ಈ ಪುಟವನ್ನು ಪ್ರಕಟಿಸಲಾಗಿದೆ

೧೧೨

ಹೂಬಿಸಿಲು

ವಿದ್ದಂತೆ! ಕ್ಲೋರೊಫಾರ್ಮಿನ ಬಲದಿಂದ........." ಲೀಲೆಯು ಬಿಕ್ಕಿ ಬಿಕ್ಕಿ ಅಳತೊಡಗಿದಳು.

"ಈಗ ಆ ಮಾತಿಗೆ ಐದು ಐದೂವರೆ ತಿಂಗಳಾಯಿತು. ನಾನೊಬ್ಬ ಬಡ ಭಿಕಾರಿಯನ್ನಾದರೂ ಮದುವೆಯಾಗಿ ಸುಖದಿಂದ ಬಾಳುವೆಮಾಡುತ್ತಿರಬೇಕೆನ್ನುವಾಗ ತಾಯಿ ಈ ಪಾಸು ಮಾಡಿದ್ದ ನ್ನರಿತು, ಪಾಪಭೀರುವಾದ ಶ್ರೀಧರರಾಯರಿಗೆ ದಯೆ ಬಂದು, "ತಮ್ಮ ಬಳಿ ಹೋಗಿ ಸದ್ಯದ ಪಿಡುಗು ತಪ್ಪಿಸಿ ಬಾ ' ಎಂದರು. ಇದೋ, ಈ ಸಾರೆ ಬರುವಾಗ ಮಾತ್ರ ಆ ಮನೆಗೆ ಕೊನೆಯ ಶರಣು ಹೊಡೆದು, ಆಭರಣಗಳನ್ನು ಸಾಕಷ್ಟು ತೆಗೆದುಕೊಂಡು ಹೊರಬಿದ್ದಿರುವೆನು. 'ಆರೋಗ್ಯ ಹೊಂದಲು ತಿಂಗಳ ವರೆಗೆ ದವಾಖಾನೆಯಲ್ಲಿರಬೇಕಾಗುತ್ತದೆ -ನೀನು ಬರಬೇಡ-ಜನರು ಆಡಿಕೊಳ್ಳ ಬಹುದು' ಎಂದು ತಾಯಿಗೆ ಹೇಳಿದ್ದೆನೆ.

"ಇವನ್ನೆಲ್ಲ ಮಾರಿ ಬಂದ ಹಣವನ್ನು ಸೇಪ್ಟಿಂಗ್ನದಲ್ಲಿಟ್ಟು ಈಗಲೇ ಕಾಲೆಜು ಹಾಸ್ಟೆಲ್ ಸೇರುವೆನು. ತಕ್ಕವನು ಮುಂದು ಬಂದರೆ ವಿವಾಹಮಾಡಿಕೊಂಡು ನಿಶ್ಚಿಂತಳಾಗಿರುವೆನು; ಇಲ್ಲವಾದರೆ ಹೀಗೆಯೆ ಜನ್ಮ ನೀಗುವೆನು! "

ಅವರಿಬ್ಬರಿಗೆ ವಂದಿಸಿ, ಮನೆಯಿಂದ ಹೊರಬಿದ್ದವಳು, ಗಾಳಿಯಂತೆ ಎಲ್ಲಿಯೋ ಮಾಯವಾದಳು.

****

ಇದು ಈಗ ಐದಾರು ವರುಷಗಳ ಹಿಂದಿನ ಸಂಗತಿಯಾಗಿತ್ತು; ನಾನು ಮೊನ್ನೆ ಕ್ರಿಸ್‌ಮಸ್ ರಜೆಯಲ್ಲಿ ಪ್ರಭಾತ ಸಡಿಯೋ ನೋಡಿಕೊಂಡು ಬರಬೇಕೆಂದು ಪುಣೆಗೆ ಹೋಗಿದ್ದೆನು, ಡಾಕ್ಟರ್ ಚೌಧರಿಯವರಲ್ಲಿ ನನಗೆ ಮೊದಲಿನಿಂದಲೂ ಸುಗೆ ಬಹಳ, ಅವರಲ್ಲಿಗೆ ಹೋದಾಗ ಹಿಂದಿನ ಸಂಗತಿಯು ಜ್ಞಾಪಕಕ್ಕೆ ಬಂದಿತು.

"ಆ ಹುಡುಗಿಯ ಈ ಚೆಯ ವರ್ತಮಾನವೇನಾದರೂ ಮತ್ತೆ? ಮುಂದೆ ಅವಳ ಗತಿಯೇನಾಯಿತು ಡಾಕ್ಟರಸಾಹೇಬರೇ?"