ಚತುರ್ಥಾಶ್ವಾಸ. ರಾವಣನುದ್ಯಾನದೊಳಂ | ದೇವಿಯರಂ ಕಾಣ್ಡ ಕಾರ್ಯಸಿದ್ದಿ ಯದಕ್ಕುಂ || ಆ ವಾರ್ತಾಕಥನದಿನೆನ | ಗಾವಿರ್ಭವವಾದೆರಂಕೆಯೋಲ್ಟಿಮಗೆಂದಂ || ೧೨೦ || ಸಲ್ಲಲಿತಮಾದ ವೃತ್ತಮ | ನೆಲ್ಲಂ ಮಿಗೆ ಪೇಳು ಪಾರೆ ಖಗಪತಿಯಾಗ || ಇಲ್ಲಿಂದಂ ಶಾಖಾಮೃಗ | ವಲ್ಲಭರೆಯ್ತಂದು ಕಂಡರಂಭೋನಿಧಿಯಂ 11 ೧೨೧ || ಅಂಬುಧಿಯಿದೆ ಅಂಬರಮಿದೊ | ಎಂಬ ವಿಭೇದಂಗಳಿನಿತು ತೋರದ ಗಗನಾ || ಲಂಬಿತ ಘನಕಲ್ಲೋಲಕ | ದಂಬದ ಭೀಭತ್ಸ ವಾರಿನಿಧಿಯಂ ಕಂಡರ್ | ೧೨೨ || ಘೋರ ಸರಿತ್ಯರ್ಕಟ ಶಾ || ಲೂರ ಮಹಾಕಮರ ಚಕ್ರ ನಕಗಳಿಂದಂ || ನೀರುಡುವಿಂ ಭೀಕರ ವೈ ! ಸಾರಿಣಕುಲದಿಂದಮಬ್ಬಿ ರಾಜಿಸಿತಾಗಳ {{ ೧೨೩ || ಒಳಕೊಳ್ಳ ಪೆರ್ದೊರೆಗಳಿಂ | ವಳಿಯಿಂದಂ ಸುಳಿಗಳಿಂದೆ ಬೆಳ್ಳೋರೆಯಿಂ ಪ || ಬೃಳಿಸುವ ಮಣಿಗಣದಿಂ ಮಂ || ಚುಳ ತರನಿರ್ಘೋಷದಿಂದೆ ವಾರ್ಧಿಯದೆಸೆಗುಂ | ೧೨೪ || ಹರಿಯೋಲ್ಕರಚಕ್ರಯುತಂ | ಹರನೊಲ್ಲಾನದಿಮಂದಿರಂ ವಿಪಿನದ ವೊಲ್ | ವರವಿದ್ರುಮಾನ್ವಿತಂ ಭಾ | ಸ್ಥರನೊಲ್ಲೋನಿಕರಶೋಭಿ ತಾನೆನಿಸೆಗುಂ } ೧೨೫ || ಗಿರಿಕುಳಮಿರ್ದೊಡಮೆನ್ನೊಳ್ | ಕರುಣದೆ ನೀಂ ಕಾವುದೆಂದು ಮುಕ್ತಾವಳಿಯಂ || ಶರನಿಧಿ ಕಾಣೆಯವುದೊ || ಸುರಪಂಗೆನೆ ಸೀರ್ವತಿರ್ದ್ದುವಂಬುಕಣಂಗಳ್ || ೧೨೬ || ನೀರಾನೆಗಂಡು ಸುರಪನ | ವಾರಣಮೆಳ್ತಂದು ಸೆಣಸಿ ಕಒಳಿಪುದೆಂಬೊಲ್ |
ಪುಟ:ಹನುಮದ್ದ್ರಾಮಾಯಣಂ.djvu/೮೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.