ಈ ಪುಟವನ್ನು ಪರಿಶೀಲಿಸಲಾಗಿದೆ

೨೧೪ ಅಭಯ

ನಾಚಿಕೆಯಿಂದ ಮುದುಡಿ ಕುಳಿತ ತುಂಗಮ್ಮನ ಪರವಾಗಿ ಸರಸಮ್ಮನೇ ಉತ್ತರಕೊಟ್ಟರು.

"ಅದಕ್ಕೇನಂತೆ? ಒಂದು ತಿಂಗಳಾಗ್ಲಿ. ಸಂಬಳ ಬಂದ ದಿನ ಹಬ್ಬದೂಟವೇ ಮಾಡಿಸ್ತಾಳೆ.”

ಆ ಕ್ಷಣ, ನಗೆದಿಂಗಳ ಬೆಳಕಿನಲ್ಲಿ ವಾತಾವರಣವೆಲ್ಲ ಶುಭ್ರವಾಯಿತು. ಊಟವಾದ ಮೇಲೆ ದೊಡ್ಡಮ್ಮ, ತುಂಗಮ್ಮನನ್ನು ತಮ್ಮ ಕೊಠಡಿಗೆ ಕರೆದರು.

“ಬಾ ತುಂಗ" --ಎಂದು, ತಮ್ಮ ಮಂಚದತ್ತ ಬೊಟ್ಟು ಮಾಡಿದರು ತುಂಗಮ್ಮ ಕುಳಿತುಕೊಂಡಳು

"ಇನ್ನು ನಾನು ಗೌರವ ತೋರಿಸಿ ಬಹುವಚನದಲ್ಲೇ ಮಾತನಾಡಿ ಸ್ಬೇಕು ಕಣೇ ನಿನ್ನ"

" ದಯವಿಟ್ಟು ಅದೊಂದು ಕೆಲಸ ಮಾಡ್ಬೇಡಿ ದೊಡ್ಡಮ್ಮ. ಈವರೆಗೆ ಹ್ಯಾಗೆ ಪ್ರೀತಿಯಿಂದ ಕರೀತಿದ್ರೊ ಹಾಗೇ ಕರೀರಿ ಮುಂದೇನೂ ನಂಗೆ ಗೌರವ ಬೇಡ, ಪ್ರೀತಿ ಸಾಕು?"

ಎಂದಾದರೊಮ್ಮೆ, ಅಭಯಧಾಮದಲ್ಲಿ ಅಪ್ರಿಯವಾದುದು ಏನಾದರೂ ನಡೆದಾಗ ಸರಸಮ್ಮನಿಗೆ ಸರಸಮ್ಮನಿಗೆ ಮನೋವ್ಯಥೆಯಿಂದ ಬೇಸರವೆನಿಸು ತಿತ್ತು. ಈ ಪ್ರಪಂಚದಲ್ಲಿ ತಾನು ಒಬ್ಬಂಟಿಗಳು ಎಂಬ ಭಾವನೆ ಬರು ತಿತ್ತು. ಇನ್ನು ಎಂದಿಗೂ ಹಾಗಾಗಲಾರದು ಎಂದುಕೊಂಡರು ಸರಸಮ್ಮ, ತುಂಗಮ್ಮನಂತಹ ತಿಳಿವಳಿಕೆಯ ಜೀವ ತಮ್ಮ ಬಳಿಯಲ್ಲಿದ್ದಷ್ಟು ಕಾಲವೂ ತಾವು ಬಲಶಾಲಿಯಾಗಿಯೆ ಇರುವೆನೆಂದು ಅವರಿಗೆ ಅನಿಸಿತು. ಬಳಲಿದ್ದ ಅವರ ಬಾಹುಗಳಲ್ಲಿ ಹೊಸ ಚೇತನದ ಸಂಚಾರವಾಯಿತು. ಮತ್ತೆ ತಾನು ಯುವತಿಯಾದ ಹಾಗೆ ಅವರಿಗೆ ಭಾಸವಾಯಿತು.

"ನನಗೆ ಇವತ್ತು ತುಂಬಾ ಸಂತೋಷವಾಗಿದೆ ತುಂಗ.”

ತುಂಗಮ್ಮನಿಗೂ ಸಂತೋಷವಾಗಿತ್ತು-- ಮಾತು ಕೂಡ ಆಡಲಾಗ ದಷ್ಟು ಸಂತೋಷವಾಗಿತ್ತು.

“ಎಷ್ಟೋ ವೇಳೆ ನನಗೆ ನಿರಾಸೆಯಾಗ್ತಿತ್ತು ತುಂಗ. ಈ ಅಭಯ