ಈ ಪುಟವನ್ನು ಪ್ರಕಟಿಸಲಾಗಿದೆ

ನೀಲೆಯ ಸಂಸಾರ

೧೫

ಹೇಳ್ಯಾರು ನಿನ್ನ ಕತೀನ! ಇನ್ನೊಂದ ನಾಕೈದ್ದಿನಕ, ಕ್ಯಾರಕೊಪ್ಪದ ಗೌಡ್ರು ನಿನ್ನ ನೋಡಾಕ ಬರ್ತಾರ-ಹೊಂದಿಸಿಕ್ಯಾರಾ ಇದs ತಿಂಗಳದಾಗ ಕಾರ್‍ಯೇವ ಮಾಡಿಬಿಡ್ತೇನಿ. ಅವರು ಬರೂ ದಿನಾ ಆರ ಆಟ ನಿನ್ನ ವಾರಿ ಬೇತೇಲೀ ಬಿಟ್ಟು ನಡಕ ತಗದು ಜಡೀ ಹಾಕ್ಕೋ--ಆ ಕೈಯಾನ ಬಿಲ್ಲಾದವರಾ ತಗದು ಬಂಗಾರ ಬಳೀ ಹಾಕು !!"

ತಂದೆ ಹೇಳಿದ ಹಾಗೆ ರೂಪದ ವಿದ್ರೂಪವನ್ನು ಬೇಕಾದಷ್ಟು ಮಾಡಲು ಅವಳು ಸಿದ್ಧಳಿದ್ದಳು. ಆದರೆ 'ನೋಡಲಿಕ್ಕೆ ಬರುವ ಗೌಡರ ಮಗನೊಡನೆ ತನ್ನ ಮದುವೆ'ಯ ಮಾತನ್ನು ಕೇಳಿದೊಡನೆ ಅವಳ ಅಂತಃಕರಣಕ್ಕೆ ಬಹಳ ನೋವಾಯಿತು; ಮನಸು ಚದರಿ ಚಲ್ಲಾಪಿಲ್ಲಿಯಾಯಿತು.

ರಾತ್ರಿ ಕೋಣೆಯಲ್ಲಿ ಒಬ್ಬಳೇ ಕುಳಿತಿದ್ದಳು. ಮನೆಯ ಜನರೆಲ್ಲರೂ ನಿದ್ರೆ ಹೋಗಿದ್ದರು. ವಕೀಲರಲ್ಲಿದ್ದಾಗ ತೆಗೆಸಿದ ಗ್ರುಪ್ ಫೋಟೋದಲ್ಲಿ ತನ್ನನ್ನು ನೋಡಿಕೊಂಡಳು. ಅವಳ ಗುರುತು ಅವಳಿಗೇ ಹತ್ತದಂತಾಗಿ, ಹುಚ್ಚೆದ್ದು ಹೋದಳು. ಈಗಾಗಲೆ ಕ್ಯಾರಕೊಪ್ಪದ ಗೌಡರ ಮಗನೊಡನೆ ತನ್ನ ವಿವಾಹವಾಗಿ ಹೋಗಿದೆಯೋ ಏನೋ ಎನ್ನಿಸುವಷ್ಟು ಗಾಬರಿಯಾದಳು.

ಒಂದು ದಿನ ಅವಳ ಸೋದರತ್ತೆ "ಲೀಲಾವತಿ, ನಿನ್ನ ಗಂಡಗ ಸ್ನಾನಕ್ಕ ನೀರು ತೋಡು, ನಾ ಇಬ್ಬರಿಗೂ ಊಟಕ್ಕ ಹಾಕ್ತೇನೀ. ಹೈಸ್ಕೂಲಿಗೆ ಹೊತ್ತಾಗೇದಂತ ಅವಸರಾ ಮಾಡ್ಲಿಕ್ಹತ್ಯಾನ......" ಎಂದಿದ್ದಳು.

ಅಂದಿನಿಂದ, ಲೀಲೆಯು ಎಷ್ಟೆಷ್ಟು ರಟ್ಟಿನ ಮೇಲೆ ಕಸೂತಿ ಗಳನ್ನು ತೆಗೆದಿದ್ದಳೋ, ಜೀಗಿನ ಮೇಲೆ- ಕ್ಯಾನವಸದ ಮೇಲೆ ನಕ್ಷೆಗಳನ್ನು ತೆಗೆದಿದ್ದಳೋ, ಅದೆಷ್ಟು ಬಗೆಯ ವಸ್ತ್ರಗಳನ್ನೂ, ಟೇಬಲಕ್ಯಾಥು-ಪರ್ಸುಗಳನ್ನೂ ಹೆಣೆದಿದ್ದಳೋ, ಅವೆಲ್ಲವಕ್ಕೂ ಹೆಸರು ಹಾಕಬೇಕಾದರೆ ತನ್ನ ಹೆಸರು, ಶಂಕರನ ಹೆಸರು, ಅವನ