ಈ ಪುಟವನ್ನು ಪರಿಶೀಲಿಸಲಾಗಿದೆ

ಅಭಯ

೨೮೧

ಬೀದಿಯ ದೀಪಗಳು ಆಗಲೇ ಹತ್ತಿಕೊಂಡಿದ್ದುವು. ಸಮೀಪದ ಮನೆ
ಗಳಿಂದ ಜನರು ಕಿಟಕಿಗಳ ಬಳಿನಿಂತು ಕುತೂಹಲದಿಂದ ಅಭಯಧಾಮದತ್ತ
ನೋಡುತಿದ್ದರು.
ರಾತ್ರಿ ಊಟ ತಡವಾಯಿತು ವಾರ್ಷಿಕೋತ್ಸವದ ವಿಶೇಷ
ಅಡುಗೆ.
ಗುಂಪುಗುಂಪಾಗಿ ಹುಡುಗಿಯರು, ಹರಟೆ ಹೊಡೆಯುತ್ತಲೊ ನಗೆ
ಮಾತಾಡುತ್ತಲೊ ಹಾಡುತ್ತಲೊ ಹೊತ್ತು ಕಳೆದರು
ಊಟಕ್ಕೆ ಕುಳಿತಾಗ ಸರನಮ್ಮನ ಪಕ್ಕದಲ್ಲೆ ತುಂಗಮ್ಮನಿದ್ದಳು ;
ಆಕೆಯ ಬಲಕ್ಕೆ ಜಲಜ.
ತುಂಗಮ್ಮನ ತಟ್ಟೆಯನ್ನು ನೋಡುತ್ತ ಸರಸಮ್ಮ ಅಂದರು :
"ಹೇಗಾಗಿದೆ ನೋಡು ನಿನ್ನ ತಟ್ಟೀರೂಪ. ಬೇರೆ ಒಂದು ಕೊಂಡ್ಕೋ
ಬೇಕಮ್ಮ."
"ನಿಧಾನವಾಗಿ ಕೊಂಡುಕೊಂಡರಾಯಿತು.”
"ಏನು, ಏನಂದಿರಿ ದೊಡ್ಡಮ್ಮ?"
-ಎಂದು ಜಲಜ ಕತ್ತು ಚಾಚಿ ಕೇಳಿದಳು.
"ತುಂಗಮ್ಮನ ತಟ್ಟೆ ಹಳೇದಾಯ್ತಲ್ಲಾ, ಅದಕ್ಕೆ ಅಂದೆ ”
"ಆದರೆ ದೊಡ್ಡಮ್ಮ, ಅದು ಹ್ಯಾಗಾಗುತ್ತೆ ? ಯಾವತಟ್ಟೆನೋಡಿ
ಅದು....!"
"ಯಾವುದೇ ?"
"ಭಾಗ್ಯದ ತಟ್ಟೆ ದೊಡ್ಡಮ್ಮ.”
ಆ ತಟ್ಟೆಯ ವಿಷಯವಾಗಿ ಹುಡುಗಿಯರು ಕಟ್ಟಿದ್ದ ಕತೆ ಸರಸಮ್ಮನಿಗೆ
ನೆನಪಾಗಿ ಅವರು ನಕ್ಕರು.
"ಅದೇನೇ ಜಲಜ, ಎಲ್ಲೂ ಸೇರಿ ತುಂಗನ್ನ ಕಳಿಸ್ಬಿಡ್ಬೇಕೂಂತ
ಮಾಡಿದೀರೇನ್ರೆ ?”
"ನಾವ್ಯಾಕೆ ಕಳಿಸ್ತೀವಿ ದೊಡ್ಡಮ್ಮ. ರಾಜಕುಮಾರ ಕರಕೊಂಡು
ಹೋಗೋಕೆ ಬಂದ್ರೆ ಅವನೇನು ನಮ್ಮ ಒಪ್ಗೆ ಇಲ್ಲಾಂತ ಸುಮ್ಮೆ
ಕೂತ್ಕೋತಾನೆ ???