60 ಹನುಮದ್ರಾಮಾಯಣ. ದಾನವಸತಿ ನೇಮಿಸೆ ನಿಜ | ಮಾನಸದೊಳಿಳಿದು ಬಂದನಾ ಮಾರೀಚ || ೧೧೨ | ಕನಕಮಯವಿಗ್ರಹದ ಮೀನು | ಮಿನುಗುವ ವರರೂಪ್ಪದ್ಯಗಳ ಚಂಚಲಲೋ || ಚನಗಳ ನುಣ್ಣೂರಲಿನ ಚ || ಲ್ವಿನ ಮೃಗಶಿಶುರೂಪನಾಂತು ರಾರಾಜಿಸಿದಂ !! ಉ೧೩ ಧೀಂಕಿಡುತುಂ ಪುಬ್ಬೇಯುತೆ || ಶಂಕಿಸುತೆಡಬಲನನೀಕಿಸುತಡಿಗಡಿಗಂ || ಕೊಂಕುತೆ ಕುಸಿಯುತೆ ಸುಳಿದಂ | ಪಂಕಜಲೋಚನನ ಪರ್ಣಶಾಲೆಯ ಬಳಿಯೇ \ mಳ | ಚಿತ್ರತರಮೃಗಮನೀಕ್ಷಿಸಿ | ಧಾಸುತೆ ಬೆರಗುವಟ್ಟು ನಿಜನಾಥನೊಳಂ || ನೇತ್ರೋತ್ಸವವಾಗಿದೆ ಶತ | ಪತ್ರಾಂಬಕ ಮೃಗಮನೆನಗೆ ಕರುಣಿಪುದೆಂದಳ್ ! ಉ೫ | ತಾವರೆಮೊಗದರಗಿಳಿ ಕೇಳ್ | ಭಾವದೆ ದಾನವನ ಚೇಷ್ಟೆಯೆಂದಾಂ ತಿಳಿವೆಂ || ಈ ವಿವಿಧವರ್ಣಮೃಗವುಂ | ಭೂವಲಯದೊಳುಂಟೆ ಮಾಯೆಯಲ್ಲದೆ ಬಳಿಕಂ || ೧೧೬ || ಖಳರಾವಣನಂ ಕೊಲ್ಲೋಡ | ಮುಳಿದಿರ್ಪ್ಪುದುಮೊಂದೆ ವರ್ಷವನ್ನೆಗಂ ವಕ್ನಿಯೊಳು || ನಲವಿಂ ನೆಲಸವನಿಯೊಳು | ನೆಳಲಂ ನಿಲಿಸೆಂದು ಪೇಳನಾ ರಘುವೀರಂ || ೬ | ಇಂತೆನೆ ರಘುಜಂ ಸೀತಾ | ಕಾಂತಾಮಣಿ ನಿಜದೆ ತಿಳಿದು ಛಾಯೆಯನಿಟ್ಟುಂ || ತಾಂ ತಳ್ಳದೆ ಪತಿಗೆರಗು | ತಂ ತೆರಳಳೂಲರೂಪದಿಂ ಶುಚಿಪುರಕಂ || ೧೮ | ವಿಮಲಮತಿಗಳಿರ ಕೇಳ್ವುದು | ನಿಮಗಾಂ ಮೊದಲೆಂದ ಪರಿಯೋಳಂದೋರೊರ್ವರ್ | ಕಮನೀಯಮೃಗದ ನೆವದಿಂ | ಕ್ರಮದಿಂದಂ ಪೋದ ಸಮಯದೊಳೆ ದಶಕಂಠಂ || ೧೯ |
ಪುಟ:ಹನುಮದ್ದ್ರಾಮಾಯಣಂ.djvu/೬೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.