ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬನಶಂಕರಿ ೧೧೧

ಗೋಡೆಗೊರಗಿ ಕಾಲ ಕಳೆದಳು.

    ಎಚ್ಚರಗೊಂಡ ತಾನಿನ್ನು ಈ ದಿನದಿಂದ ಬಾಳುವೆಯ ಹೊಸ ಅಧ್ಯಾಯದ ಮೊದಲ ಸಾಲುಗಳನ್ನು ಬರೆಯಬೇಕು. ಕುಳಿತಲ್ಲಿಂದಲೇ ಅಮ್ಮಿ ಮನೆಯ ಒಳಗೆಲ್ಲ ದೃಷ್ಟಿಯೋಡಿಸಿದಳು. ಎಲ್ಲಿಂದ ಆರಂಭಿಸಬೇಕು? ಹೇಗೆ ಆರಂಭಿಸಬೇಕು?

ಹೊರಗೆ ಹಟ್ಟಿಯಲ್ಲಿ ತಿಮ್ಮಪ್ಪ ಅಡಿಕೆ ಜಜುತ್ತ ಕುಳಿತಿದ್ದ ಕಲ್ಲುಗಳ ಟೊಕ್ ಟೊಕ್ ಸದ್ದು ಅಮ್ಮಿಗೆ ಕೇಳಿಸುತ್ತತ್ತು...

    ಇಷ್ಟು ಹೊತ್ತಿಗಾಗಲೆ ಅವರು ಸ್ನಾನ ಮುಗಿಸಿ ವಾಪಸು ಬಂದಿರಬಹುದಲ್ಲ? ಬೆಳಿಗ್ಗೆ ಇಲ್ಲಿಗೆ ಬರುವರೊ ಇಲ್ಲವೊ? ಸಂಜೆ? ಅವರುಬಂದಾಗ ತಾನು ಏನೆಂದು ಮಾತನಾಡಿಸಬೇಕು?  ಈವರೆಗೆ ಹ್ಞಾ ಹ್ಞೂ ಎಂದಷ್ಟೆ ಹೇಳುತ್ತ ಮೌನದಿಂದಿರುತ್ತಿದ್ದ ಬಗ್ಗೆ ಅವರು ಏನೆಂದುಕೊಂಡಿರುವರೋ ಏನೋ...
ತಿಮುಪ್ಪ " ಎದ್ದಿರಾ ಅವ್ವ?" ಎಂದು ಪ್ರಶ್ನಿಸಿ, ಕುಳಿತಿದ್ದಲ್ಲಿಂದ ಆಕೆ ಏಳುವಂತೆ ಮಾಡಿ, "ಹಾಲು ತಗಂಬಳ್ತೀನಿ" ಎಂದು, ಒಂದು ಪಾತ್ರೆಯೊಡನೆ ಹೊರಟು ಹೋದ.
    ಅಮ್ಮಿ ಬಚ್ಚಲೊಲೆಗೆ ಉರಿಹಾಕಿದಳು. ಬಿಸಿನೀರು ಕಾಯಿಸಿ ಸ್ನಾನ ಮಾಡಿದಳು. ತಾನು ತಂದಿದ್ದ ದೇವರ ಪಟವನ್ನು ಗೋಡೆಗೆ ಒರಗಿಸಿಟ್ಟು ಅದರೆದುರು ತಲೆಬಾಗಿ ಕೈಜೋಡಿಸಿ ಬಹಳ ಹೊತು ಕುಳಿತಳು.

ಹಾಲು ಬಂತು. ತರಕಾರಿ ಬಂತು. ಅಮ್ಮಿ ಒಳಗೆ ಒಲೆ ಹಚ್ಚಿದಳು. ಅಡುಗೆ. ಊಟ.

    ಮುಚ್ಚಂಜೆಯ ಹೊತ್ತಿಗೆ ನಾರಾಯಣರಾಯರು ಬಂದರು. ಮನೆಯಲ್ಲಿ ಆಗಲೆ ಇದ್ದುದಕ್ಕೆ ಎರಡರಷ್ಟು ಪಾತ್ರೆ ಸರಂಜಾಮಗಳು, ದೊಡ್ಡದೊಂದು ನಿಲುವುಗನ್ನಡಿ, ಒಂದು ಸೀರೆ, ರವಕೆ ಕಣ...ಇಷ್ಟನ್ನು ತಂದರು.
    ಯಾವ ಮುಖಭಾವವೂ ಇಲ್ಲದೆ ಆ ಸಾಮಾನುಗಳನ್ನು ನೋಡುತ್ತಲಿದ್ದ ಅಮ್ಮಿಯನ್ನು ಉದ್ದೇಶಿಸಿ ರಾಯರೆಂದರು :
"ಯಾಕೆ–ಇವನ್ನೆಲ್ಲ ತರಾರಾಗಿತಾ?" 
 ಅಮ್ಮಿ ಮುಗುಳು ನಕ್ಕಳು. 
"ತಪ್ಪೆನು ಅದರಲ್ಲಿ? ನಿಮ್ಮದೇ ಅಲಾ ಇದೆಲ್ಲ ?" 
"ನನ್ನದು ? ಇಲ್ಲವಪ್ಪ.ಇದೆಲ್ಲಾ ನಿನ್ತೇನೆ."
"ಹೋಗಲಿ ಬಿಡಿ. ಯಾಕೆ ಜಗಳ ? ಯಾರದಾದರೇನು ? "
 ರಾಯರು ಮೋಹಕವಾಗಿ ಅಮ್ಮಿಯನ್ನು ನೋಡಿದರು. 
"ಜಗಳ ಆಡೊಕ್ಕೂ ಬರತ್ತೇನು ನಿಂಗೆ?" 

ಅಮ್ಮಿ ಲಜ್ಜೆಯಿಂದ ತಲೆಬಾಗಿದಳು. "ನಾನೀಗ ಹೋಗ್ರೀನಿ. ಸ್ವಲ್ಪ ಕೆಲಸ್ವಿದೆ," ಎಂದು ರಾಯರು ಎದ್ದು ನಿಂತರು. ತನ್ನ ಮೇಲೆ ಅವರು ಸಿಟಾದರೇನೊ ಎಂದು ಗಾಬರಿಯಾಯಿತು ఆమ్మిగ. ಮುಖ ಬಾಡಿತು. "ತಾಳಿ ಎನಾದರೂ ಮಾಡ್ಕೋಡ್ತಿನಿ..."