ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ನಂಬಿಯಾರರು"ಹೂಂ"ಎಂದರು.ಕಾಲುಹಾದಿಗಿಳಿಯುತ್ತ ಅವರು ಹಿಂತಿರುಗಿ, ತಮಗಿಬ್ಬರಿಗೂ ಕೈ ಜೋಡಿಸಿ ನಮಸ್ಕರಿಸುತ್ತಿದ್ದ ಮಾಸ್ತರನ್ನು ನೋಡಿ ಹೇಳಿದರು:

 "ಈ ಸಂಭ್ರಮದಲ್ಲಿ ಶಾಲೆ ಹುಡುಗರಿಗೆ ಸರಿಯಾಗಿ ಪಾಠ ಹೇಳೋದು

ಮರೀಬೇಡಿ!" "ಎಲ್ಲಾದರೂ ಉಂಟೆ?ಛೆ!ಛೆ!"ಎಂದರು ಮಾಸ್ತರು ಎಲ್ಲ ಹಲ್ಲುಗಳನ್ನೂ ತೋರಿಸಿ,ನಗುತ್ತ. ಹೊರಟುಹೋದ ಜಮೀನ್ದಾರರನ್ನು ಅವರ ಆಳುಗಳು ಹಿಂಬಾಲಿಸಿದರು. ಕಾಲುಹಾದಿಯಲ್ಲಿ ನಿಂತಿದ್ದ ಹುಡುಗರು ಈಗ ಗದ್ದಲಮಾಡಿ ಧೂಳೆಬ್ಬಿಸುತ್ತ ಒಳಕ್ಕೆ ಬಂದರು. .....ರಾತ್ರಿ ಶಾಲೆಗೆ ಸಂಬಂಧಿಸಿ ಬಲು ಸುಲಭವಾಗಿ ದೊರೆತ ಈ ವಿಜಯವನ್ನು ಕಂಡು ಅಪ್ಪು ಮತ್ತು ಚಿರುಕಂಡ ನಲಿದಾಡುವ ಹಾಗಾಯಿತು.ಕೋರನ ಹಟ್ಟಿಯೇ ಕಯ್ಯೂರಿನ ರಾತ್ರಿ ಶಾಲೆ.ಅದನ್ನು ಗೊತ್ತುಪಡಿಸುವುದು ಸುಲಭವಾಗಿತ್ತು.ಆದರೆ ಕಷ್ಟವಾಗಿದ್ದುದು ಜನರನ್ನು ಅಲ್ಲಿಗೆ ಕರೆತರುವ ಕೆಲಸ.ಮೊದಲ ಒಂದೆರಡು ವಾರ ಬಂದವರು ಮೂವರೋ ನಾಲ್ವರೋ.ಆಮೇಲೆ ಸಂಖ್ಯೆ ಹನ್ನೆರಡಕ್ಕೆ ಏರಿತು. ಪುನಃ ಆರಕ್ಕೆ ಇಳಿಯಿತು.ಮಾಸ್ತರು ಅದರಿಂದೇನೂ ಎದೆಗುಂದಲಿಲ್ಲ. ಅಕ್ಷರಜ್ಞಾನವನ್ನೂ ಲೋಕ ಜ್ಞಾನವನ್ನೂ ಹೇಳಿಕೊಡುವ ಅವರ ನವೀನ ಪದ್ಧತಿಗೆ ಆ ಶಾಲೆ ಪ್ರಯೋಗ ಕ್ಷೇತ್ರವಾಯಿತು. ಯುವಕ ರೈತನೊಬ್ಬನ ಪರಿಚಯ ಮಾಸ್ತರಿಗಾದುದು ಆ ಸಂದರ್ಭದಲ್ಲೇ.ಆತನ ಹೆಸರು ಕಣ್ಣ.ಅವನು ಹಳ್ಳಿಯ ಹೆಣ್ಣುಗಳ ಕಣ್ಣಾಲಿಯಾಗಿದ್ದ.ಸೊಗಸಾದ ಮೈಕಟ್ಟು.ಕುಡಿಯೊಡೆಯುತ್ತಿದ್ದ ಮೀಸೆ.ತೇಜಸ್ಸು ತುಂಬಿದ್ದ ಕಣ್ಣುಗಳು.ಆ ಆಕರ್ಷಕ ವ್ಯಕ್ತಿತ್ವ ತಮಗಿಲ್ಲವಲ್ಲ ಎಂದು ಕರುಬುತ್ತಿದ್ದವರೆಷ್ಟೋ ಜನ.ಸಾಲದುದಕ್ಕೆ ಅವನಿಗೆ ಅಮೋಘವಾದ ಕಂಠವಿತ್ತು.ಯಾವುದಾದರೂ ಪಾಡ್ದನವನ್ನು ಆತ ತುಂಬುಸ್ವರದಿಂದ ಹಾಡಿದನೆಂದರೆ,ಜನರಷ್ಟೇ ಅಲ್ಲ ಮೃಗ-ಮರಗಳೂ ತಲೆದೂಗಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿವೆಯೇನೋ ಎನಿಸುತ್ತಿತ್ತು. ಅವನನ್ನು ಮಾಸ್ತರು ರಾತ್ರಿ ಶಾಲೆಗೆ ಕರೆದು ತಂದರು.ಓದು ಅವನಿಗೆ ಬೇಕಾಗಿರಲಿಲ್ಲ.ಹಾಡು ಎಂದಾಗ ಮಾತ್ರ ಮುಖವರಳುತ್ತಿತ್ತು.ತರಗತಿ ಆರಂಭವಾಗುವುದಕ್ಕೆ ಮುಂಚೆ ಪ್ರತಿ ರಾತ್ರಿಯೂ ಆತ ಹಾಡಿದ.ಆಗ ಇರುಳಲ್ಲಿ ಆ ಪ್ರದೇಶವೆಲ್ಲ ನಾದಮಯವಾಗಿ ಮೈಮರೆಯುತ್ತಿತ್ತು.ಆತನಿಗೆ ಮಾಸ್ತರು,ಕೇರಳದ ಶ್ರೇಷ್ಠ ಕವಿ ಕುಮಾರನ್ ಆಶಾನ್ ಬರೆದ ಕವಿತೆಗಳ ಪರಿಚಯ