೮೬
ಲಾರಿಯು ಚಲಿಸಿತು. ಮೂರುಮಂದಿ ದೇಶೀ ಸೈನಿಕರು ಅನಾ
ಮತ್ತಾಗಿ ರಾಜಿಯನ್ನು ಹಿಡಿದೆತ್ತಿ ಲಾರಿಯೊಳಗೆ ಹಾಕಿ ತಾವೂ
ಹಿಂದೆಯೇ ಆದರೊಳಗೆ ಹಾರಿಕೊಂಡರು. ರಾಜಿಯ ಆರ್ತನಾದ
ಸುತ್ತಲಿನ ಮೌನವನ್ನು ಭೇದಿಸಿಕೊಂಡೆದ್ದಿತು. ಲಾರಿಯು ಅತಿ ವೇಗ
ವಾಗಿ ಮುಂದೋಡುತ್ತ ಹಿಂದೆ ಧೂಳಿನ ಪರದೆ ಎಳೆದು ಕಣ್ಮರೆಯಾಗಿ
ಹೋಯಿತು. ಹಿಂಬಾಲಿಸಿ ಬರುತ್ತಿದ್ದ ಭೂಪತಿಗಳು ಬೆರಗಾಗಿ
ನೋಡುತ್ತ ನಿಂತುಬಿಟ್ಟರು, ಅವರ ಗಂಡುತನಕ್ಕೆ ಒಂದು ಕ್ಷಣ
ಪಾರ್ಶ್ವವಾಯು ಹೊಡೆದಂತಾಗಿತ್ತು. ರಾಜಿಯ ಕೈಲಿದ್ದ ಬೆಳ್ಳಿಯ
ತಟ್ಟೆ, ಅದರಲ್ಲಿದ್ದ ಸಲಕರಣೆಗಳು ನೆಲದಮೇಲೆ ಚಲ್ಲಾಪಿಲ್ಲಿಯಾಗಿ
ಬಿದ್ದಿದ್ದವು. ಅರಸಿನ ಕುಂಕುಮಗಳು ಮಣ್ಣಿನೊಂದಿಗೆ ಬೆರೆತು
ಹೋಗಿದ್ದವು. ಅವುಗಳೆಲ್ಲದರ ಮಗ್ಗುಲಿಗೆ ದಿಕ್ಕು ತೋಚದೆ ನಳಿನಿಯು
ಅಳುತ್ತ ನಿಂತಿದ್ದಳು. ಸ್ವಲ್ಪ ದೂರದಲ್ಲಿ ಆಳು ಬುಟ್ಟಿ, ಪಾತ್ರೆಗಳನ್ನು
ಹೊತ್ತು ಕೊಂಡೇ ಹಿಡಕೊಳ್ರೀ- ಹಿಡಕೊಳ್ರೀ ' ಎಂದು ಅರಚುತ್ತ,
ಏದುತ್ತ ಓಡಿಬರುತ್ತಿದ್ದ.
XXXXX
ರಾಜಿಯ ತವರುಮನೆಯವರಿಗೂ, ಅತ್ತೆಯ ಮನೆಯವರಿಗೂ ಈ ಘಟನೆಯಿಂದ ಸಂಕಟ ತಟ್ಟಿದರೂ, ಅದು ಇನ್ನೂ ಬಹಿರಂಗವಾಗಿ ಎಲ್ಲರ ಮುಂದೂ ಅವರು ಮುಂದಕ್ಕೆ ತಲೆತಗ್ಗಿಸುವಂತಾಗದಿರಲೆಂದು ಎರಡು ಕಡೆಯವರೂ ಮನೆತನದ ಮಾನ ಕಾಪಾಡಿಕೊಳ್ಳುವ ಹಂಬಲ ದಿಂದ ಪೋಲೀಸಿನವರ ತನಿಖೆಯೂ ಗುಟ್ಟಾಗಿ ನಡೆಯಲೆಂದಾಶಿಸಿದರು. ಸರಿ ! ಎಲ್ಲಕ್ಕೂ ರಹಸ್ಯದ ಮುಸುಕು ಬಿದ್ದ ಮೇಲೆ ಸತ್ಯವೆಲ್ಲಿಂದ ಹೊರಗೆ ಬರಬೇಕು ? ಒಂದೊಂದುಕಡೆ ಒಂದೊಂದು ಕತೆ ಹುಟ್ಟಿಕೊಳ್ಳುತ್ತಿತ್ತು; ಹಿಂದೆಯೇ ಅದಕ್ಕೆ ಬುಡವಿಲ್ಲವೆಂದೂ ತಿಳಿದುಬರುತ್ತಿತ್ತು. ಅಂತೂ ಒಟ್ಟಿನಲ್ಲಿ ರಾಜಿಯು ಪತ್ತೆಯೇ ಇಲ್ಲದಂತೆ ಅದೃಶ್ಯವಾಗಿ ಹೋಗಿ ನಾಲ್ಕು ದಿನ ಕಳೆದವು. ಇನ್ನು ಏನೇ ನೆರವು ಕೊಡಬಹುದಾದರೂ ಅದೆಲ್ಲ ನಿರುಪಯೋಗವೆನಿಸಿಕೊಳ್ಳುವಷ್ಟು ಕಾಲ ಕೇವಲ ಸಾಧಾರಣ