ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೧೭೫ ವಿಷಯ ಯಾರಿಗೂ ಹೇಳ್ಬೇಡಿ. ಪುನಃ ಈಚೆ ಕಡೆಗೇ ಬಂದರೂ ಬರಬಹುದು. ಶಾಲೆಗಳಲ್ಲಿನ್ನು ಮಾಸ್ತರ ಕೆಲಸ ನನಗೆ ಸಿಗ್ತದೋ ಇಲ್ಲವೋ ಗೊತ್ತಿಲ್ಲ_" ಎಂದು ಅವರು ಹೇಳಿದರು.

   ಹೊರಡುವ ಹಿಂದಿನ ಸಂಜೆ ಮಾಸ್ತರು, ಶಾಲೆಯ ವಿಶ್ವಸ್ಥ ಸಮಿತಿಯ 

ಮುಖ್ಯಸ್ಥರಾದ ನಂಬಿಯಾರರಲ್ಲಿಗೆ ಹೋಗಿ ಲೆಕ್ಕಾಚಾರ ತೀರಿಸಿ ಬಂದರು.

   ಬೆಳಗ್ಗೆ ಹೊರಡುತ್ತಿದ್ದಂತೆ, ಶಾಲೆಯ ಹಿತ್ತಲಿನಲ್ಲಿ ಎರಡೂ ಕಡೆ ಎತ್ತರಕ್ಕೆ 

ಬೆಳೆದಿದ್ದ ಎರಡು ಮಾವಿನ ಸಸಿಗಳತ್ತ ಮಾಸ್ತರ ಗಮನ ಹರಿಯಿತು. ಎದುರು ನೆರೆದಿದ್ದವರನ್ನು ನೋಡಿ ಮಾಸ್ತರರೆಂದರು:

    ಗಿಡಗಳು ಬೆಳೀತಾ ಇವೆ. ಆದರೂ ಫಲ ಕೊಡೋ ಸ್ಥಿತಿಗೆ ಇನ್ನೂ ಬಂದಿಲ್ಲ !"
    ಹಾಗೆ ಹೇಳಿ ಅವರು ಅಪ್ಪು ಮತ್ತು ಚಿರುಕಂಡರತ್ತ ನೋಡಿ ನಕ್ಕರು. ವರ್ಷಗಳ

ಹಿಂದೆ ಆ ಮಾವಿನ ಗಿಡಗಳಿಗೆ ಸಂಬಂಧಿಸಿ ಮಾಸ್ತರು ಆಡಿದ್ದುದು ಅಪ್ಪು ಚಿರುಕಂಡರಿಗೆ ನೆನಪಾಗಿ, ಅವರ ಮುಖಗಳು ಅರಳಿದುವು.

   ಅರ್ಧ ಹಾದಿಯವರೆಗೂ ನೂರಾರು ಜನ ಮಾಸ್ತರರನ್ನು ಹಿಂಬಾಲಿಸಿ ಬಂದರು.

"ಬರಬೇಡಿ" "ವಾಪಸು ಹೋಗಿ" ಎಂದು ಹೇಳಿ ಹೇಳಿ ಮಾಸ್ತರಿಗೆ ಸಾಕಾಗಿ ಹೋಯಿತು. ಪೋಲೀಸರ ವರದಿಗೆ ಇದೂ ಒಂದು ವಿಷಯವಾಗಬಾರದೆಂದು ಅವರು, "ಇದು ತಪ್ಪು ಚಿರುಕಂಡ. ಇದು ಅಪಾಯಕಾರಿ. ಬರಬೇಡಿಂತ ನೀವೇ ಹೇಳೀಪ್ಪ ಅವರಿಗೆ" ಎಂದರು. ಅಪ್ಪುವಿನ ತಂದೆಯೂ ಚಿರುಕಂಡನ ತಂದೆಯೂ ಗುಂಪನ್ನು ತಡೆದಮೇಲೆ ಮಾಸ್ತರು ಮುಂದುವರಿಯುವುದು ಸಾಧ್ಯವಾಯಿತು. ಅಪ್ಪು ಚಿರುಕಂಡರ ಜತೆಯಲ್ಲಿ ಸ್ವಲ್ಪ ದೂರ ಸಾಗಿದ ಬಳಿಕ ಮಾಸ್ತರು ತಿರುಗಿ ನೋಡಿದರು. ಗುಂಪು ನಿಂತೇ ಇತ್ತು. ಬಲಗೈಯನ್ನು ಮೇಲಕ್ಕೆತ್ತಿ ಮಾಸ್ತರು ಗದ್ಗದ ಕಂಠದಿಂದ "ನಮಸ್ಕಾರ" ಎಂದು ತೊದಲಿದರು. ಬೆರಳುಗಳು ಮುಷ್ಟಿ ಕಟ್ಟಿದುವು.

     ಅಪ್ಪು ವೇಗವಾಗಿ ನಡೆಯುತ್ತ, "ಬೇಗ ಕಾಲು ಹಾಕ್ಬೇಕು, ಗಾಡಿಗೆ ಟೈಮಾಯ್ತು" ಎಂದ.

....ಅವರು ಚರ್ವತ್ತೂರು ನಿಲ್ದಾಣ ಸೇರಿದಾಗ ಗಾಡಿ ಬರಲು ಇನ್ನೂ ಹದಿನೈದು ನಿಮಿಷಗಳಿದ್ದುವು.

    ಟೈಮಿಗೆ ಸರಿಯಾಗಿ ಬಂದಿದ್ದೇವೆ!" ಎಂದರು ಮಾಸ್ತರು, ಅಪ್ಪುವನ್ನು ನೋಡಿ ನಕ್ಕರು.
    "ಸರ್, ಇವತ್ತು ಒಂದು ದಿನದ ಮಟ್ಟಿಗೆ ಇಂಟರ್ ಕ್ಲಾಸ್ ಟಿಕೆಟ್ ತರ್ಲಾ ?"

ಎಂದು ಚಿರುಕಂಡ ಕೇಳಿದ, ತಮ್ಮ ಪ್ರೀತಿಯನ್ನು ತೋರಿಸಲು ಅದೂ ಒಂದು ಹಾದಿ ಎಂದು.