ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಚಿರಸ್ಮರಣೆ ೨೩೯

  "ದುಡಿಯುವ ಜೀವಕ್ಕೆ ಬೇರೇನು ಬೇಕು ಹೇಳಿ? ಒಂದು  ಬೀಡಿ, ಒಂದು
 ಕಪ್ ಚಾ!"
   ಅಲ್ಲಿದ್ದವರಿಗೆ ಚಹಾದ ನೆನಪಾಗಿ ಕೆಲವರು ಗೊಣಗಿದಾಗ, ಆತ
 ಗೋಗರೆಯುತ್ತ ಹೇಳುತ್ತಿದ್ದ:
   "ಪೋಲೀಸರು ಎಲ್ಲಾ ಸರಿ.ಆದರೆ ಒಂದು ವಿಷಯದಲ್ಲಿ  ಮೋಸ ಮಾಡಿದ್ರು.
 ಆ ಹೋಟೆಲು ರಾಮುಣ್ಣೀನ ಅವರು ಹಾಗೇ ಬಿಡೋದೆ? ಆತನನ್ನೂ ಇಲ್ಲಿಗೆ
 ಕಳಿಸಿದ್ದಿದ್ರೆ,ಆಗ ತೋರಿಸ್ತಿದ್ದೆವು! ಏನು ಮಾಡೋಣ?"
                      ೬
 ಚಿರುಕಂಡ, ಅಪ್ಪು,ಮಾಸ್ತರು_ಈ ಮೂವರಿಗೆ ಕರೆ ಬಂತು, ಯಾರೋ ಭೇಟಿಗೆ 
 ಬಂದಿದ್ದರು.ಭೇಟಿಯ ಕೊಠಡಿಗೆ ಹೊರಡುತ್ತ ಮೂವರೂ ಯೋಚಿಸಿದರು;
 ಯಾರಿರಬಹುದು? ಹಿಂದಿನ ದಿನವಷ್ಟೇ ಕಯ್ಯೂರಿನಿಂದ ಮಗಳೊಡನೆ
 ದೇವಕಿಯೂ, ಮಗವನ್ನೆತ್ತಿಕೊಂದು ಜಾನಕಿಯೂ ಬಂದಿದ್ದರು.
    ಈಗ ಇಷ್ಟರಲ್ಲೆ ಮತ್ತೆ ಯಾರು? 
  ರಕ್ಷಣಾ ಸಮಿತಿಯವರು ಬಂದಿದ್ದರೂ ಇರಬಹುದೆಂದು ಊಹಿಸುತ್ತಲೇ ಆ
  ಮೂವರು ಕೊಠಡಿಯನ್ನು ಹೊಕ್ಕರು. ಜೇಲರು ಆಗಲೇ ಕುಳಿತಿದ್ದರು. ಆ ಭೇಟಿಯ
  ಮಟ್ಟಿಗೆ ತರಿಸಿದ್ದ ಕುಚಿ ಮೇಲೊಬ್ಬರಿದ್ದರು__ಎತ್ತರದ ದೇಹ, ಕೆಂಪು
  ಕೆಂಪಗಿನ ತುಂಬುಮುಖ, ಗುಂಗುರು ಕೂದಲು, ತೆರೆದುಕೊಂದು ನಗುತ್ತಲೇ ಇದ್ದ
  ತುಟಿಗಳು,ಕರಿಯ ಕೋಟು, ವಕೀಲರೆಂಬುದರಲ್ಲಿ ಸಂದೇಹವಿರಲಿಲ್ಲ.ಅವರ
  ಕೈಯಲ್ಲಿ ತೊಗಲಿನ ಚೀಲವಿತ್ತು.
    ಆ ಮೂವರು ಬಂದೊಡನೆ ವಕೀಲರು ಎದ್ದುನಿಂತು ತಮ್ಮ ಪರಿಚಯ
  ಮಾಡಿಕೊಟ್ಟರು:
 "ನಾನು ರಾಜಾರಾವ್,ವಕೀಲ, ನಿಮ್ಮ ಕಡೆಯ ವಕೀಲ..."
 ಮೂವರು ಅವರಿಗೆ ಕಮುಗಿದು ನಮಸ್ಕರಿಸಿದರು.
 ವಕೀಲರು ಎದ್ದು ನಿಂತುದು ಜೇಲರಿಗೆ ಸರಿಬೀಳಲಿಲ್ಲ.ಅವರು ಹೇಳಿದರು:
 "ನೀವು ಕೂತ್ಕಳ್ಳಿ ಮಿಸ್ಟರ್ ರಾಜಾರಾವ್."
 ಜೇಲರತ್ತ ನೋಡಿ ರಾಜಾರಾಯರು ವಿನಯದಿಂದ ಅಂದರು:
 "ಹೇಳೋದಕ್ಕೆ ಸಂಕೋಚವಾಗ್ತದೆ ಇವರೆ.ಇದು ಖಾಸಗಿ ಭೇಟಿಯಲ್ಲ.
ವಕೀಲನಾಗಿ ಕಗಳನ್ನ ನೋಡೋದಕ್ಕೆ ಬಂದಿದ್ದೇನೆ.ಈ ಸಂಭಾಷಣೆ ನೀವು