ಈ ಪುಟವನ್ನು ಪ್ರಕಟಿಸಲಾಗಿದೆ

{{rh|೨೪|ಹೂಬಿಸಿಲು||))


“ನಿನ್ನೆ ಸಿನೇಮಾದಾಗ ಎಡ್ಡೀಪೋಲೊ ಛಪ್ಪರದಿಂದ ಗ್ವಾಡಿಗೆ, ಗ್ವಾಡಿಯಿಂದ ಭಾಂವಿಗೆ, ಭಾಂವಿಯಿಂದ ಅಟ್ಟಕ್ಕ ಜಿಗದದ್ದನ್ನು ನೋಡಿದ್ದೆ........." "ಭಪ್ಪರೆ! ಎಡ್ಡೀಪೋಲೋ” ಎಂದು ಹಿರಿಯಕ್ಕ ಅವನ ನೋವಿಗೆಲ್ಲ ಎಣ್ಣೆ ಸವರಿದಳು; ಅದಕ್ಕೆ ಕಿರಿಯಕ್ಕ, "ಅವಿವೇಕಾ, ಹೀಂಗೆಲ್ಲಾ ಜಿಗೀತ ಬರಬ್ಯಾಡಾ-ಎಲ್ಲೆರ ಜೀವಾ ಕೊಟ್ಟೀ?" ಎಂದು ಬುದ್ಧೀ ಹೇಳಿದಳು.

ಮುಂದೆ ನಾಲ್ಕೈದು ದಿನಗಳ ವರೆಗೆ ಮನೆ ಹಿಡಿದೇ ಬಿದ್ದಿದ್ದನು. ಯಾರಾದರೂ ಸಿಟ್ಟು ಮಾಡಿದರೆ, ಬಿದ್ದಲ್ಲಿಯೇ ಸ್ವಲ್ಪ ಕೈಯಲ್ಲಿ ಪುಸ್ತಕ ಹಿಡಿಯಬೇಕು; ಇಲ್ಲವಾದರೆ ಎಲ್ಲರ ಕಣ್ಣು ತಪ್ಪಿಸಿ, ಕೋಣೆಯ ಬಾಗಿಲನ್ನು ಒಳಗಿನಿಂದ ಹಾಕಿಕೊಂಡು, ಗೋಡೆಗಳಿಗೆಲ್ಲ ಸಿನೇಮಾದ ಸುಂದರವಾದ ಚಿತ್ರಗಳನ್ನ೦ಟಿಸುತ್ತ ಕೂಡಬೇಕು, ಅಷ್ಟರಲ್ಲಿ ಹುಡುಗಿಯರೆಲ್ಲ ಒಟ್ಟಾಗಿ ಸೇರಿ ಬಂದು ಬಾಗಿಲ ಬಡಿಯುತ್ತಿದ್ದರು. “ ಏ ಹೋಗ್ರೆ, ಸುಮ್ಮನ ಯಾಕ ತ್ರಾಸ ಕೊಡ್ತಿರೇ ನನಗ, ಜಡ್ಡಿನ್ಯಾಗ?” ಎಂದು ಬೆದರಿಸುತ್ತ ಮೆಲ್ಲಗೆ ಎದ್ದು ಬಾಗಿಲು ತೆಗೆದನು. ಪ್ರತಿಯೊಬ್ಬರೂ “ಗೋವಿಂದಾ ನನಗ ಕಾಗದದ ಹಡಗು ಮಾಡಿ ಕೊಡೋ, ನನಗೋ, ನನಗೋ...' ಎಂದು ಅವನನ್ನು ಗೋಳಿಡಿಸಿದರು. ಎಲ್ಲಕ್ಕೂ ಹಿರಿಯಳು ಭೀಮಿ.

"ಏ, ಹೋಗs ಭೀಮಿ. ನಾಯೇನ ನಿನಗ ಹಡಗಾ ಮಾಡಿ ಕೊಟ್ಟಾ೦ವಲ್ಲ ನೋಡು---ನಿನ್ನೆ ಸಿನೇಮಾದಿಂದ ಬರುವಾಗ ಸ್ವಲ್ಪು ಗಂಗೀನ್ನ ಕರಕೊ ಅಂದ್ರ ಕರಕೊಳ್ಳಿಲ್ಲಾ--"

"ಮತ್ತ ಸುಂದ್ರಿನ್ನ ಕರಕೊಳ್ಳಿಲ್ಲೇನಪ್ಪಾ ಅರ್ಧಾ ಹಾದಿ ತನಕಾ |"

"ಮತ್ತೆ ಅರ್ಧಾ ಹಾದೀತನಕಾ ಬರೇ ಕೈ ಬೀಸಿಗೋತ ಬರ್ಲಿಲ್ಲೇನವ್ವಾ ನೀನು !"

"ಇನ್ನೊಮ್ಮೆ ಹಾಂಗ ಮಾಡೂದುಲ್ಲಪ್ಪಾ !"