ಪಂಚಮಾಶ್ವಾಸ. 89 ವಿದ್ಯುನ್ಮಾಲಿನರಾಂತಕ | ವಿದ್ಯುಜ್ಜಿಹ್ವಾದಿ ದೈತ್ಯ ನಾಯಕರ ಮಹಾ || ವಿದ್ಯುಭಸೌಧಗಳಂ | ವಿದ್ಯಾನಿಧಿ ಹನುಮನೈದೆ ಪುಗುತೀಕ್ಷಿಸಿದಂ | ೪೫ | ಶುಂಭನ ಶಾರ್ದೂಲನ ಶುಕ | ಕುಂಭನಿಕುಂಭಾತಿಕಾಯದೈತ್ಯರ ಗೃಹದೊಳ್ || ಕುಂಬಿಣಿಗುವರಿಯನರಸಿದ | ನಂಬುಜಲೋಚನನ ದೂತನಾ ರಾತ್ರಿಯೋಳಂ | ೪೬ || ಘನವಿಘನವಿಕಟಸಾರಣ | ದನುಜಮಹಾಪಾರ್ಶ್ವಜಂಬುಮಾಲಿರುಧಿರಲೋ || ಚನವಾಂತಕಮುಖ್ಯರ | ವನಿತಾಜನದಲ್ಲಿ ನೋಡಿ ಮರಳಂ ಹನುಮಂ 1 ೪೭ | ತ್ರಿಶಿದಪ್ರಹಸ್ತದುರ್ಮದ | ನಿಶಿಚರಮಕರಾಕ್ಷ ಮತ್ತಸಾಮಜವರಲೋ || ಮಶಯುದ್ದೋನ್ಮತ್ತಾದಿಗ | ಳಸಿಯಗೊಳಿಕ್ಷಿಸುತೆ ಮುಂದೆ ನಡೆದಂ ಹನುಮಂ 11 ೪೮ || ಭರದೆ ವಿರೂಪಾಕ್ಷಮಹೋ | ದರಪಾರ್ಶ್ವಕಧಮ್ರನೇತ್ರಮುಖ್ಯರ ವರಮಂ | ದಿರದೊಳುಡುಂಕಿ ನಕ್ಕಂ | ಚರನಾಧನ ತಂಗೆಯಾಲಯಮನೊಳವೊಕ್ಕಂ 11 ೪೯ 11. ಮೂಳಿಯರ ಮೂಗೊರತಿಯರ | ಮೇಳದ ಫಲಮದ್ಯಶೋಣಿತಾಹಾರದ ವೇ || ತಾಳಪಿಶಾಚರ ಪಿರಿತಿನಿ | ಯೋಳಿಯ ಕೆಲಬಲದ ಶೂರ್ಪನಖೆಯಂ ಕಂಡಂ || ೫೦ || ಇವಳಾಗೆವೇಳ್ಳುವಿಾಕಿಸ ! ಲವನಿಪರಿಂ ಕರ್ಣನಾಸಿಕಚ್ಚೇದನಗೊಂ | ಡವಳೆಂದಲ್ಲಿ ವಿಚಾರಿಸಿ | ತವಕದೆ ಘಟಕರ್ಣನಾಲಯಮನೊಳವೊಕ್ಕಂ || ೫೦ || ನೀಳಗಿರಿ ನಿದ್ದೆಗೆಳಸಿ ಕ | ದಾಳತರಾಕೃತಿಯನಾಂತು ಮಲಗಿಪ್ಪುದೆನಲ್ |
ಪುಟ:ಹನುಮದ್ದ್ರಾಮಾಯಣಂ.djvu/೯೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.