ಈ ಪುಟವನ್ನು ಪ್ರಕಟಿಸಲಾಗಿದೆ
೭೧

ಆಕಾಂಕ್ಷೆ
ವಾಗಿರುತ್ತೆ !' ಎಂದು ಹೊರಟ. ಕುರಿಮಂದೆ ಹಿಂಬಾಲಿಸಿ ಮೂರ್ತಿಯ ಕೋಣೆಗೆ ಮುತ್ತಿಗೆ ಹಾಕಿತು. ರಾಜಿಯು ನಿರುಪಾಯಳಾಗಿ ಕೋಣೆ ಯಿಂದ ನುಣುಚಿಕೊಂಡಳು. ಹೊರಗೆ ಬಂದವಳು, ಅತಿಥಿಗಳ ಸಂಭಾಷಣೆಯ ವಕ್ರಗತಿಯನ್ನು ಕೇಳುತ್ತ ಏನೂ ಮಾಡಲಾರದವಳಾಗಿ ನಿಂತಳು.
ಮೂರ್ತಿಯ ಕೋಣೆಯನ್ನು ಮುತ್ತಿದ ಮಿತ್ರರೆಲ್ಲ ಮೊದ ಮೊದಲು ಪ್ರಶ್ನಾವಳಿಯ ಮಳೆಗರೆಯಲು ಸಿದ್ಧರಾಗಿದ್ದರೂ ಮುಖ್ಯ ವಾದ ಪ್ರಸ್ತಾಪವನ್ನೆತ್ತಲು ಯಾರೂ ಮನಸ್ಸು ಮಾಡಲಿಲ್ಲ. ಕೊನೆ ಗೊಬ್ಬ, ' ಏನಯ್ಯಾ ಮೂರ್ತಿ ! ಯುದ್ಧ ಭೂಮಿಯಿಂದ ನಿಜವಾದ ವಿಚಾರ ನಮಗೇನೂ ಸರಿಯಾಗಿ ಬರೊಲ್ಲ : ನೀನಾದರೂ ಹೇಳು? ಎಂದ.
ಮೂರ್ತಿಯು 'ನಾನೇನು ಹೇಳಲಿ .......ಎಲ್ಲಾ ಯುದ್ಧಗಳ ಹಾಗೇನೇ ಇದೂನೂ ! ಹೊಡೆದಾಡೋರು ಹೊಡೆದಾಡ್ತಲೇ ಇದ್ದಾರೆ; ಸಾಯೋರು ಸಾಯ್ತಾಲೇ ಇದಾರೆ ; ಇಲ್ಲಿ ಮಾತಿನ ಮಲ್ಲರಾಗಿ ಕೂತಿರೋರು ಕೂತೇ ಇದಾರೆ.?
“ ಓಹೊಹೋ ! ಏನಪ್ಪಾ ? ನಾವೆಲ್ಲಾ ಮಾತಿನ ಮಲ್ಲರಾಗ್ಬಿಟ್ವೊ? ಕೆಲವ್ರು, ಅಲ್ಲೋಗಿ ಹೊಡೆದಾಡಿದ್ರೆ, ಇನ್ನು ಕೆಲವ್ರು ಹೊಡ್ದಾಡೋರಿಗೆ ಇಲ್ಲಿಂದ ಕುಮ್ಮಕ್ಕು ಕೊಡ್ತಾ ಇರಬಹುದು ! ಎಂದೊಬ್ಬರು ಅಂದರು. ಮತ್ತೊಬ್ಬರು " ಇರಬಹುದು ? ಏನ್ರಿ ಇದ್ದೀವೀಂತನ್ನಿ, ಅಲ್ಲಿ ಹೋಗಿ ಕಾದಾಡೋರಿಗೆ ಊಟ ಉಪಚಾರ, ಬಟ್ಟೆ ಬರೆಗೆ, ಔಷಧಿ- ಪಥ್ಯಕ್ಕೆ ಎಲ್ಲಾನೂ ಅನುವಾಗಿ ಒದಗ್ಸೋಕೆ ನಾವಿಲ್ಲಿ ದುಡ್ಡು ದುಗ್ಗಾಣಿ ಕೊಟ್ರೆ ತಾನೆ ರಥ ಜರಗೋದು ಮುಂದಕ್ಕೆ ?....' ಎಂದರು.
ಮೂರ್ತಿಗೇಕೊ ರೇಗಿತು. ಏನೋ ಸ್ವಲ್ಪ ಒರಟಾಗಿಯೇ ಇವರಿಗೆ ಉತ್ತರ ಕೊಡಬೇಕೆಂದು ಕೆಲವು ಮಾತುಗಳು ಬಾಯಿಗೆ