ದ್ವಿತೀಯಾಶ್ವಾಸ. 25 ಕಾಂಚನಗಿರಿನಿಭಕಾಯದ | ಮಿಂಚುವ ಯಜ್ಯೋಪವೀತದುರುತರಮಾಯಾ || ವಂಚನೆಗಳ್ಳದ ಚಿತ್ರದ | ಪಂಚಬ್ರಹ್ಮಾತ್ಮರೂಪನೆಸೆದು ಹನುಮಂ | ೩೮ | ಕಂಗೊಳಿಸುವ ಕೌಪೀನದ | ಪಿಂಗಳಲೋಚನದ ಬಾಲಚಂದ್ರೋಪಮದಂ || «ಂಗಳ ಮೇಘನಿನಾದದ | ತುಂಗಪರಾಕ್ರಮದ ಹನುಮನೊಪ್ಪಿದನಾಗಳ || ೩೯ | ತಳತಳಿಸಿ ತೊಳತೊಳಗಿ ಬೆಳೆ | ಬೆಳೆಯುತ್ತಂ ವೀರಶಾಂತ ರುಣಾದ್ಭುತದಿಂ || ಕಲಿಹನುಮಂ ಕಣ್ಣೆ ಸೆಯ || qಲಿತಮಹಾತೋಷದಿಂದೆ ಪೇಳ್ವಂ ರಾಮಂ || ೪o | ಸಾಕಮ್ ನಿನ್ನತ್ಯದ್ಭುತ | ಮಾಕಾರಂ ನೀನೆ ರುದ್ರನಂಶೀಭೂತಂ || ಈ ಕಾಮರೂಪಮಂ ತವೆ | ಲೋಕತ್ರಯದಲ್ಲಿ ಕಂಡುದಿಲ್ಲಯ್ ಹನುಮಾ | ೪೧ || ವಾಯುಕುಮಾರಕ ನಿನ್ನ ಸ || ಹಾಯದಿನೆಮಗಪ್ಪ ಕಜ್ಜಮತಿ ಸುಲಭಮದಿ | ನ್ಯಾಯಾಸಂ ತೊರೆದುದು ಕಪಿ | ರಾಯನ ದರ್ಶನಮುಮಪ್ಪುದೆಂತಯ್ ಹನುಮಾ || ೪೨ || ಇಂತೆನೆ ರಾಘವನಾ ಹನು || ಮಂತಂ ತಲೆವಾಗಿ ಬಿನ್ನವಿಸಿದಂ ಸೀತಾ || ಕಾಂತನೆ ಕೇಳಿನತನುಜಂ | ಚಿಂತಾಪರನಾಗಿ ಶೈಲಗರ್ಭದೊಳಿರ್ಪo 11 ೪೩ ಆ ತರಣಿಜದೆಡೆಗಂ ಬರ | ಲಾತನ ದೆಸೆಯಿಂದೆ ನಿಮ್ಮ ಕಜ್ಜಮದಕ್ಕುಂ || ಆತಂಗೆ ಸೊಗಂ ಸಮನಿಪ | ರೀತಿಯ ದಯೆಗೆಯ್ಯವೇಳುಮೆಂದಂ ಹನುಮಂ | ೪೪ ! ಲೇಸಂ ಪೇಳಿದೆ ಪರಮೋ || ಕ್ಲಾಸಂ ತಮಗಾಯ್ತು ಹನುಮ ಕೊಂಡುಯ್ಯಮ್ಮಂ |
ಪುಟ:ಹನುಮದ್ದ್ರಾಮಾಯಣಂ.djvu/೩೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.