ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಡಿ ಹಿಂದಲ ಮೂಳೆ ಮೋಬಯ್ಯ ಹಂಗೇ ವಂದು ಜೋಂಪು ನಿದ್ದೆ ಹೋದನು. ನಿದ್ದೆ ಹೋದೊಡನೆ ಕಂಡ ಕಣಸಲ್ಲಿ ಹೆಂಗೆಂಗೊ ಆಗತೊಡಗಿತು. ಮೂಡ ಬಾರದ ತರಾವರಿ ಚಿತ್ರಯಿಚಿತ್ರಗಳು ಮೂಡ ತೊಡಗಿರುವಂತೆ.. ಕಾಣಬಾರದ ತರಾವರಿ ಮಂದಿ ಕಾಣತೊಡಗಿರುವಂತೆ.. ಮನಯಂಬುವ ಯಿಸ್ತಾರವಾದ ಜಗುಲಿಯ ಮ್ಯಾಲ ಗುಂಪು ಗುಂಪಾಗಿ ಕೂತು ಅನುಭಾವದ ನೆಲೆಯಲ್ಲಿ ಮಾತನಾಡಲಾರಂಬಿsಸಿರುವಂತೆ.. ತನ್ನ ದೇಹ ಯಂಭೋ ದೇಹವು ಗಿರಿಗುಡ್ಡ ಗವ್ವರಗಳಲ್ಲಿ ತಾನೇ ತಾನಾಗಿ ಸುಳಿದಾಡುತ್ತಿರುವಂತೆ.. ಹೆಜ್ಜೆಗೊಂದೊಂದರಂತೆ ಯದುರಾದ ಗಂಟೆ, ಜಾಗಟೆಗಳನ ಭಾರಿಸುತ್ತಿರುವಂತೆ.. ಶಂಖ ಕಹಳೆ ಮೂದುತ್ತಿರುವಂತೆ.. ತಾನು ಬಿಡುತ್ತಿರುವ ವಂದೊಂದು ವುಸುರು ಬಿರುಗಾಳಿ ಸುಂಟರುಗಾಳಿಗಳಾಗಿ ಸಂಚರಿಸುತ್ತಿರುವಂತೆ.. ತಾನು ಯಿಡುತ್ತಿರುವ ವಂದೊಂದು ಹೆಜ್ಜೆಗೆ ಭೂಮ್ತಾಯಿ ಗಡಗಡ ನಡುಗುತ್ತಿರುವಂತೆ.. ಕಾಗೆ, ಗುಬ್ಬಿ, ಹದ್ದು, ರಣಹದ್ದುಗಳಿವೇ ಮೊದಲಾದ ಪಕ್ಷಿಗಳು ಆಕಾಸದ ತುಂಬೆಲ್ಲ ಅಂಡಾವರನವಾಗಿರುವಂತೆ.. ಹುಲಿ, ಸಿಮ್ಮ, ಕರಡಿ, ಕಿರುಬಗಳಿವೇ ಮೊದಲಾದ ಮ್ರುಗಗಳು ದಿಕ್ಕಾಪಾಲಾಗಿ ಮೋಡುತ್ತಿರುವಂತೆ.. ತಾನು ತನ್ನ ಸರೀರದಿಂದ ಹೊರಬಿದ್ದು ಬಕ ಬೋರಲಾದಂತೆ.. ದಿಗ್ಗನೆದ್ದು ತನ್ನ ಸರೀರದ ಲಗಾಮವನ್ನು ಹಿಡಿದೆಳೆಯುವ ಪ್ರಯತ್ನ ಮಾಡುತ್ತಿರುವಂತೆ ಭಾಸವಾಗತೊಡಗಿತು....

ಕೇಳಲು ನೋಡಿದ, ನೋಡಲು ನೋಡಿದ, ಮಾತಾಡಲು ನೋಡಿದ, ಆದರದು ತನ್ನ ಮಾತು ಕೇಳುತ್ತಿಲ್ಲಯಂದುಕೊಳ್ಳುತ್ತಾನೆ. ಕಣಸೊಳಗೆ ಯಿದ್ದ ಮೋಬಯ್ಯನು, ಅವನ ತೊದಲುವಿಕೆ, ಕನವರಿಕೆಗಳು ವಂದಾs ಯರಡಾ ಸಿವನೇss....

ತನ್ನ ಕಣ್ಣುಗಳು ತನ್ನ ಸ್ವಾಧೀನದಲ್ಲಿಲ್ಲವಲ್ಲಾಯ್.. ತನ್ನ ಕಿವಿಗಳು ತನ್ನ ಸ್ವಾಧೀನದಲ್ಲಿಲ್ಲ ವಲ್ಲಾಯ್.. ತನ್ನ ಬಾಯಿ ತನ್ನ ಸ್ವಾಧೀನದಲ್ಲಿಲ್ಲವಲ್ಲಾಯ್.. ತನ್ನ ಸರೀರ ಯಂಬುದು ತನ್ನ ಸ್ವಾಧೀನದಲ್ಲಿಲ್ಲವಲ್ಲಾಯ್.. ತಾನು ಯೀಸು ದಿನಮಾನದಿಂದ ಬದುಕುತ್ತಿದ್ದ ಬದುಕು ಗುರುತು ಸಿಗದಂಗಾಗಯ್ತಲ್ಲಾಯ್.. ಯಾದೋ ವಂದು ಅದ್ರುಸ್ಸ ಸಗುತಿ ತನ್ನನ್ನು ತನ್ನ ಸರೀರದಿಂದ ಹೊರದೊಬ್ಬಿದಂಗಾಗಯ್ತಲ್ಲಾಯ್....

ಯಿದೆಂಥಾ ಕಣಸಿದ್ದೀತಪ್ಪಾ ಸಿವನೇss....

ತಾನು ತನ್ನ ಸರೀರವನ್ನು ಕಣಸೊಳಗಾದರೂ ನೋಡಿಕೊಳ್ಳುವಂಗಾಯಿತಲ್ಲಾ.. ಆ ಸರೀರವು ತನ್ನದೆಂದು ನಂಬುವುದೋ