254 ಹನುಮದ್ರಾಮಾಯಣ. ಗರುಡಾಸ್ತದೆ ಖಂಡಿಸಿ ಸಂ | ಗರಧರೆಯೊಳ್ಮೆರೆದನಂದು ರಾಘವದೇವಂ || ೩೭ | ಕಲಿಯಪ್ಪುದು ನೀಂ ಮಾನವ | ಕುಲದೊಳ್ಳಿನ್ನೊರೆಗೆ ಬಪ್ಪFರಾರೆಂದೆನುತಂ | ಕಲಿತವಿಶೂಲಮನುಗಿದುಂ || ಖಲನಾಧ ಕಿನಿಸಿನಿಂದಮಿಟ್ಟಂ ದಿಟ್ಟಂ | ೩೮ || ಕಿಡಿಗೆದರುತ್ತಂ ಬರೆವರೆ || ಕಡಲುರ್ಕ್ಕಿತು ಕಂಪಿಸಿತ್ತು ಧರೆ ಕಂಗೆಟ್ಟರ್ ! ಬಿಡುಗಣ್ಣರ್ ಕಪಿಗಳ ಬಾ | ದ್ವಿಡುತಿರ್ದ್ದರ್ ಪೇಳ್ವೆನೇನನದರುಬ್ಬಟೆಯಂ || ೩೯ || ತುಡು ಮಾರಂಬಂ ನೀನೆಂ || ದೊಡನಾ ಮಾತಳಿ ಸತೀವ್ರಮುಸಿರಲ್ಲಾಗಳ್ | ಕಡಿದಂ ಶೂಲಾಯುಧಮಂ | ಕಡುವಿಂದಂ ದಿವ್ಯ ಶಕ್ತಿಯಿಂ ರಘುವೀರಂ || ೪೦ | ವಾಮಕರದಶಕದೊಳ್ ವರ | ತಾಮಸಚಾಪಗಳನಾಂತು ಬಲಗಯ್ಯ ಳೊಳಂ || ತೋಮರಗಳನುಂ ಪಿಡಿದು | ತಾಮರಸಾಂಬಕನೀಕ್ಷಿಸುತಮಿಂತೆಂದಂ } ೪೧ | ಧರಣಿಜೆ ನಿನ್ನಂ ಸೇರ್ವಳೆ | ಧುರಮೇಂ ಪರಿಣಯದ ಮನೆಯೆ ಮನುಜಾಧಮ ನೀಂ || ಶರವಿದ್ದೆಯೊಳಧಿಕನೆ ಕೀ ! ಶರ ಬಲಮೇಂ ನಿಲ್ಲಲಾರ್ವುದೇ ಸಮರದೊಳಂ | ೪೨ | ಇನಿತೆಂದುಂ ರಾಕ್ಷಸಪತಿ | ಯಿನವಂಶೋತ್ತಂಸನೆಡೆಗೆ ಕಳಿಸಿದನಾಗ || ನಲಾಸ್ತಮನತಿವೇಗದೊ | ಆನಿಮಿಷರುಂ ಬೆರ್ಚ್ಚುತಿದ್ದ ೯ರಭಾಂಗಣದೊಳ್ || ೪೩ | ತನಿಗೆಂಡಮರುಗುಳುತ್ತುಂ | ತನಗಾಹುತಿಯಾದನಿಂದು ರಾಘವನೆನುತಂ || ಜನಿತಜ್ವಾಲೆಯೊಳೆಲ್ಲರೆ | ಜನಪತಿ ವಾರುಣಮಹಾಸ್ಯಮಂ ತೊಟ್ಟೆಚ್ಚರ | ೪೪ )
ಪುಟ:ಹನುಮದ್ದ್ರಾಮಾಯಣಂ.djvu/೨೬೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.