ಈ ಪುಟವನ್ನು ಪ್ರಕಟಿಸಲಾಗಿದೆ

"ಹುಂ?"

"ಜಂಭದ ಕೋಳಿ! ಟನ್ ಸಿನ್ ಎರಡಿಂಗ್ಲಿಷು ಬರತ್ತೇಂತ ಹ್ಯಾಗಾ

ಡ್ತಾರೆ!"

ತುಂಗಮ್ಮನಿಗೆ ನಗು ಬಂತು.ಆ ಅಧ್ಯಾಸಿಕೆ ವಾತ್ರಳಾಗದೇ ಇರು

ವುದು ತನ್ನೊಬ್ಬಳ ಮೆಚ್ಚುಗೆಗೆ ಮಾತ್ರನೇ ಅಲ್ಲ ಹಾಗಾದರೆ.

"ನಂಗೂ ಅವರ್ನ ನೋಡ್ದಾಗ ಹಾಗೇ ಅನಿಸ್ತು ಜಲಜ."

"ಯಾರಿಗಾದರೂ ಅನಿಸುತ್ತೆ"

"ಅವರಿಗೆಷ್ಟೂ ಸಂಬಳ?"

"ಎಪ್ಪತ್ತು ರುಪಾಯಿ ಕೊಡ್ತಾರೆ ತಿಂಗಳಿಗೆ."

"ದೊಡ್ದಮ್ಮನಿಗಿಂತಾನೂ ದೊಡ್ಡೋರಹಾಗೆ ತೋರಿಸ್ಕೋತಾರೆ

ಅಲ್ವೆ?"

"ಹೂಂ -ಹೊಂ-....ಮೊದಲು ಒಳ್ಳೆಯೋರೇ ಒಬ್ಬರಿದ್ರು.ಬೇರೆ

ಕಡೆ ಕೆಲಸ ಸಿಕ್ತೂಂತ ಹೊರಟೋದ್ರು. ಆಮೇಲೆ ಕಮಿಟಿಯೋರ್ನ ಹಿಡ್ದು ಏನೋ ಮಾಡಿ ಬಂದರು ಈ ಮಹಾರಾಯ್ತಿ."

"ಕಮಿಟಯೋರು?"

"ಹೊಂ. ಅಭಯಧಾಮಾನ ನೋಡ್ಕೊಳ್ಳೋ ಕಮಿಟಿ ಇಲ್ವೆ?"

"ಓ, ಅವರೇ ದೊಡ್ಡವ್ನಿಗೂ ಸಂಬಳ ಕೊಡ್ತಾರೇನು ಹಾಗಾದ್ರೆ?"

"ನೋಡಿದ್ರಾ? ಎಷ್ಟು ಬೇಗ ತಿಳಕೊಂಡ್ಬಿಟ್ರಿ! ನಮ್ಮಲ್ಲೇ ಕೆಲವಿವೆ.

ಅವಕ್ಕೆ ಎಷ್ಟು ಹೇಳಿದ್ರೂ ಅರ್ಥವಾಗಲ್ಲ ನಮ್ಮನ್ನೆಲ್ಲಾ ಕೂಡಹಾಕಿರೋ ದರಲ್ಲಿ ಏನೋ ಮೋಸ ಇದೆ ಅಂತಲೇ ಅವರಯೋಚ್ನೆ.ಡೊಡ್ಡಮ್ಮನಿಗೆ ಇದರಿಂದ ಲಾಭ ಬರತ್ತಂತೆ!"

ಆ ಮಾತು ಪ್ರಿಯವಾಗಿರಲಿಲ್ಲ ತಮ್ಮೊಳಗಿನ ಕೆಲವರನ್ನು ತಾವೇ

ದೂಷಿಸುವುದು ಸರಿಯೆ? ಹಾಗೆ ನೋಡಿದರೆ,ಅದು,ದೂಷಣೆಯಾಗುವುದು ಸುಳ್ಳಾಗುವುದು ಸಾಧ್ಯವಿರಲಿಲ್ಲ.ಜಲಜ ಸುಳ್ಳಾಡುವಳೆಂದು ನಂಬುವುದು ಸಾಧ್ಯವೇ ಇರಲಿಲ್ಲ.

ಜಲಜ ಹೇಳಿದುದು ಸತ್ಯವಾಗೆದ್ದುದರಿಂದಲೇ ತುಂಗಮ್ಮ ಮುಖ

ಬಾಡಿತು.