ಹೋಗುವುದನ್ನು ಅವನು ತಪ್ಪಿಸಿಬಿಡಬಹುದಾಗಿದ್ದಿತು. ಸ್ಕೂಲಿಗೆ ಹೊತ್ತಾಗುತ್ತೆ ಎಂದು ಹೇಳಿದ್ದರೆ ಅವರು ಸುಮ್ಮನಾಗಿಬಿಡುತ್ತಿದ್ದರು. ಆದರೆ ನರಹರಿಗೆ ಬೆರಣಿಯನ್ನು ಅಗಿದುದೂ, ಮರಳನ್ನು ಕಡಿದುದೂ, ಇನ್ನೂ ಮರೆತಿರಲಿಲ್ಲ. ರಾತ್ರಿಯಿಂದ ಅವನಿಗೆ ಮೈಯೆಲ್ಲಾ ಉರಿಯುತಿತ್ತು. ಈ ಸಮಯವನ್ನು ಬಿಟ್ಟರೆ ಕಿಟ್ಟುವಿಗೆ ಕೈ ತೋರಿಸಲು ಅವಕಾಶದೊರೆಯುವುದಿಲ್ಲವೆಂದು ತಿಳಿದು ಅವನು “ಬನ್ನಿ ಹೋಗಿ ಬರೋಣ" ಎಂದನು. ಕಿಟ್ಟುವಿನ ತಂದೆಯು "ಹೋಟಲು ದೂರವಾಗಿದೆಯೆ?” ಎಂದರು.
ನರಹರಿಯು “ಏನೂ ಇಲ್ಲ. ಇದೇ ಬೀದಿಯಲ್ಲಿ ಈ ಮನೆಯಿಂದ ಎಡಗಡೆಗೆ ನಾಲ್ಕನೇ ಮನೆ" ಎಂದನು.
ಇಬ್ಬರೂ ಹೊರಟರು. ದಾರಿಯುದ್ದಕ್ಕೂ ಕಿಟ್ಟುವಿನ ತಂದೆಯು “ಹೋಟಲಿನಲ್ಲಿ ಪಾತ್ರೆ ಬೆಳಗುವರಾರು? ಎಲೆ ಎತ್ತುವರಾರು? ಅಡಿಗೆ ಮಾಡೋನು ನಿತ್ಯ ಸ್ನಾನ ಸಂಧ್ಯಾವನೆ ಮಾಡ್ತಾನ್ಯೆ?” ಎಂದೂ ಮುಂತಾಗಿ ಕೇಳಿದರು. ನರಹರಿಯು ಅವರು ಕೇಳಿದ್ದಕ್ಕೆಲ್ಲ “ಹೂ" ಎಂದು ಹೇಳುತ್ತಾ ಅವರನ್ನು ಹೋಟಲಿಗೆ ಕರೆದುಕೊಂಡು ಹೋದನು.
ಹೋಟಲಿನ ಹೊರ ಅಂಗಳದಲ್ಲಿ ೩-೪ ಮೇಜುಗಳೂ ಅದರ ಸುತ್ತ ಕುರ್ಚಿಗಳೂ ಇದ್ದುವು. ಒಂದು ಕುರ್ಚಿಯ ಮೇಲೆ ಒಬ್ಬ ಸಾಹೇಬನು ಕಾಫಿಯನ್ನು ಕುಡಿಯುತ್ತಾ ಮಧ್ಯೆ ಮಧ್ಯೆ ಎಡಗೈಯಲ್ಲಿ ಒಂದೊಂದು ಸಲ ಬೀಡಿಯನ್ನು ಸೇದುತ್ತಾ ಕುಳಿತಿದ್ದನು. ಇನ್ನೊಂದು ಮೇಜಿನ ಮುಂದೆ, ಷರಾಯಿ, 'ಬೂಟ್ಸ್, ಹ್ಯಾಟ್' ಹಾಕಿಕೊಂಡ ಒಬ್ಬ ಅಯ್ಯಂಗಾರು ಸೋಡವನ್ನು ಸೀಸೆಯೊಂದಿಗೆ ಕುಡಿಯುತ್ತಿದ್ದರು. ಕಿಟ್ಟುವಿನ ತಂದೆಗೆ ಇದನ್ನು ನೋಡಿ ಮೈ ಜುಮ್ಮೆಂದಿತು. ಅಷ್ಟಕ್ಕೆ ಹಿಂದಿರುಗಬೇಕೆಂದು ಯೋಚಿಸಿದರು. ಆದರೆ ಒಂದುಸಲ ಊಟಮಾಡುವ ಸ್ಥಳವನ್ನು ಹೋಗಿ ನೋಡಿಬಿಡೋಣ ಎಂಬುದಾಗಿ ಒಳಕ್ಕೆ ಹೋದರು. ಎಲ್ಲರೂ ಊಟ ಮಾಡುತ್ತಿದ್ದ ಕೋಣೆಯ ಬಾಗಿಲಿನಲ್ಲಿ ಒಂದುಸಲ ಇಣಿಕಿ ನೋಡಿದರು. ಕೆಲವರು ಅಂಗಿಯನ್ನೂ, ಕೆಲವರು ಕೊಟುಗಳನ್ನೂ ಹಾಕಿಕೊಂಡು ಊಟ ಮಾಡುತ್ತಿದ್ದರು. ಎಲೆಗಳನ್ನೆಲ್ಲಾ ಒಂದಕ್ಕೊಂದು ತಗಲುವಷ್ಟು ಹತ್ತಿರಕ್ಕೆ ಹಾಕಿದ್ದರು. ಬೇಕಾದವರು ಬೇಕಾದಾಗ ಏಳುತ್ತಿದ್ದರು. ಬೇಕಾದವರು