ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ

         ಗುರುತು ಹಿಡಿಯಲಿಲ್ಲ ವೆಂದು ಅಪ್ಪು, ನಿರಾಸೆಗೊಂಡು, ಬಳಿ ಸಾರಿ, ಕೇಳಿದ:
              "ಏನ್ರೀ, ಮರತ್ಹೋಯ್ತಾ? ನಮ್ಮನ್ನು ನೋಡಿದ್ದು ನೆನಪಿಲ್ವ?"
             ಧಾಂಡಿಗ ಯೋಚಿಸುತ್ತಿದ್ದಂತೆ ನಟಿಸಿ ಹೇಳಿದ:
               " ಹೊಂ..... ಹೊಂ.   ನೆನಪಿದೆ.  ದ್ವಾಪರ  ಯುಗದಲ್ಲೋ
             ತ್ರೇತಾಯುಗದಲ್ಲೋ-ಯಾವಾಹಗಲೋ ಒಮ್ಮೆ ನೋಡಿರ್ಬೇಕು."
                      ಅಪ್ಪು ನಕ್ಕು, ಮತ್ತೊಂದು ಪ್ರಶ್ನೆ ಕೆಳಿದ:
                      "ಈಗೇಲ್ಲಿಂದ ಬಂದಿರಿ?"
                      "ಪಾತಾಳದಿಂದ ಬಂದೆವೊ ಸ್ವರ್ಗದಿಂದ ಬಂದೆವೊ---ಎಲ್ಲಿಂದಲೋ !
                  ಮರೆತ್ಹೋಗಿದೆಯಪ್ಪಾ ಮರೆತ್ಹೋಗಿದೆ."
                       ಅಂತಹ ಪ್ರಶ್ನೆ  ಕೇಳಬೇಡವೆಂದು "ಶ್!" ಎಂದು ಚಿರುಕಂಡ ಅಪ್ಪುವಿನ  ಕೈ
               ಮುಟ್ಟಿ  ಸನ್ನೆಮಾಡಿದ. ಅಪ್ಪುವಿಗೆ ಕೆಡುಕೆನಿಸಿತು. ಆದರೆ ಒಂದು ವರ್ಷದ ಹಿಂದೆ 
               ತಾವು ಕಂಡಿದ್ದ  ಇತರರ ನೆನಪಾಗಿ ಪಿಸುಮಾತಿನಲ್ಲಿ ಅಪ್ಪು ಕೇಳಿದ:
                    "ಓಹೋ! ರಾಮುಣ್ಣಿ ಯಂತೂ ನಿಮ್ಮ  ವಿಷಯ ವಿಚಾರಿಸ್ತಾನೇ ಇದ್ನಪ್ಪ.
               ಸಾಲಮಾಡಿ  ಬಂದ್ಬಿಟ್ರಿ ಅವತ್ತು!"
                    "ಓ!" ಎಂದ ಅಪ್ಪು, ಧಾಂಡಿಗ  ತಮಾಷೆಗೆ ಹಾಗೆ  ಅಂದನೆಂಬುದರಲ್ಲಿ  ಶಂಕೆ
              ಇರಲಿಲ್ಲ. ಆದರೂ ರಾಮುಣ್ಣಿ ಯನ್ನು ಆ ಬಳಿಕ ಕಾಣಲಿಲ್ಲ. ಎಂದು ಅಪ್ಪುವಿಗೆ 
               ಬೇಸರವೆನಿಸಿತು.
                   "ಹೌದು ಕಣ್ರಿ. ಇಷ್ಟು ಸಮೀಪವಿದ್ದರೂ ಹೋಗೋದಕ್ಕೆ ಆಗಿಲ್ಲ."
                   "ಮುಖ್ಯ. ಆ ಕಡೆ  ಹೋಗುವ ಕೆಲಸವೇ ಇರ್ಲಿಲ್ಲ" ಎಂದು ಚಿರುಕಂಡ
               ವಿವರಣೆಯನ್ನಿತ್ತ.
                   "ನೀಲೇಶ್ವರ  ಜಾತ್ರೆಗೆ ಹೋಗುವಾಗ ಬರಬೇಕೂಂತಿತ್ತು. ಆದರೆ ಈ ಸಲ 
              ಜಾತ್ರೆಗೆ  ಹೋರಡೋದಾಗಲಿಲ್ಲ" ಎಂದು ಸಪ್ಪಗಿನ ಧ್ವನಿಯಲ್ಲಿ ಅಪ್ಪು ಹೇಳಿದ.
                   ಹುಡುಗರಿಬ್ಬರನ್ನೂ ಧಾಂಡಿಗ ಬದಿಗೆಳೆದ.
                   " ಅಲ್ರೋ! ಈ ಊರೇ ಪ್ರಪಂಚ  ಅಂತ ಕಪ್ಪೆಗಳ ಹಾಗಿದ್ದೀರಲ್ರೋ.  ಒಂದಿಷ್ಟು
                ಆಚೆ ಈಚೆ ಹಳ್ಳಿಗೆಲ್ಲಾ ಹೋಗಿ ಬರ್ಬಾರ್ದಾ ನೀವು?"
                        "ಹೋಗಿ ಮಾಡೋದೇನು?" ಎಂದು ಚಿರುಕಂಡ, ಗಹನವಾದ ಯಾವುದೊ
                ವಿಷಯದ ಬಗೆಗೆ ಧಾಂಡಿಗ ಪ್ರಸ್ತಾಪಿಸುತ್ತಿರಬಹುದೆಂದು ಭಾವಿಸಿ.
                        "ಹಲಸಿನ ಹಣ್ಣೋ  ಮಾವಿನ ಹಣ್ಣೋ  ಹೊತ್ಹಾಕೋದು!"
                ಹಾಗೆ ಹೇಳುತ್ತಾ  ಆತನೂ ನಕ್ಕ. ಆ ಮಾತನ್ನು ಕೇಳಿ ಹುಡುಗರೂ ನಕ್ಕರು.