ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೧೨

      ಕಯ್ಯೂರಿನ ರೈತರ ಸಭೆಯಲ್ಲಿ ಮೊದಲ ಬಾರಿಗೆ ಹಾರಾಡಿದ ಕೆಂಪು ಬಾವುಟ ಸಂಘದ ತಾತ್ಕಾಲಿಕ ಕಛೇರಿಯಾದ ಅಪ್ಪುವಿನ ಮನೆಯಲ್ಲಿ ನೆಲೆ ನಿಂತಿತು. ತನ್ನ ಶಾಲೆಯ ಪರೀಕ್ಶಾಗಾಗಿ ಸಿದ್ಧತೆ ಮಾಡುತ್ತಿದ ಅಪ್ಪುವಿನ ತಮ್ಮನೂ ಅದೇ ಆಗ ಸರಾಗವಾಗಿ ಓದತೊಡಗಿದ್ದ. ಕಿರಿಯವನಾದ ಕುಟ್ಟಿ ಅಭಿಮಾನದ ಆ ಬಾವುಟವನ್ನು ನೋಡಿದನು. ಅವರ ಅಜ್ಜಿ ಬಾರಿಬಾರಿಗೂ ಆ ಬಾವುಟದ ಅರ್ಥವನ್ನು ಕೇಳುತ್ತ, ಎನಾದರೂ ನೆಪ್ಪ ಹೂಡಿಕೊಂಡು ಹೆಚ್ಚುಹೆಚ್ಚಾಗಿ ಹೊರ ಹೋಗಿ ಛಾವಣಿಯ ಮೇಲೆ ಪಟಪಟನೆ ಹಾರಾಡುತ್ತಿದ್ದ ಬಾವುಟವನ್ನು ನೋಡುತ್ತ ಸಂತೋಷಪಟ್ಟಳು. ಅಪ್ಪುವಿನ ತಾಯಿ ನೀರು ಸೇದಲು ಬಂದಾಗ, ಮುಸುರೆ ತಿಕ್ಕುತ್ತಿದ್ದಾಗ, ಇಲ್ಲವೆ ಹೋರಿಗಳಿಗೆ ಮೇವು ನೀಡಲು ಹೊರಟಾಗ, ಬಾವುಟವನ್ನು ಕದ್ದುಕದ್ದು ನೋಡಿದಳು. ಮಹಡಿಯ ಮನೆಯ ಸಿರಿವಂತಿಕೆಯೇ ತನಗೆ ದೊರೆಯಿತೆನ್ನುವಂತೆ ಆಕೆಗೆ ಮಹದಾನಂದವಾಯಿತು.
     ಚಿರುಕ್ಂಡನ ಮನೆಯಲ್ಲಿ ಆತನ ತಾಯಿ ಕೇಳಿದಳು:
     "ಕಾರ್ಯದರ್ಶಿ ನೀನಲ್ವ ಚಿರುಕಂಡ?"
     "ಹೌದು."
     "ಮತ್ತೆ ಬಾವುಟ ಅಲ್ಲಿ ನೆಟ್ಟಿದ್ದಾರೇ....."
     ತಾಯಿಯ ಈ ಅಸೂಯೆ ಕ್ಷಮ್ಯವಾದುದೆಂದು ತೋರಿತು ಚಿರುಕಂಡನಿಗೆ. ಆತ ಮುಗುಳುನಕ್ಕ.
     "ಬಾವುಟ ಅಲ್ಲೇ ಇರ್ರ್ಬೇಕಮ್ಮ. ನಾವು ಜಮೀನ್ದಾರರ ಒಕ್ಕಲು. ಬಾವುಟ ಇಲ್ಲಿದ್ದರೆ, ಯಾವಾಗಬೇಕಾದರೂ ಅವರು ಅದನ್ನು ಕಿತ್ತು ಹಾಕಿಸ್ಬಹುದು. ಅಪ್ಪು ಮನೇಲಾದರೆ ಹಾಗಲ್ಲ."
     ಮಗ ಆಡಿದವಳಿಕೆಯ ಮಾತು ಕೇಳಿ ತಾಯಿ ತಲೆದೂಗಿದಳು. ತಾವು ಹೊಲ ಕಳೆದುಕೊಂಡ ನೆನಪು ಕಹಿಯಾಗಿದ್ದರೂ ತಮ್ಮೊಬ್ಬನೇ ಮಗ ಊರಿನ ರೈತರಲ್ಲರ ಗೌರವಕ್ಕೆ ಪಾತ್ರನೆಂಬ ಹೆಮ್ಮೆ ಸಿಹಿಯಾಗಿತ್ತು.
      ಸಂಘಶಕ್ತಿಯ ಸಂಕೇತವಾದ ಬಾವುಟ ಉದ್ದಗಲಕ್ಕೂ ತನ್ನ ಸಂದೇಹ ಸಾರಿತು. ಅದರೆ ಪ್ರಭಾವ ಎಷ್ಟೆಂಬುದನ್ನು ತಿಳಿಯಲು ಹೆಚ್ಚು ದಿನ ಬೇಕಾಗಲಿಲ್ಲ. ಆ ವಾರದ ಅಂತ್ಯದೊಳಗೆ, ಮಾಸ್ತರು ನೀಲೇಶ್ವರಕ್ಕೆ ಹೋಗಿದ್ದ ಒಂದು ಭಾನುವಾರ, ಹೊಸದುರ್ಗದ ಪೋಲಿಸ್ ಫೌಜದಾರರು (ಸಬ್ ಇನ್ಸ್ ಪೆಕ್ಟರು) ಇಬ್ಬರು