ಈ ಪುಟವನ್ನು ಪರಿಶೀಲಿಸಲಾಗಿದೆ

ನಿಮಿಷಗಳು ಬಲು ನಿಧಾನವಾಗಿ ಕಳೆದುವು.

ಸ್ವಲ್ಪ ಹೊತ್ತಿನಲ್ಲೇ ಸೋಮಶೇಖರ, ಯುವತಿಯಾದ ಒಬ್ಬ ಲೇಡಿ

ಡಾಕ್ಟರೊಡನೆಯೂ ಒಬ್ಬ ಯುವಕ ಡಾಕ್ಟರೊಡನೆಯೂ ಬಂದ.

ಹತ್ತಿರಬರುತಿದ್ದಂತೆ ಲೇಡಿ ಡಾಕ್ಟರು ಕೇಳಿದರು.

"ಎಲ್ಲಿ ಮಿಸ್ಟರ್ ಸೋಮಶೇಖರ್ ನಿಮ್ಮ ಪೇಷೆಂಟು?"

ಹಾಗೆ ಕೇಳಿದಾಗ ಆ ಡಾಕ್ಟರ ತುಟಗಳು ಸೂಕ್ಷ್ಮವಾಗಿ ನಕ್ಕಂತೆ

ತುಂಗಮ್ಮನಿಗೆ ತೋರಿತು. ಯಾಕೊ, ಆದೃಶ್ಯ ಆವಳಿಗೆ ಇಷ್ಟವಾಗಲಿಲ್ಲ.

ಸೋಮಶೇಖರ ಲಲಿತೆಯತ್ತ ಬೊಟ್ಟುಮಾಡಿದ ಗಂಡಸು ಡಾಕ್ಟರನ್ನು

ಉದ್ದೇಶಿಸಿ ಅವನೆಂದ:

"ಅಲ್ಲ ನಾಗರಜ್, ಇಂಧಗಲಾಟೀಲೂ ಕಾಹಿಲೆ ವಾಸಿ

ಯಾಗುತ್ತೇನಯ್ಯ?"

"ಅದೆಲ್ಲಾ ಕೇಳ್ಬೇಡ ನಾಳೆ ಚುನಾವಣೆಗೆ ನಿಂತು ಶಾಸನ ಸಭೆಗೆ

ಹೋಗಿ, ಆಸ್ಪತ್ರೆಗೆ ಹೊಸಕಟ್ಟಡಬೇಕು--ಜಾಸ್ತಿ ಬೆಡ್ಡು ಬೇಕು ಅಂತ

ಗಲಾಟೆ ಮಾಡು.ಈಗ--?"

ಆ ಡಾಕ್ಟರ ಮಾತು ನಿಲ್ಲಿಸಿ ಲೇಡಿ ಡಾಕ್ಟರು ಅಂದರು.

"ನೋಡಿ, ಆ ಕೊನೇ ಪೇಷೆಂಟು ನಾಳೆ ಬೆಳಿಗ್ಗೆ ಡಿಸ್ ಚಾರ್ಜು

ಆಗ್ತಾಳೆ"

ಕೊನೆಯ ಬೆಡ್ಡು ಅದು ಚೆನ್ನಾಗಿತ್ತು ಕಿಟಿಕಿಯಬಳಿ, ಗಾಳಿ ಓಡಾ

ಡುವ ಜಾಗ.

"ಹಾಗಾದರೆ ನಾಳೆ ಈಕೇನ ಅಲ್ಲಿ ಹಾಕಿಸ್ತೀರಾ? ಪ್ಲೀಸ್!"

ಡಾ ನಾಗರಾಜ್ ಅಂದರು:

"ಹೂಂ. ಅಷ್ಟೂ ಮಾಡ್ದೆ ಇರೋಕಾಗುತ್ತೇನಯ್ಯ, ನೀನು ಕೇಳ್ದೆ

ಅಂದ್ಮೇಲೆ."

ಬಂದಿದ್ದ ಡಾಕ್ಟರಿಬ್ಬರೂ ಲಲಿತೆಯ ತಲೆಯಮೇಲೆ ಮಂಚಕ್ಕೆತಗಲಿಸಿ

ತೂಗಹಾಕಿದ್ದ ಚಾರ್ಟನ್ನು ನೋಡಿದರು. ಒಬ್ಬೊಬ್ಬರು ಒಂದೊಂದು ವಿಧ

ವಾಗಿ ತುಂಗಮ್ಮನತ್ತ ದೃಷ್ಟಿಹಾಯಿಸಿದರು.

ಯುವತಿ ಡಾಕ್ಟರು ಮುಗುಳುನಗುತ್ತಲೇ ಅಂದರು: