ಈ ಪುಟವನ್ನು ಪರಿಶೀಲಿಸಲಾಗಿದೆ

ಗಳು ಮಲಗಿದ್ದ ಒತ್ತಡವಿದ್ದ ವಾರ್ಡಿನಲ್ಲಿ ಹತ್ತಾರು ಬೆಡ್ಡುಗಳ ನಡುವೆ

ಲಲಿತೆಗಾಗಿ ಒಂದುಮಂಚ.

ಅಲ್ಲಿ ಒಬ್ಬೊಬ್ಬ ರೋಗಿಯ ಪರವಾಗಿಯೂ ಅವರವರ ಸಂಬಂಧಿಕರು

ಅಲ್ಲಿಯೇ ವಾಸಮಾಡುತ್ತಿದ್ದಂತೆ ತೋರಿತು!

"ದೊಡ್ಡಮ್ಮ! ಎಷ್ಟೊಂದು ಗಲಾಟೆ ಇಲ್ಲಿ! ಲಲಿತಾನ ಒಳ್ಳೇಕಡೆ

ಮಲಗಿಸೋಕೆ ಆಗಲ್ವೆ?"

"ಹ್ಯಾಗಾಗುತ್ತೆ? ಸ್ಪೆಷಲ್ ವಾರ್ಡಿಗೆ ಎಲ್ಲಿಂದ ತರೋಣ

ದುಡ್ಡು?"

ತುಂಗಮ್ಮನಿಗೆ ಉಸಿರುಕಟ್ಟಿತು. ತಮ್ಮಲ್ಲಿ ದುಡ್ಡಿಲ್ಲ, ತಾವು ಬಡವರು,

ಅಲ್ಲವೆ?

"ದೊಡ್ಡಮ್ಮ! ಒಂದು ಹೇಳ್ತೀನಿ ಏನೂತಪ್ಪು ತಿಳ್ಕೋಬೇಡಿ.

ನನ್ನ ಸಂಬಳಾನ__"

ಸರಸಮ್ಮನಿಗೆ ಗಂಟಲು ಒತ್ತರಿಸಿ ಬಂತು.

"ಅದಲ್ಲ ತುಂಗ. ಹೀಗೆ ಒಂದ್ಸಾರಿ ಮಾಡಿದ್ವಿ ಅಂದ್ರೆ ಪ್ರತಿಸಾರೇನೂ

ಮಾಡೋಕಾಗುತ್ತ ?"

ತಪ್ಪೇನು?- ಎಂದು ಕೇಳಬೇಕೆನ್ನಿಸಿತು ತುಂಗಮ್ಮನಿಗೆ. ಆದರೆ

ದೊಡ್ಡಮ್ಮನ ಮಾತಿಗೆ ಪ್ರತಿಯಾಡಬಾರದೆನ್ನಿಸಿತು.

"ಇಲ್ಲೇ ಇದ್ದರೂ ಪರವಾಗಿಲ್ಲ ಅಲ್ವಾ ?"

ಇಷ್ಟೊಂದು ಜನ ಇಲ್ವೆ? ದೇವರದಯದಿಂದ ನಮ್ಮ ಲಲಿತಾಗೆ

ಏನೂ ಆಗಲ್ಲ. ದೇಹಬಲ ಚೆನ್ನಾಗಿದೆ ಸುಲಭವಾಗಿ ವಾರಾಗ್ತಾಳೆ."

ಲಲಿತೆಯನ್ನು ಮಲಗಿಸಿ ಹೊರಗೆ ಜಗಲಿಯಲ್ಲಿ ನಿಂತು, ಮಾರ್ಕೆಟಿನ

ಜನಸಮರ್ದದತ್ತ ನೋಡುತಲಿದ್ದಾಗ, ಚಿಕ್ಕಮೋರೆ ಮಾಡಿ ಆವರೆಗೂ

ಮೌನವಾಗಿದ್ದ ಜಲಜ ಕೇಳಿದಳು:

"ರಾತ್ರೆ ಇಲ್ಲಿ ಯಾರಾರು ಇರ್ಬೇಕು ಅಲ್ವೆ ದೊಡ್ಡಮ್ಮ?"

"ಡಾಕ್ಟರನ್ನ ಕೇಳ್ತೀನಿ ನೋಡೋಣ, ಹಿಂದೆ ಎರಡು ಸಾರೇನೂ

ಯಾರೂ ಇರಬೇಕಾದ್ದಿಲ್ಲ ಅಂದಿದ್ರು."

"ಅವರು ಯಾವಾಗಲೂ ಹಾಗೆಯೇ ಅಂತಾರೆ, ಆದರೆ ನಾವು--