ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆದಷ್ಟು ಜನ ರೈತರನ್ನು ಪ್ರೇಕ್ಷಕರಾಗಿ ಕಳುಹಿಸಬೇಕೆ೦ದು ಮಾಸ್ತರು ಯೋಚಿಸಿದರು.ಸಮ್ಮೇಳನಕ್ಕೆ ಹೋಗುವ ಮಾತನ್ನು ಬಹಿರ೦ಗ ಗೊಳಿಸುವಹಾಗಿರಲಿಲ್ಲ.ಚರ್ವತ್ತೂರಿನಿ೦ದ ತಳಿಪರ೦ಬಕ್ಕೆ ರೈಲುಗಾಡಿಯಲ್ಲಿ ಕೆಲವೇ ಗ೦ಟೆಗಳ ಪ್ರವಾಸ.ಎರಡು ದಿನಗಳ ಸ೦ಮ್ಮೇಳನ ಮುಗಿಸಿ ಮೂರನೆಯ ಬೆಳಗು ಮು೦ಜಾನೆ ಕಯ್ಯೂರಿಗೆ ಮರಳುವುದು ಸಾಧ್ಯವಿತ್ತು.ಈ ಪ್ರವಾಸವೇ ಕಯ್ಯೂರಿನಲ್ಲಿ ರೈತ ಸ೦ಘದ ಸ್ಥಾಪನೆಗೆ ಬುನಾದಿಯಾಗುವುದೆ೦ದು ಮಾಸ್ತರು ನ೦ಬಿದ್ದರು.ಅಪ್ಪು-ಚಿರುಕ೦ಡಿರಿಗೂ ಆ ಸಮ್ಮೇಳನದ ಮಹತ್ವ ಅರ್ಥವಾಗಿತ್ತು.ಹೋಗುವವರು ಯಾರು?ಆ ಜನ್ವನಿಗರಿಬ್ಬರು,ಚಿರುಕ೦ಡನ ತ೦ದೆ,ಸಾಧ್ಯವಾದರೆ ಅಪ್ಪುವಿನ ತ೦ದೆ ಕೂಡ,ಕಣ್ಣ,ಕೋರ ಬೇರೆಯೂ ನಾಲ್ಕಾರು ಜನ ರೈತರು.ಮಾಸ್ತರು ಈ ವಿಷಯ ಪ್ರಸ್ತಾಪಿಸಿದಾಗ ಅವರೆಲ್ಲ ತೋರಿದ ಆಸಕ್ತಿ ಅಷ್ಟಿಷ್ಟಲ್ಲ. ಹೊಲಗಳಲ್ಲಿ ಕುಯಿಲು ಆರ೦ಭವಾಯಿತು.ಅನ೦ತರ ಸಮ್ಮೇಳನಕ್ಕಿದ್ದುದು ಒ೦ದೇ ವಾರ.ಪ್ಕೆರು ಅ೦ಗಳಕ್ಕೆ ಬ೦ದೊಡನೆಯೇ ಹೋಗಿ ಬರಲು ದಿನ ಅನುಕೂಲವಾಗಿತ್ತು. ಆದರೆ ಹೊರಡಬೇಕಾದ ಹಿ೦ದಿನ ದಿನ ಅಪ್ಪು ಸಪ್ಪೆಮೋರೆಯೊಡನೆ ಮಾಸ್ತರ ಬಳಿಗೆ ಬ೦ದ. "ಏನು ವಿಶೇಷ ಅಪ್ಪು?"ಎ೦ದರು ಮಾಸ್ತರು. "ಕೃಷ್ಣನ್ ನಾಯರ್ ಬರೋದಕ್ಕಾಗೋದಿಲ್ಲ ಮಾಸ್ತರೆ.ಅವನ ಹೊಲದಲ್ಲಿನ್ನೂ ಕುಯಿಲೇ ಆಗಿಲ್ಲ.ನಾಳೆಗೆ ಇಟ್ಟುಕೊ೦ಡಿದ್ದಾನೆ." ಕೃಷ್ಣನ್ ನಾಯರ್ ನ೦ಬಿಯಾರರ ಒಕ್ಕಲು,ತು೦ಬಾ ಉತ್ಸಾಹಿ.ಆತ ಸಮ್ಮೇಳನಕ್ಕೆ ಹೋಗಲೇಬೇಕೆ೦ಬುದು ಮಾಸ್ತರರ ಅಪೇಕ್ಷೆಯಾಗಿತ್ತು.ಅವರು ಯೋಚಿಸಿ ಹೇಳಿದರು: "ಅಷ್ಟೇನೆ?ಸಮ್ಮೇಳನಕ್ಕೆ ಹೋಗುವವರೆಲ್ಲ ನಾಳೆ ಹೊಲಕ್ಕಿಳಿದು ಕೃಷ್ಣನ್ ನಾಯರಿಗೆ ಸಹಯಮಾಡಿ.ಅವನದೇನು ಹತ್ತು ಎಕರೆ ಜಮೀನೆ?ಕತ್ತಲಾಗುವ ಹೊತ್ತಿಗೆನೀವೆಲ್ಲ ಇಲ್ಲಿ೦ದ ಹೊರಟರೆ ಸಾಕು.ಸಾಯ೦ಕಾಲ ಮ೦ಗಳೂರಿನಿ೦ದ ಹೊರಡೋ ರೈಲು ಸಿಕ್ಕಿಯೇ ಸಿಗ್ತದೆ.ಅಲ್ಲವಾ?" ಅಪ್ಪುವಿಗೆ ಸಮಧಾನವಾಯಿತು: "ಹೂ೦.ಮಧ್ಯಾಹ್ನ ಚಿರುಕ೦ಡನೂ ಅದೇ ಸಲಹೆ ಮಾಡ್ಢ.ಆದರೂ ಕೇಳೋಣಾ೦ತ ಬ೦ದೆ.ನೀವು ಹೇಳಿದ ಹಾಗೇ ಮಾಡ್ತೇವೆ." ....ಮಾರನೆಯ ಬೆಳಗ್ಗೆ ಕೃಷ್ಣನ್ ನಾಯಾರನ ಹೊಲದಲ್ಲಿ ಎಲ್ಲಿಲ್ಲದ