ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಹಳೆ ವÆದತೊಡಗಿದರು. ನೋಡು ನೋಡುತ್ತಿದ್ದಂತೆ ಗವುಳೇರ ಮೋಣಿ ಕಡೇಲಿಂದ ಪೆಟಿಗೆಪ್ಪ, ತಾಳಪ್ಪ, ದಿಮುಡೆಪ್ಪ, ಗಂಟೆಪ್ಪ, ತಪಡೆಪ್ಪ ಮೊದಲಾದ ಸ್ರೀದೇವಿ ಭಜನಾಮಂಡಳಿ ಯವರು ನಮ್ಮವ್ವ ತಾಯಿ ಜಗದಂಬಾ, ಜಗದಂಬಾ ಯಂದು ಯೇರಿಕೆ ದನಿಯಲ್ಲಿ ಭಜನಾ ಮಾಡುತ ಬಂದರು. ಅರೆಗಳಿಗೆ ವಳಗ ಯೀಯಲ್ಲ ಗಲಾಟೆ ಗದ್ದಲ ಗವುಜಗದಿಂದಾಗಿ ವಬ್ಬರ ಮಾತು ಯಿನ್ನೊಬ್ಬರಿಗೆ ಕೇಳಿಸದಂಗಾತು. ಜಗಲೂರವ್ವ “ನನ್ನ ಗಂಡನ ಸರೀರವನ್ನು ಆಕ್ಕರಮಿಸಿಕೊಂಡಾಕೆ ಯಾವಾಕೇ ಆಗಿರ್ಲಿ.. ಅವ್ಳು ರಂಡ್ಯಾಗ್ಲಿ”ಯಂದು ಮುಂತಾಗಿ ಯೇರಿಕೆ ದನಿಯಲ್ಲಿ ಆವಾಜು ಹಾಕದಿದ್ದಲ್ಲಿ ಗುಂಪು ಸಂತೆಯಾಗದೆ ಯಿರುತ್ತಿರಲಿಲ್ಲ, ಸಂತೆ ಜಾತುರೆಯಾಗದೆ ಯಿರುತ್ತಿರಲಿಲ್ಲ. ಅನುವು ಆಪತ್ತಿನಲ್ಲಿ ತಾವಾಗೋರು ಯಂಬ ಕಾರಣಕ್ಕೆ ಅಲ್ಲಿ ವುಳುಕೊಂಡಿದ್ದ ಮಂದಿ ಪಯ್ಕಿ ಹಿರೀಕನಾದ ಗೊಡ್ಲೆಯ್ಯನು “ಯಸನ ಯಂಬ ಬೆಂಕೀಗೆ ಮಯ್ನ ಕಾಸ ಬ್ಯಾಡವ್ವಾ.. ಯಾವಾಗ ನಿನ ಗಂಡ ನಿಸೂರು ಯಿದ್ದನವ್ವಾ ಮಗಳೆ.. ಅಯ್ಲುಗೇಡಿಯಂಗ ಆಡುತ್ತಿದ್ದನಲ್ಲಾ.. ಅದರಂಗ ಅವಗ ಅವ್ವ ಯಂಬ ಅಯ್ಲು ಬಡಕೊಂಡಿರಬೌದು.. ಅದು ಯಿವತ್ತಲ್ಲ ನಾಳೆ ಬುಟ್ಟೋಯ್ತದೆ.. ನಿನ ಗಂಡ ನಿನಗೆ ದಕ್ಕೇ ದಕ್ಕುತಾನ.. ಗುಡ್ಡದಂಥಾ ಮನುಶ್ಯೋಳಾದ ನೀನು ಅಳ್ಳೋಗ ಬ್ಯಾಡ ತಾಯಿ ಅಳ್ಳೋಗಬ್ಯಾಡಾss” ಯಂದು ಮುಂತಾಗಿ ಬುದ್ದಿ ಹೇಳುತಾ ಹೇಳುತಾ ಮನ್ಯಾಗೆ ಬದುಕಯ್ತೆ.. ವದಕನಯ್ತೆ ಯಂದನಕಂತ ಕುಂಡಿ ಅಡಿಯಿದ್ದ ವಲ್ಲಿಯನ್ನು ಕೊಡವಿ ಹೆಗಲ ಮ್ಯಾಲ ಹಾಕ್ಕೊಂಡು ಅಲ್ಲಿಂದ ಹೊತಾ ಹೋದನು...

ಯಷ್ಟೋ ಹೊತ್ತಿನವರೆಗೆ ವುದಿಸುತ್ತಾ ಅಸ್ತವಾಗುತಾಯಿದ್ದ ಮಂದಿ ಕ್ರಮೇಣ ಕರುಗುತಾ ಬಂತು. ಯಿನ್ನು ವುಳುಕೊಂಡಿದ್ದವೆಂದರೆ ವುಪಾಸನಾ ರೊತಾರೂಢವಾಗಿದ್ದ ಮೂರ್ನಾಕು ನಾಯಿಗಳು, ಅಯಿದಾರು ಮಂದಿ ಅವ್ವನ ಸತ್ಯುಳ್ಳ ಸರಣಾರು, ತನ್ನವ್ವ ಮಾಡುತಲಿದ್ದ ದುಕ್ಕದ ರೇಶಿಮೆ ನೂಲಿನ ಗುಂಟ ನಡೆದು ಬಂದು ಸೂರ ಆಟು ದೂರದಲ್ಲಿ ನಿಂತು ಸಕಲೊಂದು ಯಿದ್ಯಾಮಾನವನ್ನು ಗಮನಿಸುತಯಿತ್ತು. ಅದು ತನ್ನವ್ವನ ಕಣ್ಣೊಳಗೂ ನೀರಿದೆಯಲ್ಲಾ ಯಂದು ಅಚ್ಚರ್ಯ ಭರಿತ ದುಕ್ಕವನ್ನನುಭೋಸುತಲಿತ್ತು. ಮಂದಿ ಮುಕ್ಕಾಲು ವೀಸೆ ಕರುಗುವುದನೇ ಯದುರು ನೋಡುತ ನಿಂತಿದ್ದ ಅದು ಬಲು ಚೂಚುಮವಾಗಿ ವಂದೊಂದೆ ಹೆಜ್ಜೆಯನಿಕ್ಕುತ ಹಿಂದೇಸಿಂದ ಅಂಜುತ, ಅಳುಕುತ ಬಂದು ತನ್ನ ಮಾತ್ರುಸೊರೂಪಿಣಿಯ ವದನದ ಮ್ಲಾನವತೆಯನ್ನು