ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ವಿಷಯ ಸ್ಪಷ್ಟವಾಗಿತ್ತು, ಆದರೆ ಬಿಸಿರಕ್ತದ ಜವ್ವನಿಗರು, "ಕಾಯೋದು ಇನ್ನೆಷ್ಟು ದಿನ?" ಎಂದು ಕೇಳುತ್ತಲೇ ಇದ್ದರು.

ಅಂತಹ ಸಂದರ್ಭದಲ್ಲೊಮ್ಮೆ ಕಣ್ಣ , "ನಮ್ಮ ಹಳ್ಳೀಲೇನೋ ಸಾಮ್ರಾಜ್ಯ ಶಾಹಿ ಕಾಣ್ತಾನೇ ಇಲ್ಲ,  ಇರೋ ಭೂಪರು ಇಬ್ಬರು. ಅವರನ್ನು ಹಾದಿಗೆ ತಂದು, ಅವರೂ ನಾವು-ಎಲ್ಲ ಜತೆಯಾಗಿಯೇ ಹೂಲ ಹಂಚಿಕೂಂಡು ಸ್ವಾತಂತ್ರ್ಯದ ಬಾವುಟಾನ ಸುಲಭವಾಗಿ ಏರಿಸಬಹುದು. ಆದರೆ ಅಕ್ಕ ಪಕ್ಕದ ಹಳ್ಳಿಯೋರೆಲ್ಲ ಸಿದ್ಧವಾಗಿಲ್ಲ. ಅದಕ್ಕಾಗಿ ನಾವೂ ಕಾಯ್ಬೇಕಾಗಿದೆ!"ಎಂದ. 

ಅವನ ಮಾತನ್ನು ಕೇಳಿದವರು ನಕ್ಕರು. ...............

ದಿನ ಕಳೆಯಿತು. ಸಾಮ್ರಾಜ್ಯಶಾಹಿ ತಾನು ಸಮೀಪದಲ್ಲೆ ಇರುವೆನೆಂದು ತೋರಿಸಿಕೊಂಡಿತು.

ಪೋಲಿಸ್ ಅಧಿಕಾರಿಯೊಡನೆ ತಾಲ್ಲೂಕು ಅಧಿಕಾರಿ ಒಮ್ಮೆ ಅಲ್ಲಿಗೆ ಬಂದು, ನಂಬಿಯಾರ್ ಜಮೀನ್ದಾರರಲ್ಲಿ ಬೀಡುಬಿಟ್ಟರು. ಬಂದಿದ್ದವರು ಹೊಸಬರಾಗಿದ್ದರೂ ಸಂಘಕ್ಕಿದಿರಾಗಿ ಆ ಭೇಟಿಯನ್ನು ಉಪಯೋಗಿಸಿಕೊಳ್ಳಲು ಸಂಘಕ್ಕಿದಿರಾಗಿ ಆ ಭೇಟಿಯನ್ನು ಉಪಯೋಗಿಸಿಕೂಳ್ಳಲು ನಂಬಿಯಾರರು ಯತ್ನಿಸದಿರಲಿಲ್ಲ ಅವರೆಂದರು. ನಾಲ್ಕೈದು ಜನ ರೈತ ಮುಖಂಡರ ಹೊರ ತು ಸರ್ಕಾರವನ್ನು ವಿರೋಧಿಸೋರು ಇಲ್ಲಿ ಯಾರೂ ಇಲ್ಲ, ಅವರಷ್ಟು ಜಜ್ಬೇಲಿಗೆ ಸೇರಿಸಿದ್ರೆ_"

ತಾಲ್ಲೂಕು ಅಧಿಕಾರಿ ಬಂದ ಉದ್ದೇಶ ಅದಾಗಿರಲಿಲ್ಲ.

"ಅದನ್ನೆಲ್ಲ ಮಾಡೋಣ ಮಿಸ್ಟರ್ ನಂಬಿಯಾರ್. ಈಗ ನಾವು ಸೈನ್ಯಕ್ಕೆ ಜನ ಭರ್ತಿ ಮಾಡ್ಬೇಕಾಗಿದೆ. ನಿಮ್ಮ ಹಳ್ಳಿಯಿಂದ ಎಷ್ಟು ಜನರನ್ನು ಕೊಡ್ತೀರ." ಆ ವಿಷಯದಲ್ಲಿ. ತಾವು ಕೈಲಾಗದವರೆಂದು. ತಿಳಿದಿದ್ದ ನಂಬಿಯಾರರು: "ನನ್ನನ್ನು ಸೇರಿಸ್ಕೊಳ್ಳಿ" ಎಂದು ನಕ್ಕರು. ಅಧಿಕಾರಿಯೂ ನಕ್ಕು ನುಡಿದರು: "ನೀವೆಲ್ಲ ಯುದ್ದಕ್ಕೆ ಹೋದರೆ ನಮ್ಮನ್ನು ಯಾರು ನೋಡೋಳ್ಳೋರು? ಇದು ತಮಾಷೆ ಮಾತಲ್ಲ. ನಿಮ್ಮ ಗ್ರಾಮದಿಂದ ಇಪ್ಪತ್ತು ಜನರಾದರೂ ಬೇಕು." ಊರೆಲ್ಲ ಡಂಗುರ ಸಾರಿದ್ದಾಯಿತು. ಸಂಜೆಯವರೆಗೂ ಯಾರೂ ಬರಲಿಲ್ಲ.ರಾತ್ರೆ ಅಲ್ಲಿಯೇ ಬೀಡುಬಿಟ್ಟ ಅಧಿಕಾರಿಗಳೆನ್ನುದ್ದೇಶಿಸಿ ನಂಬಿಯಾರ್ ಹೇಳಿದರು:"ನಮ್ಮ ಜನ ಕೆಟ್ಟು ಹೋಗಿದ್ದಾರೆ. ನಾಳೆ ಬೆಳಿಗ್ಗೆ ನನ್ನ ಇಬ್ಬರು,ನಂಬೂದಿರಿಯ ಇಬ್ಬರು ಆಳುಗಳನ್ನು ಕರಕೂಂಡು ಹೋಗಿ."