"ನಿಮ್ಮನ್ನ ವೈದ್ಯರೂಂತ ಭಾವಿಸೋಹಾಗೆ ಆಗಲೇ ಹೇಳಿದ್ರಿ ?
ಸಹಾಯ ಮಾಡಿದರೆ ಸಂತೋಷ, ಸಾಯೋತಂಕ ನಿಮಗೆ ಋಣಿ
ಯಾಗಿರ್ತೇನೆ.”
ನನ್ನ ನಂಬಬಲ್ಲೆಯಾ ?”
ಶಶಿಯು ಒಂದು ಕ್ಷಣ ಎವೆಯಿಕ್ಕದೆ ಗಂಭೀರವಾಗಿ ಅವನ
ಕಣ್ಣುಗಳನ್ನೇ ನೋಡಿ, “ ನಂಬುತ್ತೇನೆ" ಎಂದಳು.
"ನಾನೂ ಆತನ ಹಾಗೇ ನಿನ್ನ ಕೈ ಬಿಟ್ಟು ಬಿಟ್ರೆ ?"
" ಆಗ ನೀವು ಹೇಳಿದ ಹಾಗೆ ಸಮುದ್ರವಿದ್ದೇ ಇದೆಯಲ್ಲಾ?”
“ ನನ್ನ ಸಹಾಯ ಬೇಕಾದರೆ ನಾನು ಹೇಳಿದ ಹಾಗೆ ಚಾಚೂ
ತಪ್ಪದೆ ನಡಕೋಬೇಕು. ನನ್ನ ಹೆಸರಿಗೆ ಒಂದು ಚೂರು ಕಳಂಕ
ಬಂತೂಂದರೆ ನಾನು ೧೦ ವರ್ಷದಿಂದ ಬೆವರು ಸುರಿಸಿ ಬೊಂಬಾಯಲ್ಲಿ
ಸ್ಥಾಪಿಸ್ಕೊಂಡಿರೋ ನನ್ನ “ ಬಿಸಿನೆಸ್ ' ಹಾಳಾಗಿ ಹೋದ್ದಾಗೇನೆ.
ಆಮೇಲೆ ನನಗಿಲ್ಲಿ ಮೂರು ಕಾಸಿಗೆ ಬೆಲೆ ಇರೋಲ್ಲ. ಅದನ್ನ
ಮರೀದೇ ನನಗೆ ಮಾನಾ ಉಳಿಯೋಹಾಗೆ ನಡೆಕೊಳ್ಳೋಹಾಗಿದ್ರೆ
ನನ್ನ ಮನೇಲೇ ಇರಬಹುದು, ಹೇಳು, ನಿನಗೆ ಒಪ್ಪಿಗೇನೇ ?"
“ ನಾನು ನಿಮ್ಮ ಜೊತೇಲಿ ಬಂದ್ರೆ ನಿಮ್ಮ ಹೆಂಡತಿ ಏನೂ
ಅಂದ್ಕೊಳ್ಳೋಲ್ವೆ ?"
" ನನ್ನ ಹೆಂಡತಿ ಬೊಂಬಾಯಲ್ಲಿಲ್ಲ. ತನ್ನ ತವರುಮನೇಲಿ
ದ್ದಾಳೆ. ನನ್ನ ನೆರೆಹೊರೇಲಿರೋ ಸ್ನೇಹಿತರ ಹೆಂಡತಿಯರು ನನ್ನನ್ನ
ಅವರ ಅಣ್ಣ ತಮ್ಮಂದಿರಿಗಿಂತ ಹೆಚ್ಚು ವಿಶ್ವಾಸದಿಂದ ನೋಡಿಕೊಳ್ತಿ
ದಾರೆ. ಅವರಿಗೇನಾದರೂ ನಿನ್ನ ನಡೆನುಡಿಯಿಂದ ನನ್ನ ನಡತೇ
ಮೇಲೆ ಅನುಮಾನ ಬಂದರೆ ಆಮೇಲೆ ನಾನು ತಲೆಎತ್ತೊಹಾಗಿರೊಲ್ಲ.
ಅದಕ್ಕೋಸ್ಕರ ಈಗಲೇ ನಿನಗೆ ಎಚ್ಚರಿಕೆ ಕೊಟ್ಟಿದ್ದೇನೆ.”
“ ಅಂದರೆ, ನನಗೆ ಸರಿಯಾಗಿ ಅರ್ಥವಾಗ್ಲಿಲ್ಲ.”
ಪುಟ:27-Ghuntigalalli.pdf/೪೧
ಈ ಪುಟವನ್ನು ಪ್ರಕಟಿಸಲಾಗಿದೆ
೨೭ ಘಂಟೆಗಳಲ್ಲಿ
೩೮