ಈ ಪುಟವನ್ನು ಪ್ರಕಟಿಸಲಾಗಿದೆ

೫೪

ಬಿ. ಎಸ್. ವೆಂಕಟರಾಮ್

"ನಿನಗರ್ಥವಾಗದ ವಿಚಾರಗಳು ಪ್ರವಂಚದಲ್ಲಿ ಬಹಳ ಇವೆ, ಶಶಿ ! ಕ್ರಮೇಣ ಎಲ್ಲ ಗೊತ್ತಾದೀತು ಬಿಡು.” ಎಂದು ಗಿರೀಶನು ಅವಳ ಮುಖದಿಂದ ಹೊರಬೀಳಲು ಸಿದ್ದವಾಗಿದ್ದ ಪ್ರಶ್ನಾವಳಿಗೆ ತಡೆ ಹಾಕಿದ. ಗಡಿಯಾರವು ೧೧ ಘಂಟೆ ಹೊಡೆಯಿತು, ಶಶಿಯ ಮುಖವು ಗಂಭೀರವಾಯಿತು.
“ ಏನು ಯೋಚಿಸುತ್ತಿದ್ದಿ ?"
" ನಿನ್ನೆ ಬೆಳಿಗ್ಗೆ ರೈಲು ಹತ್ತಿದಾಗ ಹೀಗೆ ನನ್ನ ಜೀವನವೇ ಬದಲಾಗುತ್ತೆಂತ ನಾನು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ನಿನ್ನೆ ತಾನೆ ನನ್ನ ಪರಿಚಯ ನಿಮಗಾದ್ದು, ನನ್ನ ಚರಿತ್ರೆ ತಿಳಿದಮೇಲೂ ನನ್ನ ನೀವು ನಂಬ್ತಿರೇನು ?"
"ಒಂದೇ ಒಂದು ಘಂಟೆಗೆ ಹಿಂದೆ ಪರಿಚಯವಾದರೆ ಎಷ್ಟೋಸಲ ನಾವು ನಂಬಬೇಕು ಬರುತ್ತೆ. ನಾವು 'ಬಿಸಿನೆಸ್ ಪೀಪಲ್ಲು' ನೋಡು, 'ಮೋರೋವರ್ ನನಗೆ ನಿನ್ನ ಗುರುವಾಗಿ ಒಂದಲ್ಲ ಎರಡಲ್ಲ ೨೭ ಘಂಟೆಗಳಾಗಿವೆ. " ದಟ್ಸ್ ಎ ಲೈಫ್ ಟೈಮ್ , ಯು ನೋ .......” ಶಶಿಯು, " ಆದರೂ ನನ್ನ ಪ್ರಶ್ನೆ ಗುತ್ತರ ಒರಲಿಲ್ಲ. ಹೇಳಿ.... ನನ್ನಲ್ಲಷ್ಟು ನಂಬಿಕೆ ಇದ್ಯೆ ? ನಾನಿನ್ಯಾರಜೊತೆಯಲ್ಲಾದ್ರೂ ಓಡಿ ಹೋದರೇನು ಮಾಡ್ತೀರಿ ?” ಎಂದವನ ಕಡೆಗೆ ಮುಖ ತಿರುಗಿಸಿ ಕೇಳಿದಳು. ಗಿರೀಶನು ಒಂದು ಕ್ಷಣ ತಡೆದು ಕೋಣೆಯಸುತ್ತಲೂ ಒಮ್ಮೆ ನೋಡಿ, ಅನಂತರ ಮಾತನಾಡಿದ:
" ಇಲ್ಲಿರುವವರೆಲ್ಲ ಬಹಳ ಒಳ್ಳೆಯವರು, ಶಶೀ ! ನನ್ನಾತ್ಮೀ ಯರು ... ನಾನೀ ಜನಗಳ ಮಧ್ಯೆ ಬಹಳ ದಿನಗಳಿಂದಿದ್ದೇನೆ....ನೀನು ಹಾಗೊಂದುವೇಳೆ ಹೋದರೆ..ಇವರೆಲ್ಲರಿಂದ ನಾನು ತಲೆಮರೆಸಿಕೊಂಡು ಹೋಗಬೇಕಾಗುತ್ತೆ.. ಆದರೆ ಹಾಗಾಗುವ ಭಯವಿಲ್ಲ..ಏಕೆಂತೀಯೋ?. ಅನುಭವಾನ್ನೋದು ಜೀವ ನ ದಲ್ಲಿ ಬಹಳ ಮುಖ್ಯ ಶಶಿ. ಏನೋ ನೀನೂ ಒಂದುಸಲ ದುಡುಕಿದೆ ; ಅದರ ಫಲಾನೂ ಕಂಡೆ. ಪಶ್ಚಾತ್ತಾಪಾನೂ ಪಟ್ಟಿದ್ದೆ. ಹೊಸ ಹಾಳೆ ತಿರುವಿ ಹಾಕೋಕೆ