258 ಹನುಮದ್ರಾಮಾಯಣ. ಪೊದೆಯಿಂ ತೆಗೆತೆಗೆದುಂ ದಶ | ವದನನನೆಚ್ಚೆಚ್ಚು ಗಾಯಮಂ ಕಾಣಿಸಿದಂ || ೬೭ 11 ತುಡುವಂಬುಗಳೆನಿತೋ ಕಡಿ || ವಡೆದಂಬುಗಳೆನಿತೊ ಮೆಯ್ದ ಳೊಳ್ ಕೀಲಿಸಿದು || ಗ್ಗಡದಂಬುಗಳೆನಿತೆನಿತೋ || ಕಡುಪಿ೦ ಕಾಯ್ದೆರಿ ಕಾದಿದರ್ ಕಲಿವೀರರ್ | ೬೮ || ಅಣಿಯರನದಟಿನೊಳಿರ್ಮೋರ್ | ಕಣೆಯಂ ಡೊಣೆಯಿಂದ ತೆಗೆದು ಪೆದೆಯೇರಿಸಿದರ್ | ಮಣಿಯಲ್ ತನು ಕುಂಡಲಮಣಿ | ಕುಣಿಯಲ್ ಕಮ್ಪಣಿಯೆ ಕೋಪದಿಂದೆಚ್ಚಾರ್ದೂರ್ || ೬೯ || ತಳಿರಿಡಿದಸುಗೆಯ ಪಾದಪ | ಗಳೊ ಪೂವಾಂತಿರ್ಪ್ಪ ಮುಳುಗಮೋ ಎಂಬೆಲ್ ಕಂ || ಗೊಳಿಸಿದರುರು ಮಾರ್ಗಣಹತಿ | ಗಳಿತಕ್ಷತರಕ್ತ ಕಲಿತಗಾತ್ರರ್ ಧುರದೊಳ್ | || ೭೦ || ಸಮಸತ್ಯದೊಳಾ ಸುಭಟರ್ | ಸಮರಂಗೆಯ್ಯುತ್ತು ಮಿರ್ಮ್ಪದಂ ಕಾಣುತ್ತಂ | ದಮರರ ಸಭೆಯಿಂ ಕುಂಭಜ | ನಮಲಾಬಾಂಬಕನ ಪೊರೆಗೆ ಬಂದಿಂತೆಂದಂ 1 ೧ || ಅಜಹರಿರುದ್ರಾತ್ಮಕನಂ || ತ್ರಿಜಗತ್ತೂಜಿತನನಬ್ಬ ಬಾಂಧವನಂ ನೀಂ || ಭಜಿಸಲ್ ಸಮರಾಂಗಣದೊಳ್ | ವಿಜಯಂ ನಿನಗಕ್ಕುಮೆಂದುಮುಪದೇಶಿಸಿದಂ | ೭6 | ಆ ಮಂತ್ರದ ಸಂಗತಿಯಂ | ಪ್ರೇಮದೊಳಂ ತಿಳಿಪಿ ರಘುಜಗಂ ಗಮಿಸಿದನಾ || ಧೀಮಂತಂ ಕಲಶಭವಂ | ತಾಮರಸಪ್ರಿಯನನ್ನೆದೆ ನೆನೆಯೆನುತಾಗಲ್ ಮುನಿಯುಪದೇಶಿಸಿದಂದದೊ | ೪ನನಂ ತನ್ಮೂಲಮಂತ್ರದಿಂ ಜಪಿಸುತ್ತಂ ! ದಿನಮಣಿ ಮೆಯ್ಯೋರೆಂದೆನು | ತನುವಿಂ ನುತಿಗೆಯ್ದನೆಯ್ ರಾಘವನಾಗಳ 11 ೭೪ ||
ಪುಟ:ಹನುಮದ್ದ್ರಾಮಾಯಣಂ.djvu/೨೬೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.