ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಯಟಕ್ಕೀಲೆ ಅವನಿಗೆ ಯಲ್ಡು ಕೂರಿಗೆ ಜಮೀನನ್ನು ಮಂಜೂರು ಮಾಡಿದನು. ಆಗ ಅವನ ಹೆಂಡತಿ ಯೇಳು ತಿಂಗಳ ಬಸುರಿಯಿದ್ದಳಲ್ಲ.. “ಅಯ್ಯಾ ದೊರೆಯೆ. ನಿನ್ನಿಂದ ನಾನು ವುದ್ದಾರವಾದೆನು. ಗಂಡುಕೂಸು ಹುಟ್ಟಿದಲ್ಲಿ.. ಅದಕ್ಕೆ ನಿನ್ನ ಹೆಸರನ್ನು ಯಿಡುತ್ತೇನೆ.. ಆಗ್ಗೆ ನೀನು ತೊಟ್ಟಿಲ ಕಾರ್ಯಕ್ಕೆ ಬಂದು ನನ್ನ ಮಗನಿಗೆ ಆಸುರವಾದ ಮಾಡಬೇಕು” ಯಂದು ಯಿನಂತಿ ಮಾಡಿಕೊಂಡನು. ಅದರಂತೆ ಮುಂದೊಂದಿನ ಅವನಿಗೆ ಗಂಡುಕೂಸಾತು. ಆ ಕೂಡಲೆ ಕತ್ತೆಯೊಂದನ್ನು ಬಾಡಿಗೆ ಪಡೆದು ಅದರ ಮ್ಯಾಲ ಕುಂತು ಕಡಪ ಪಟ್ಟಣವ ತಲುಪಿ ಸಾಹೇಬನಿಗೆ ಸಾಂಪ್ರತು ಸುದ್ದಿ ಮುಟ್ಟಿಸಿದನು.. ಕೊಟ್ಟ ಮಾತಿನಂತೆ ಥಾಮಸು ಮನ್ರೋ ಸಾಹೇಬನು ರಾಚೋಟಿಯ ಆ ಬಡ ಕಿಷ್ಣನ ಮಗನ ತೊಟ್ಟಿಲು ಕಾರ್ಯದಲ್ಲಿ ಪಾಲ್ಗೊಂಡಿರುವಾಗ್ಗೆ.. ಅಯ್ನೋರು ಆ ಕೂಸಿಗೆ ಮನ್ರೋಪ್ಪನೆಂದು ನಾಮಕರಣ ಮಾಡುತ್ತಿರುವಾಗ್ಗೆ...

ಗೂಢಾಚಾರರಾದ ಗುತ್ತೆಪ್ಪ ಮತ್ತಾತನ ಸೋದರರು ನೀಡಿದ ಪತ್ತರವನ್ನು ಮೋದಿಸಿ ಕೆಂಡಮಂಡಲ ವಾದ ಜರಿಮಲೆಯ ಜಗದಪ್ಪ ನಾಯಕನು ನಿಚ್ಚಾಪುರದ ಬಾಲಪ್ಪನಾಯಕನನ್ನು ಮಿತ್ರದ್ರೋಹಿ, ಪರಮ ಘಾತಕ, ಅಮವಾಸೆ ವಳಗಾಗಿ ನಿನ್ನ ರುಂಡವನ್ನು ಚೆಂಡಾಡಿ ತಂದು ಜರಿಮಲೆಯ ಅಗಸೆ ಬಾಗಿಲಿಗೆ ಕಟ್ಟಿಸುವೆನೆಂದು ಘೂೕರ ಸಪಥ ಮಾಡುತ್ತಿರುವಾಗ್ಗೆ....

ತಾಸುಗಳ ಪರ್ಯಂತರ ವಂದರ ಮ್ಯಾಲೊಂದು ಪ್ರಸ್ನೆಗಳನು ಹಾಕಿ ಯಿಚಾರಿಸಿದ ನಂತರ ಜೊನ್ನಗಿರಿಯ ರಾಜನಾದ ಕದಿರೆಪ್ಪನಾಯಕನು ಮದ್ದಿಕೇರಿಯ ಸಂತರಸ್ತರನ್ನು ತನ್ನ ಸಯ್ನಕ್ಕೆ ಸೇರಿಕೊಳ್ಳುತ್ತಿರುವಾಗ್ಗೆ....

ಯಿತ್ತ ಕುದುರೆಡವು ಪಟ್ಟಣದ ಅರಮನೇಲಿದ್ದ ರಾಜಮಾತೆ ಭಯ್ರಮಾಂಬೆಯ ಕಳುವಿದ್ದ ವಂದೆಲ್ಡು ಮಂದಿ ಸಯ್ನಿಕರು ಥೆಳಗೇರಿಯಿಂದ ಹೊತ್ತು ತಂದ ಯಿದ್ಯಾಮಾನಗಳನ್ನು ಕಿವಿಯಾರೆ ಕೇಳಿ ತಿಳಿದು ಭ್ರಮಾಧೀನಳಾಗಿ ರೆಟ್ಟೇಲಿರದಿದ್ದ ರವುಸವನ್ನು ವಡಲೊಳಗೆ ತಂದುಕೊಂಡು “ಯಲಮೋ.. ಮೋಬಯ್ಯನೇ.. ರಾಜಾಗ್ನೆಯನ್ನು ದಿಕ್ಕರಿಸಿದೆಯಾ.. ಮೂರು ತಲೆಮಾರು ದುಡಿದರೂ ತೀರದಷ್ಟಿರೋ ಸಾಲದ ರುಣವನ್ನು ಮರೆತೆಯಾ? ನಿನ್ನ ಯಕಃಶ್ಚಿತ್ ಮಯ್ಯೊಳಗೆ ಸಾಂಬವಿ ಹೊಕ್ಕೊಂಡಿರುವಳೆಂದು ಕಪಟ ನಾಟಕವನ್ನಾರಂಬಿsಸಿರುವೆಯಾ.. ನಿನಗೆ ತಕ್ಕ ಶಾಸ್ತಿ ಮಾಡಿಸುತ್ತೇನೆ ನೋಡುತ್ತಿರು.. ಮತ್ತೆ ನಿನ ಕಯ್ಲಿ ಪಿಕದಾನಿ ಹಿಡಿಸದಿದ್ದರೆ ನಾನು ರಾಜ ಮಾತೆಯೇ ಅಲ್ಲ’’ ಯಂದು ಮನದೊಳಗೆ ಸಪಥ ಮಾಡುತ ಹೊರಗಡೆ ಕೇಳಿಸುವಂತೆ