ಈ ಪುಟವನ್ನು ಪ್ರಕಟಿಸಲಾಗಿದೆ

೫೬

ಬಿ, ಎಸ್. ವೆಂಕಟರಾಮ್

“ ನನ್ನ ಮುಖನೋಡೋ ಅಂಥಾದ್ದೇನೂ ಅಲ್ಲ ಬಿಡು ; ಅದನ್ನ ದಿನವೂ ನೋಡೋಕೆ ನನಗೇ ಅಸಹ್ಯವಾಗುತ್ತೆ. ಅದಕ್ಕೇ ನನಗೂ ಕನ್ನಡಿಗೂ ಬಹಳ ದೂರ ??”
ಆ ಮುಖದ ಮೂಲಕ ಹೃದಯಾನ ನಾನು ನೋಡ್ತಾ ಇದ್ದೇನೆ. ಎಷ್ಟು ಮೃದು ಹೃದಯಾ ಅದು !” "ಶಶಿ ! ನಾನೊಂದು ಮಾತು ಕೇಳ್ಬೇಕೂಂತ ಇದ್ದೇನೆ....”
"ಕೇಳಿ....ಅದಕ್ಕೇನಂತೆ ?”
“ ನಿನ್ನೆ ದಿನ ಅವನು, ನೀನವನ ತಂಗೀಂತ ಹೇಳಿದಾಗ ನಿನಗೆಷ್ಟು ಅಸಹ್ಯವಾಯಿತೊ ಅಷ್ಟು.... ನೀನು ನನ್ನ ಹೆಂಡತೀ೦ತ ಇವರಿಗೆ ನಾನು ತಿಳಿಸಿದಾಗ ಅಸಹ್ಯವಾಯಿತೆ ?”
“.... ನಾ ಕಾಣೆ ; ನಾಲ್ಕು ದಿನ ಕಳೆದ ಮೇಲೆ ಅದಕ್ಕುತ್ತರ ಹೇಳ್ತೇನೆ....” ಎಂದು ಶಶಿಯು ನಸುನಗುತ್ತ ಮನೆಯ ಪರೀಕ್ಷೆಗೆ ತೊಡಗಿದಳು. ಹಾಗೇ ನೋಡುತ್ತ ಗಿರೀಶನ ಮೇಜಿನ ಬಳಿಗೆ ಹೋದಳು. ಇಂಗ್ಲೀಷಿನಲ್ಲಿ ಒಂದು ವಾಕ್ಯವನ್ನು ' ಟೈಪ್ ' ಮಾಡಿ ಅದನ್ನು ಒಂದು ಪುಟ್ಟ ಫೋಟೋ ಪ್ರೇಮಿನಲ್ಲಿ ಸೇರಿಸಿ, ಗಿರೀಶನು ತನ್ನ ಮೇಜಿನಮೇಲಿಟ್ಟು ಕೊಂಡಿದ್ದನು. ಶಶಿಯು ಅದನ್ನು ಕುತೂಹಲದಿಂದ ಕೈಗೆತ್ತಿಕೊಂಡು ಓದಿದಳು :-

"Remember the day when you were born, All were laughing but you were crying; Lead such a life that when you die, Others should weep while you go laughing"

-SAANI.

ಎಂದಿತ್ತು. ಒಂದು ಕ್ಷಣ ಹಾಗೇ ಯೋಚನಾಮಗ್ನಳಾಗಿ ನಿಂತಳು. ಅನಂತರ ಹಸನ್ಮುಖಿಯಾಗಿ ಗಿರೀಶನ ಕಡೆ ತಿರುಗಿ, “ ನಿಮ್ಮ ವಿಚಾರ........ನಾನು ತಿಳ್ಕೊಬೇಕಾದ್ದಿನ್ನೂ ಬಹಳವಿದೆ” ಎಂದಳು. ಗಿರೀಶನು ಮುಗುಳ್ನಗೆ ನಕ್ಕ. ಉಮಾಭಾಬಿಯು ' ಟೀ ಸಿದ್ಧವಾಗಿದೆ' ಯೆಂದು ಬಾಗಿಲಲ್ಲೇ ನಿಂತು ಕೂಗಿದುದು ಅವರ ಕಿವಿಗೆ ಬಿತ್ತು,