ಅಭಯ
ಕಣ್ಣುಗಳು ಜಡವಾದುವು. ದಿಂಬಿಗೆ ಬಲವಾಗಿ ಒತ್ತಿಕೊಂಡು
ತುಂಗಮ್ಮ ಮಲಗಿದಳು....ಹಾಗೆಯೇ ಕೆಲವು ನಿಮಿಷ....
ಬಾಗಿಲ ಬಳಿ ಕಾಲ ಸಪ್ಪಳವಾಯಿತು. ಅಲ್ಲೆ ನಿಂತುವು ಎರಡು
ಪಾದಗಳು.ಅವುಗಳ ಮೇಲೆ ಮಾಸಿದ ಸೀರೆಯಂಚು.ಅಷ್ಟನ್ನು ನೋಡಿಯೇ ಜಲಜ ಬಂದಳೆಂದು ತಿಳಿದುಕೊಂಡಳು ತುಂಗಮ್ಮ
"ನಿದ್ದೆ ಮಾಡ್ತಿದೀಯಾ ಅಕ್ಕ?"
"ಇಲ್ಲ ಬಾರೇ."
ಜಲಜ ಬಂದು ತುಂಗಮ್ಮನ ಬಳಿಯಲ್ಲೆ ಕುಳಿತಳು.ಆಕೆಯ ದೃಷ್ಟಿಗೆ
`ಕೊರವಂಜಿ` ಪತ್ರಿಕೆ ಬಿತ್ತು.
"ಇದರೊಳಗಿನ ಕತೆ ಚೆನ್ನಾಗಿದ್ಯಾ ಅಕ್ಕ?"
"ಹುಂ. ತಮಾಷೆಯಾಗಿದೆ."
"ಮೇಲಿರೋ ಬೊಂಬೆ? ನೋಡಿದ್ರೇ ನಗು ಬರುತ್ತೆ !"
"ಹುಂ...."
......ಅವರು ತನ್ನಿಂದ ಬಚ್ಚಿಡುವುದರಲ್ಲಿ ಅರ್ಥವಿರಲಿಲ್ಲ ತಾನೂ
ಮನುಷ್ಯಳಲ್ಲವೆ? ತಾಯಿಯಲ್ಲವೆ? ತಿಳಿಯುವ ಅಧಿಕಾರ ತನ ಗಿಲ್ಲವೆ?
"ಜಲಜಾ.."
"ಏನಕ್ಕ?"
"ನಿನ್ನ ಒಂದು ವಿಷಯ ಕೇಳ್ತೀನಿ."
ಜಲಜೆಗೆ ಅರ್ಥವಾಗದಿರಲಿಲ್ಲ.
"ಆ ಒಂದು ವಿಷಯ ಬಿಟ್ಟಿಟ್ಟು ಬೇರೇನು ಬೇಕಾದ್ರೂ ಕೇಳಕ್ಕ."
"ಏನು? ಯಾಕೆ?"
"ದೊಡ್ಡಮ್ಮಾ ಆ ವಿಷಯ ಸುಮ್ಸುಮ್ನೆ ಮಾತಾಡ್ಕೂಡ್ದು ಅಂದಿದಾರೆ.
ನೀನು ಹುಷಾರಾಗಿ ಎದ್ದು ಓಡಾಡೋವ
"ಹುಷಾರಾಗಿದೀನಲ್ಲ ಜಲಜ."
"ಉಹುಂ. ಇಷ್ಟು ಸಾಲ್ದು."