ಈ ಪುಟವನ್ನು ಪರಿಶೀಲಿಸಲಾಗಿದೆ

ಅಭಯ ೨೩೧

' ಇಲ್ಲಿಂದಲೇ ಯಾರೋ ಬರೆದಿದ್ದಾರೆ?'

-ಎಂದುಕೊಂಡರು ಸರಸಮ್ಮ ಪ್ರತಿಸಾರೆ ಪ್ರತಿಯೊಂದು ಕಾಗದ ಒಡೆದಾಗಲೂ ಕುತೂಹಲದಿಂದಲೇ ಇರುವುದು ಅವರ ಸ್ವಭಾವ. ಈಸಲವೂ ಅಷ್ಟೇ ಆತುರದಿಂದ ಲಕೋಟೆಯನ್ನು ಅವರು ಒಡೆದರು.

ಬರೆದವನ ಸಹಿಯನ್ನು ನೋಡಿ, ಮೊದಲ ವಾಕ್ಯವನ್ನೋದಿ, ಸರಸಮ್ಮ ಮುಗುಳುನಕ್ಕರು

ಅಂತಹ ಒಳ್ಳೆಯದಿನದಲ್ಲಿ ಸ್ವಾರಸ್ಯಪೂರ್ಣವಾದ ಸಮಾಚಾರ ವನ್ನಲ್ಲದೆ ಬೇರೇನನ್ನಾದರೂ ಅವರು ನಿರೀಕ್ಷಿಸುವುದು ಸಾಧ್ಯವಿತ್ತೆ ?

ಆತ ಬರೆದಿದ್ದ :

“ ತಾವುಗಳು ಹೋದ ವರ್ಸ ಡಿಶೇಂಬರ್‌ನಲ್ಲಿ ತಿಳಿಸಿದ ಪ್ರಕಾರ ಈಗ ಪುನಃ ಬರೀತಾ ಇದ್ದೇನೆ. ನನ್ನ ಬಯಕೆಯನ್ನು ಪೂರೈಸುವುದು ತಮ್ಮ ಗಳನ್ನೇ ಹೊಂದಿಕೊಂಡಿದೆ ಬೇರೆ ಯಾರೂ ಇಲ್ಲದೆ ತಮ್ಮನ್ನು ಶರಣು ಹೊಕ್ಕಿದ್ದೇನೆ ನಮ್ಮ ಸಾಹೇಬರು ಕೂಡಾ ಅದೇ ಸರಿ ಅಂತಾ ಹೇಳಿದ್ದಾರೆ. ಆದ್ದರಿಂದ ತಾವುಗಳು ದೊಡ್ಡ ಮನಸ್ಸು ಮಾಡಿ ಈಸಲಿ ನಿರಾಶೆಪಡಿಸಬಾರದು. ನಾಡಿದ್ದು ಘಳಿಗೆ ಸರಿಯಾಗಿದೆ ಅಂತಾ ಜೋಯಿಸರು ಅಭಿಪ್ರಾಯಪಟ್ಟ ದ್ದಾರೆ. ಆಗ ಹೊರಟು ತಮ್ಮಗಳ ಭೇಟಿಗೆ ಬರುತ್ತೇನೆ. ಹೆಚ್ಚು ಬರೆಯಲು ಶಕ್ತನಲ್ಲ,

ಇಂತಿ ಸೇವಕ

ಮಹಾಬಲ.

ಸಹಿಯನ್ನಷ್ಟೇ ಇಂಗ್ಲಿಷಿನಲ್ಲಿ ಹಾಕಿದ್ದ ಈ ಮಹಾಬಲ ವಿಚಿತ್ರ ಮನುಷ್ಯನಾಗಿದ್ದ. ಆತ ಆದಾಯ ತೆರಿಗೆಯ ಕಚೇರಿಯಲ್ಲಿ ಜವಾನ. ಕೈ ಹಿಡಿದ ಹೆಂಡತಿ ಒಂದು ವರ್ಷದ ಹಿಂದೆ ತವರು ಮನೆಗೆ ಓಡಿ ಹೋದವಳು ತಿರುಗಿ ಬರಲಿಲ್ಲ. ಅವಳನ್ನು ತಾಯಿತಂದೆಯರು ಕಳುಹಿಸಲೂ ಇಲ್ಲ. ಕರೆಯಲು ಹೋದ ಮಹಾಬಲನನ್ನು ಅವನ ಅತ್ತೆ, “ನಮ್ಮ ಮಗಳಂಥಾ ರತ್ನಾನ ಕಟ್ಟೋಣೋಕೂ ಭಾಗ್ಯ ಬೇಕು ಕಣಪೋ, ಎಂದು ಬಯ್ದು ಅವನನ್ನು ಓಡಿಸಿಬಿಟ್ಟಿದ್ದಳು.