ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೨೬೧

ಬಾಗುವುದು ದೌರ್ಬಲ್ಯದ ಸಂಕೇತವಾದೀತೆಂದು, ಮೌನ ತಳೆಯಿತು. 
 ರಕ್ಷಣಾ ಸಮಿತಿಯವರು, ರಾಷ್ಟದ ಎಲ್ಲ ಕಡೆಗಳ ದೇಶಪ್ರೇಮಿಗಳು, ಕಯ್ಯೂರಿನ ಕುಟುಂಬಗಳು, ಗವರ್ನರ ಆಜ್ಞೆ ಏನೆಂದು ಬರುವುದೋ ಎಂದು ಇನ್ನೂ ಕಾದರು.

.........

ಆ ಅವಧಿಯಲ್ಲಿ ಭಾರತದ ರಾಜಕೀಯ ಆಕಾಶ ಕರಿಮೋಡಗಳಿಂದ ತುಂಬಿತು. ನಾಲ್ಕು ದಿಕ್ಕುಗಳಿಂದ ಬಿರುಗಾಳಿ ಬೀಸಿತು. ಕೋಲ್ಮಿ೦ಚು ಕಣ್ಣು ಕೋರೈಸಿತು. ಗುಡುಗುಗಳಿಂದ ಕಿವಿಯೊಡೆಯಿತು. ಮತ್ತೆ ಒಮ್ಮೆಲೆ, ಆಗಸ್ಟ್ ಒಂಭತ್ತರ ಮುಂಜಾನೆ, ಆಕಾಶವೆ ಬಿರುಕು ಬಿಟ್ಟು ನೀರು ಸೋರಿದಂತೆ, ಸಾಗರವೇ ಕಟ್ಟೆಯೊಡೆದಂತೆ, ಧೋಧೋ ಎಂದು ಮಳೆ ಸುರಿಯಿತು. ಬೀದಿ ಬೀದಿಗಳಲ್ಲಿ ಕೇರಿಕೇರಿಗಳಲ್ಲಿ ಆಗ ಹರಿದುದು ಜಲಪ್ರವಾಹದಂತೆ ಕಂಡ ಜನಪ್ರವಾಹ. ಅ ಹಿಂಸೆಯ ಮಾಯಾಬಲೆಯನ್ನು ಹರಿದು, ಜನರ ಬಡತೋಳುಗಳು ಭೀಮಬಾಹುಗಳಾದುವು. ಸಿಡಿದೆದ್ದ ಗುಲಾಮರ ನಡಿಗೆಯ ಸದ್ದು ಗಿರಿಕಂದರಗಳಲ್ಲಿ ಪ್ರತಿಧ್ಧನಿಸಿತು.
ತತ್ತರಿಸಿದ ಸರಕಾರ ಆಗ, ನ್ಯಾಯಸ್ಥಾನಗಳ ಕಾನೂನಿನ ಕ್ರಮಬದ್ದತೆಯ ಸೋಗನ್ನು ಬಿಟ್ಟು, ತನ್ನ ನಗ್ನರೂಪವನ್ನು ತೋರಿತು.
ಆ ಸ್ವಾತಂತ್ರ್ಯ ಹೋರಾಟದ ಮಹಾ ತೆರೆಗಳು ಸೆರೆಮನೆಯ ಪ್ರಾಕಾರಗಳಿಗೆ ಬಡೆದೇ ಬಡೆದುವು. ಒಳಗಿದ್ದವರು ಕಿವಿನಿಗುರಿಸಿ ಕೇಳಿದರು....ಜ್ಶೆಲು ಜನರಿಂದ
ತುಂಬಿತು.
ಅಂಥ ಒಂದು ದಿನ, ಕಯ್ಯೂರಿನ ನಾಲ್ವರ ಮೇಲಿನ ಫಾಶೀ ಶಿಕ್ಷೆಯನ್ನು ರದ್ದುಗೊಳಿಸಲು ನಿರಾಕರಿಸಿ ಮದರಾಸಿನ ಆಂಗ್ಲ ಗವರ್ನರು ಆಜ್ಞೆಮಾಡಿದ ಸುದ್ದಿ ಸೆರೆಮನೆ
ತಲುಪಿತು.
ಆಗ ಅಪ್ಪು ಚಿರುಕಂಡನನ್ನು ಕೇಳಿದ: 

"ಈ ಸಲವಾದರೂ ಮುಗಿದುದು ನಿಜವಷ್ಟೆ?"

ಚಿರುಕಂಡ ನಕ್ಕು ನುಡಿದ: "ಹೂ೦ ಇನ್ನು ಸಮಾಧಾನದಿ೦ದ ಒಬ್ಬರು ಇನ್ನೊಬ್ಬರ ಕೈಹಿಡಿದು ನಗುತ್ತಲೇಗಲ್ಲಿಗೇರೋಣ ಅಪ್ಪು!"

.....ಆದರೆ ಸರಕಾರಕ್ಕಿನ್ನೂ ಬಿಡುವಿರಲಿಲ್ಲ. ಆ ನಾಲ್ವರು ಫಾಶೀಶಿಕ್ಷೆ ಅನುಭವಿಸಬೇಕಾದ ದಿನವನ್ನು ಆಮೇಲೂ ಬಹಳ ಕಾಲ ಅದು ಗೊತು ಮಾಡಲಿಲ್ಲ.