ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೨ ಚಿರಸ್ಮರಣೆ

         "ಆರೋದು  ಯಾವತ್ತಿಗೂ  ಇಲ್ಲ. ಜನರ  ಕಿಡಿ ಇದ್ದೇ ಇರುತ್ತದೆ.
       ಆದು  ಜ್ವಲಿಸೋದಕ್ಕೆ  ಪ್ರೇರಕ  ಶಕ್ಥಿಯೊಂದಿದ್ದರೆ  ಸರಿ...." 
        ಮುದುಕಿ  ಬಂದು ಮಕ್ಕಳನ್ನು  ಗದರಿಸುವಂತೆ  ಹೇಳಿದಳು:
       "ಇನ್ನು ಮಾತಾಡಿದ್ದು ಸಾಕು.ಬಂದವರು  ಗಂಜಿ  ಕುಡಿದು ವಿಶ್ರಾಂತಿ ಪಡೆಯಲಿ.
       ನೀವೂ  ಮಲಗಿ.  ನಾಳೆ  ಎದ್ದು  ಮಾತುಕತೆ  ಶುರುಮಾಡುವಿರಂತೆ. ಮುಗಿಯದ 
      ಚಚೆ  ಆದಂಥದೋ ಆ  ದೇವರೇ  ಬಲ್ಲ!"
     ....ಗಂಜಿ  ಕುಡಿದು ದೀಪವಾರಿಸಿ  ಅಪ್ಪು  ಮತ್ತು  ಆಬೊಬಕರ್  
     ಒಬ್ಬರಿಗೊಬ್ಬರು  ಸಮೀಪವಾಗಿ  ಮಲಗಿದರು. ನಿದ್ದೆ  ಬರಲಿಲ್ಲ.ಯೋಚಿಸಿ
   ಯೋಚಿಸಿ  ಅವರ  ಮೆದುಳು  ತಪ್ತವಾಯಿತು.
    ಬಹಳ ಹೊತ್ತಾದ ಮೇಲೆ ಅಪ್ಪು ಮೆಲ್ಲನೆ ಹೇಳಿದ:
    "ನಾವು ಕಯ್ಯೂರಿಗೆ ಹೊರಟುಹೋಗೋದೆ  ಮೇಲು-ಅಲ್ವ ಸಂಗಾತಿ?"
    "ನಾನೊ ಹಾಗಂತಲೇ ಯೋಚಿಸ್ತಿದ್ದೆ ಅಪ್ಪು."
    "ನಾಳೆ  ಆವಲಿಗೆ  ತಿಳಿಸಿ ಹೊರಟ್ಟಿಡೋಣ."
    "ಆಗಲಿ."
    ....ಬೆಳಗ್ಗೆ  ತಮ್ಮ  ಅಭಿಪ್ರಯವನ್ನು ಅವರೊ ತಿಳಿಸಿದ್ದಾಗ, ಆ 
    ನಾಯಕರೆಂದರು:
      "ನಾನಾಗಿಯೆ  ಈ  ಸಲಹೆ  ಮಾಡ್ತಿದ್ದೆನೋ  ಇಲ್ಲವೋ. ಎನು  ಹೇಳಬೇಕೊಂತ
   ನನಗಿನ್ನೂ  ಸ್ವಷ್ಟವಾಗಿಲ್ಲ.ಬೇರೆ  ಕೆಲಸದ ಮೇಲೆ  ಹೋದ ಪಂಡಿತರೂ ಬಹಳ
   ದೂರದಲ್ಲಿದ್ದಾರೆ. ಅವರು  ಅಭಿಪ್ರಾಯ  ಈಗ ತಿಳಿಯೋಹಾಗಿಲ್ಲ .ಒಂದು  ರೀತೀಲಿ
  ನೀವು  ಹೇಳೋದು  ಸರಿ. ರೈತರಿಗೆ ನಿಮ್ಮ  ಮೇಲೆ  ವಿಶ್ವಾಸ  ಹೆಚ್ಚಾಗ್ತದೆ. ಅದರೆ,
  ನ್ಯಾಯಸ್ಥಾನದ  ವ್ಯವಹರಣೆ, ಆಗಬೇಕಾದ  ಕೆಲಸ,  ಇದನ್ನೆಲ್ಲ  ನೆನೆಸಿದಾಗ  ನೀವು
  ಭೂಗತರಾಗಿದ್ದರೇ  ಮೇಲು  ಅನಿಸ್ತದೆ."
  ಆದರೆ  ಜನರ  ದುಃಖ  ಕಂಡು  ಕುದಿಯುತ್ತಿದ್ದ  ಅಪ್ಪುವಿನ  ಹೃದಯ  ಪಟ್ಟುಹಿಡಿದು
  ಹೇಳಿತು:
  "ಕ್ಷಮಿಸಿ  ಸಂಗಾತಿ, ನಮ್ಮ  ಜನರೆಡೆಗೆ  ವಾಪ್ಸು  ಹೋಗ್ಲೇಬೇಕೂಂತ  ನಾವು
   ನಿರ್ಧಾರ  ಮಾಡಿದ್ದೇವೆ."
   ಅವರು ಒಂದು  ಕ್ಷಣ ಮೌನವಾಗಿದ್ದು  ಅಂದರು:
   "ಅಗಲೆ  ಹಾಗಾದರೆ. ಈ ರೀತಿ  ತೀರ್ಮಾನ  ಮಾಡಿದ್ದೀರಿ  ಅಂತ, ಜೈಲಿಗೆ  ಹೇಳಿ
   ಕಳಿಸ್ಲೇನು?"