರಾದ್ಭುತಭಯರಸದೊಳ್ | ವೀರಾಸುರಸೇನೆವೆರಸು ರಾವಣದನುಜಂ ! ದಾರುಣರೂಪದೊಳಂ ರಣ | ಧಾರಿಣಿಯೊಳ್ ಕರೆದನಸವರ್ಷಮನಾಗಳ್ 1 ರ್೨ |
ಪುಟ:ಹನುಮದ್ದ್ರಾಮಾಯಣಂ.djvu/೨೬೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.